Showing posts with label ರಾಘವೇಂದ್ರ ಗುಣಸಾಗರ ನೋಡೆನ್ನ ಹರಿಯ ತೋರಿನ್ನ indiresha RAGHAVENDRA GUNASAAGARA NODENNA HARIYA TORINNA. Show all posts
Showing posts with label ರಾಘವೇಂದ್ರ ಗುಣಸಾಗರ ನೋಡೆನ್ನ ಹರಿಯ ತೋರಿನ್ನ indiresha RAGHAVENDRA GUNASAAGARA NODENNA HARIYA TORINNA. Show all posts

Saturday, 4 December 2021

ರಾಘವೇಂದ್ರ ಗುಣಸಾಗರ ನೋಡೆನ್ನ ಹರಿಯ ತೋರಿನ್ನ ankita indiresha RAGHAVENDRA GUNASAAGARA NODENNA HARIYA TORINNA



ರಾಘವೇಂದ್ರ ಗುಣಸಾಗರ ನೋಡೆನ್ನಹರಿಯ ತೋರಿನ್ನ ಪ

ಮಂತ್ರಾಲಯದೊಳು ಮಂದಿರ ಮಾಡಿರುವಿ ಮನೆಮನೆಯಲ್ಲಿರುವಿಸಂತತಿ ಸಂಪತ್ತುಗಳನು ನೀ ಕೊಡುವಿಸಂತರ ರಕ್ಷಿಸುವಿತಂತ್ರ ದೀಪಿಕೆಯೆಂಬೊ ಗ್ರಂಥವರಚಿಸಿರುವಿ ಸೂತ್ರಾರ್ಥಗಳರುಹಿ 1

ಎಷ್ಟೋ ಗ್ರಂಥಗಳ ವ್ಯಾಖ್ಯಾನವ ಮಾಡಿದೇವಾರ್ಥವ ನೋಡಿಕೆಟ್ಟವಾದಿಗಳ ವಾದದಿ ಜಯಮಾಡಿಸೂರಿಗಳನು ಕೂಡಿಕುಷ್ಠಮದಾದಿ ರೋಗಗಳನು ಹರಿ ಬೇಡಿಕಳೆಯುವ ಗುರುಮೇಧಿ 2

ಒಂದು ಚರಿತೆಯ ಪೇಳಲು ನಾನರಿಯೆಇರುವೆನು ಈ ಪರಿಯೆನಂದಬಾಲನ ಪ್ರಿಯ ನೀ ಎನಗೊಲಿಯೆದುರಿತಾಬ್ಧಿಗೆ ಸರಿಯೇಇಂದಿರೇಶನ ಪದ ಸಂದರುಶನ ದೊರೆಯೆನಿನ್ನಯ ನಾ ಮರೆಯೆ 3
***
.ರಾಘವೇಂದ್ರ ಗುಣಸಾಗರ ನೋಡೆನ್ನ 
ಹರಿಯನು ತೋರಿನ್ನ ||ಪ||

ಮಂತ್ರಾಲಯದೊಳು ಮಂದಿರ ಮಾಡಿರುವಿ 
ಮನೆ ಮನೆಯಲ್ಲಿರುವಿ 
ಸಂತತಿ ಸಂಪತ್ತುಗಳನ್ನು ನೀ ಕೊಡುವಿ 
ಸಂತರ ರಕ್ಷಿಸುವಿ 
ತಂತ್ರದೀಪಿಕೆ ಎಂಬ ಗ್ರಂಥವ ರಚಿಸಿರುವಿ 
ಸೂತ್ರಾರ್ಥಗಳರುಹಿ ||೧||

ಎಷ್ಟೋ ಗ್ರಂಥಗಳ ವ್ಯಾಖ್ಯಾನವ ಮಾಡಿ  
ವೇದಾರ್ಥವ ನೋಡಿ 
ಕೆಟ್ಟ ವಾದಿಗಳ ವಾದದಿ ಜಯ ಮಾಡಿ 
ಸೂರಿಗಳನು ಕೂಡಿ 
ಕುಷ್ಠ ರೋಗಗಳ ಹರಿಯನು ನೀ ಬೇಡಿ 
ಕಳೆಯುವ ಗುರುಮೇಧಿ ||೨||

ಒಂದು ಚರಿತೆಯ ಪೇಳಲು ನಾನರಿಯೆ 
ಇರುವೆನು ಈ ಪರಿಯೇ 
ನಂದಬಾಲನ ಪ್ರಿಯ ನೀ ಎನಗೊಲಿಯೆ 
ದುರಿತಾಬ್ಧಿ ಸರಿಯೆ 
ಇಂದಿರೇಶನ ಪಾದ ಸಂದರುಶನ ದೊರೆಯೆ 
ನಿನ್ನನು ನಾ ಮರೆಯೇ ||೩||
***

Raghavendra gunasagara nodenna 
hariyanu torinna ||pa||

Mantralayadolu mandira madiruvi 
mane maneyalliruvi 
santati sampattugalannu ni koduvi 
santara rakshisuvi 
tantradipike emba granthava rachisiruvi 
sutrarthagalaruhi ||1||

Esto granthagala vyakhyanava madi  
vedarthava nodi 
ketta vadigala vadadi jaya madi 
surigalanu kudi 
kustha rogagala hariyanu ni bedi 
kaleyuva gurumedhi ||2||

Ondu chariteya pelalu nanariye 
iruvenu i pariye 
nandabalana priya ni enagoliye 
duritabdhi sariye 
indireshana pada sandarushana doreye 
ninnanu na mareye ||3||

***