ರಾಗ ತೋಡಿ. ಆದಿ ತಾಳ
ಬಣ್ಣಿಸಲಳವೆ ನಿನ್ನ ವೆಂಕಟರನ್ನ ||ಪ||
ಬಣ್ಣಿಸಲಳವೆ ಭಕ್ತವತ್ಸಲ ದೇವ
ಪನ್ನಗ ಶಯನ ಪಾಲ್ಗಡಲೊಡೆಯನೆ ದೇವ ||ಅ||
ಅಸಮ ಸಾಹಸಿ ಸೋಮಕನೆಂಬ ದನುಜನು
ಶಶಿಧರನ್ವರದಿ ಶಕ್ರಾದ್ಯರಿಗಳುಕದೆ
ಬಿಸಜಸಂಭವನ ಠಕ್ಕಿಸಿ ನಿಗಮವ ಕದ್ದು
ವಿಷಧಿಯೊಳಗಿರಲಾಗ ಬಂದಮರರು ||
ವಸುಧೀಶ ಕಾಯಬೇಕಂದೆನಲವನ ಮ-
ರ್ದಿಸಿ ವೇದಾವಳಿಯ ತಂದು ಮೆರೆದ ದಶ-
ದಿಸೆಯೊಳು ಬ್ರಹ್ಮಗಂದು ವೇದವ ಕರು-
ಣಿಸಿದೆ ಕಂಜಾಕ್ಷ ಕೇಶವ ದಯಾಸಿಂಧು ||
ಇಂದ್ರಾದಿ ಸಕಲ ದೇವತೆಗಳು ದೈತ್ಯ
ವೃಂದವೊಂದಾಗಿ ಮತ್ಸರವ ಮರೆದು ಕೂಡಿ
ಬಂದು ನೆರೆದು ಮುರಹರ ನಿನ್ನ ಮತದಿಂದ
ಮಂದರಾದ್ರಿಯ ಕಡೆಗೋಲ ಗೆಯ್ದತುಳ ಫ-
ಣೀಂದ್ರನ ತನು ನೇಣಿನಂದದಿ ಬಂಧಿಸಿ
ಸಿಂಧು ಮಥಿಸುತಿರಲು ಘನಾಚಲ -
ವಂದು ಮುಳುಗಿ ಪೋಗಲು ಬೆನ್ನಾಂತು ಮು-
ಕುಂದನೆ ಸಲಹಿದೆ ಸುರರು ಪೊಗಳಲು ||
ಖಳಶಿರೋಮಣಿ ಕನಕಾಕ್ಷನೆಂಬಸುರ ನಿ-
ಮ್ಮೊಳುಸೆಣೆಸುವೆನೆಂದು ತವಕದಿಂದಲಿ ಬಂದು
ಬಲದ ಕಡುಹಿನಿಂದಲಿ ಚೋರತನದಿಂದ
ಇಳೆಯ ಕದ್ದು ರಸಾತಳದೊಳಗಿರೆ ನಿನ್ನ
ಪೊಳೆವ ಕೋರೆಗಳಿಂದ ತಿವಿದು ಕೊಂದವನ-
ಪ್ಪಳಿಸಿ ದಿಂಡುಗೆಡಹಿ ಬೇಗದಿ ಅವನ
ಬಲವ ಕೆಡಿಸಿ ಮಡುಹಿ ಈ ಮಹೀ-
ಲಲನೆಯ ಕೈಗೊಂಡೆ ಸುರರನ್ನು ಸಲಹಿ ||
ಹಗಲಿರುಳಳಿವಿಲ್ಲ ಕನಕಕಶಿಪು ತನ್ನ
ಮಗನ ಹರಿಯ ತೋರೆಂದವನ ಬಾಧಿಸುತಿರೆ
ಚಿಗಿದು ಕಂಭವನೊಡೆದಧಿಕ ರೋಷಾಗ್ನಿ ಕಾ-
ರ್ಬೊಗೆ ಸೂಸಿ ಗಗನ ಮಂಡಲ ಧಗಧಗಧಗ
ಧಗಿಸಿ ಪ್ರಜ್ವಾಲೆಯುಗುಳಿ ಹಿರಣ್ಯಕನ ಕೂ-
ರುಗುರಿದೊಡಲ ಸೀಳಿ ರಕ್ತವಚೆಲ್ಲಿ
ಬಗೆದು ಕರುಳಮಾಲೆ ಧರಿಸಲು ನರ-
ಮೃಗರೂಪ ತ್ರಾಹಿಯೆಂದನು ಶಶಿಮೌಳಿ ||
ಕುಲಿಶಧರನ ಗೆದ್ದು ಕುವಲಯದಲಿ ಭುಜ-
ಬಲ ವಿಕ್ರಮನು ಸೌಭಾಗ್ಯಗಳುನ್ನತಿಯಿಂದ
ಬಲುವಾಜಿಮೇಧ ಗೆಯ್ಯಲು ವಟು ವೇಷವ
ತಳೆದು ತ್ರಿಪಾದ ಭೂಮಿಯ ದಾನವ ಬೇಡಿ
ಬಲಿಯ ಹಮ್ಮನು ಮುರಿಯಬೇಕೆಂದವನು ಕೊಟ್ಟ
ನೆಲನ ಈರಡಿ ಮಾಡಿದೆ, ಚರಣವನೆತ್ತಿ
ಜಲಜಜಾಂಡವನೊಡೆದೆ ಉಂಗುಷ್ಠದಿ
ಸುಲಲಿತ ಸುಮನಸನದಿಯನ್ನು ಪಡೆದೆ ||
ಪೊಡವಿಪರೊಳಗಗ್ಗಳೆಯ ಕಾರ್ತವೀರ್ಯ
ಕಡುಧೀರ ದೇವ ದೈತ್ಯರಿಗಂಜದವನ ಬೆಂ-
ಬಿಡದೆ ಸಂಗ್ರಾಮದೊಳಧಿಕ ಸಮರ್ಥನ
ಹೊಡೆದು ತೋಳ್ಗಳ ಕುಟ್ಟಿ ಕೆಡಹಿದಾಗಸದಳ
ಮೃಡ ಮುಖ್ಯ ದೇವ ಸಂತತಿ ನೋಡೆ ಕ್ಷತ್ರೇಶ
ಪಡೆಯ ನೆಲಕೆ ಸವರಿ, ಮಾತೆಯ ತಲೆ
ಕಡಿದು ತತ್ಪತಿಗೆ ತೋರಿ, ಪಿಡಿದೆ ಗಂಡು-
ಗೊಡಲಿಯ ಕರದಲಿ ಬಿರುದ ಘನ ಶೌರಿ ||
ದಶರಥರಾಜ ಕೌಸಲ್ಯೆರ ಮಗನಾಗಿ
ಋಷಿ ವಿಶ್ವಾಮಿತ್ರನಧ್ವರವ ರಕ್ಷಿಸಿ ಘನ
ವಿಷಕಂಠಧನುವ ಖಂಡಿಸಿ ಜಾನಕಿಯ ತಂದು
ತ್ರಿಶಿರ ದೂಷಣ ಖಳರಳಿದು ವಾಲಿಯನೊಂದು
ನಿಶಿತ ಶಸ್ತ್ರದಿ ಸಂಹರಿಸಿ ಸಾಗರವ ಬಂ-
ಧಿಸಿ ಲಂಕೆಯ ದಹಿಸಿ, ರಾವಣ ರ-
ಕ್ಕಸನನ್ನು ಕತ್ತರಿಸಿ, ವಿಭೀಷಣ
ಗೊಸೆದು ಪಟ್ಟವ ಕಟ್ಟಿ ಮೆರೆದೆಯೊ ಸಾಹಸಿ ||
ದೇವಕಿ ವಸುದೇವರಲಿ ಜನಿಸಿ ಲೋಕ
ಪಾವನ ಗೆಯ್ದು ಪನ್ನಗನ ಹೆಡೆಯ ಮೆಟ್ಟಿ
ಗೋವಳರ ಸಲಹಿ ಗೋವರ್ಧನ ಗಿರಿಯೆತ್ತಿ
ಮಾವ ಕಂಸನ ಕೊಂದು ಮಲ್ಲರ ಮರ್ದಿಸಿ ಸತ್ಯ-
ಭಾಮೆಗೆ ಸುರತರುವನು ಕಿತ್ತು ತಂದಿತ್ತ
ತಾವರೆ ದಳ ಸುನೇತ್ರ, ತ್ರಿಭುವನ
ಪಾವನ ಚರಿತ್ರ, ಶ್ರೀ ರುಕ್ಮಿಣಿ
ದೇವಿ ಮನೋಹರ ಸುಲಲಿತ ಗಾತ್ರ ||
ದುರುಳ ದಾನವರುಗಳಂದು ಖೇಚರದೊಳು
ಹರಿಹರ ಬ್ರಹ್ಮಾದಿಗಳಿಗಳವಡದೆ ಮು-
ಪ್ಪುರವ ರಚಿಸಿ ಮೂರು ಜಗಕುಪಹತಿ ಮಾಡು-
ತಿರೆ ಅನುಪಮ ರೂಪದಿ ನಿಂದು ದೈತ್ಯ ಸ್ತ್ರೀ-
ಯರ ಪಾತಿವ್ರತ್ಯವ ಭಂಗವ ಮಾಡಿ ಮು-
ಪ್ಪುರವನಳಿದ ನಿಸ್ಸೀಮ, ಅಖಿಳ ಶ್ರುತಿ-
ಯರಸಿ ಕಾಣದ ಮಹಿಮ, ಸಾಮಜರಾಜ
ವರದ ಸುಪರ್ಣವಾಹನ ಸಾರ್ವಭೌಮ ||
ಮಣಿಮಯ ಖಚಿತ ಆಭರಣದಿಂದೆಸವ ಲ-
ಕ್ಷಣವುಳ್ಳ ದಿವ್ಯ ವಾಜಿಯನೇರಿ ರಣದೊಳು
ಕುಣಿವ ಮೀಸೆ ಕೋರೆ ದಾಡೆ ಭೀಕರ ಘೋರ
ಬಣಗು ದೈತ್ಯರ ತಲೆ ಕಡಿದು ಎಸೆವ ಭೂತ-
ಗಣಕಾಹುತಿಯಿತ್ತು ಭೂಭಾರವಿಳುಹಿದೆ
ರಣಭಯಂಕರ ಪ್ರಚಂಡ, ಮೂಜಗದೊಳ-
ಗೆಣೆಗಾಣೆ ನಿನಗುದ್ದಂಡ, ಕಲ್ಕಿ ದಿನ-
ಮಣಿಕೋಟಿತೇಜ ದುಷ್ಕೃತಕುಲಖಂಡ ||
ಚಿತ್ತಜನಯ್ಯನೆ ಚಿನುಮಯರೂಪ ದೇ-
ವೋತ್ತಮ ವರ ಶಂಖಚಕ್ರ ಗದಾಂಬುಜ
ಉತ್ತಮಾಂಗದ ಮಣಿಮುಕುಟ ಕುಂಡಲ ಪ್ರಭೆ
ವ್ಯಕ್ತ ಕೌಸ್ತುಭ ಪೀತಾಂಬರ ಕಟಿಸೂತ್ರ ಶ್ರೀ-
ವತ್ಸಲಾಂಚನ ಕೇಯೂರ ಕಂಕಣಭೂಷ
ನಿತ್ಯ ವೈಕುಂಠವಾಸ-ನಾಗಿಹ ಪುರು-
ಷೋತ್ತಮ ಶ್ರೀನಿವಾಸ, ಪುರಂದರವಿಠಲ
ತಿರುಮಲೇಶ ಪಾಹಿ ಸರ್ವೇಶ ||
***
ಬಣ್ಣಿಸಲಳವೆ ನಿನ್ನ ವೆಂಕಟರನ್ನ ||ಪ||
ಬಣ್ಣಿಸಲಳವೆ ಭಕ್ತವತ್ಸಲ ದೇವ
ಪನ್ನಗ ಶಯನ ಪಾಲ್ಗಡಲೊಡೆಯನೆ ದೇವ ||ಅ||
ಅಸಮ ಸಾಹಸಿ ಸೋಮಕನೆಂಬ ದನುಜನು
ಶಶಿಧರನ್ವರದಿ ಶಕ್ರಾದ್ಯರಿಗಳುಕದೆ
ಬಿಸಜಸಂಭವನ ಠಕ್ಕಿಸಿ ನಿಗಮವ ಕದ್ದು
ವಿಷಧಿಯೊಳಗಿರಲಾಗ ಬಂದಮರರು ||
ವಸುಧೀಶ ಕಾಯಬೇಕಂದೆನಲವನ ಮ-
ರ್ದಿಸಿ ವೇದಾವಳಿಯ ತಂದು ಮೆರೆದ ದಶ-
ದಿಸೆಯೊಳು ಬ್ರಹ್ಮಗಂದು ವೇದವ ಕರು-
ಣಿಸಿದೆ ಕಂಜಾಕ್ಷ ಕೇಶವ ದಯಾಸಿಂಧು ||
ಇಂದ್ರಾದಿ ಸಕಲ ದೇವತೆಗಳು ದೈತ್ಯ
ವೃಂದವೊಂದಾಗಿ ಮತ್ಸರವ ಮರೆದು ಕೂಡಿ
ಬಂದು ನೆರೆದು ಮುರಹರ ನಿನ್ನ ಮತದಿಂದ
ಮಂದರಾದ್ರಿಯ ಕಡೆಗೋಲ ಗೆಯ್ದತುಳ ಫ-
ಣೀಂದ್ರನ ತನು ನೇಣಿನಂದದಿ ಬಂಧಿಸಿ
ಸಿಂಧು ಮಥಿಸುತಿರಲು ಘನಾಚಲ -
ವಂದು ಮುಳುಗಿ ಪೋಗಲು ಬೆನ್ನಾಂತು ಮು-
ಕುಂದನೆ ಸಲಹಿದೆ ಸುರರು ಪೊಗಳಲು ||
ಖಳಶಿರೋಮಣಿ ಕನಕಾಕ್ಷನೆಂಬಸುರ ನಿ-
ಮ್ಮೊಳುಸೆಣೆಸುವೆನೆಂದು ತವಕದಿಂದಲಿ ಬಂದು
ಬಲದ ಕಡುಹಿನಿಂದಲಿ ಚೋರತನದಿಂದ
ಇಳೆಯ ಕದ್ದು ರಸಾತಳದೊಳಗಿರೆ ನಿನ್ನ
ಪೊಳೆವ ಕೋರೆಗಳಿಂದ ತಿವಿದು ಕೊಂದವನ-
ಪ್ಪಳಿಸಿ ದಿಂಡುಗೆಡಹಿ ಬೇಗದಿ ಅವನ
ಬಲವ ಕೆಡಿಸಿ ಮಡುಹಿ ಈ ಮಹೀ-
ಲಲನೆಯ ಕೈಗೊಂಡೆ ಸುರರನ್ನು ಸಲಹಿ ||
ಹಗಲಿರುಳಳಿವಿಲ್ಲ ಕನಕಕಶಿಪು ತನ್ನ
ಮಗನ ಹರಿಯ ತೋರೆಂದವನ ಬಾಧಿಸುತಿರೆ
ಚಿಗಿದು ಕಂಭವನೊಡೆದಧಿಕ ರೋಷಾಗ್ನಿ ಕಾ-
ರ್ಬೊಗೆ ಸೂಸಿ ಗಗನ ಮಂಡಲ ಧಗಧಗಧಗ
ಧಗಿಸಿ ಪ್ರಜ್ವಾಲೆಯುಗುಳಿ ಹಿರಣ್ಯಕನ ಕೂ-
ರುಗುರಿದೊಡಲ ಸೀಳಿ ರಕ್ತವಚೆಲ್ಲಿ
ಬಗೆದು ಕರುಳಮಾಲೆ ಧರಿಸಲು ನರ-
ಮೃಗರೂಪ ತ್ರಾಹಿಯೆಂದನು ಶಶಿಮೌಳಿ ||
ಕುಲಿಶಧರನ ಗೆದ್ದು ಕುವಲಯದಲಿ ಭುಜ-
ಬಲ ವಿಕ್ರಮನು ಸೌಭಾಗ್ಯಗಳುನ್ನತಿಯಿಂದ
ಬಲುವಾಜಿಮೇಧ ಗೆಯ್ಯಲು ವಟು ವೇಷವ
ತಳೆದು ತ್ರಿಪಾದ ಭೂಮಿಯ ದಾನವ ಬೇಡಿ
ಬಲಿಯ ಹಮ್ಮನು ಮುರಿಯಬೇಕೆಂದವನು ಕೊಟ್ಟ
ನೆಲನ ಈರಡಿ ಮಾಡಿದೆ, ಚರಣವನೆತ್ತಿ
ಜಲಜಜಾಂಡವನೊಡೆದೆ ಉಂಗುಷ್ಠದಿ
ಸುಲಲಿತ ಸುಮನಸನದಿಯನ್ನು ಪಡೆದೆ ||
ಪೊಡವಿಪರೊಳಗಗ್ಗಳೆಯ ಕಾರ್ತವೀರ್ಯ
ಕಡುಧೀರ ದೇವ ದೈತ್ಯರಿಗಂಜದವನ ಬೆಂ-
ಬಿಡದೆ ಸಂಗ್ರಾಮದೊಳಧಿಕ ಸಮರ್ಥನ
ಹೊಡೆದು ತೋಳ್ಗಳ ಕುಟ್ಟಿ ಕೆಡಹಿದಾಗಸದಳ
ಮೃಡ ಮುಖ್ಯ ದೇವ ಸಂತತಿ ನೋಡೆ ಕ್ಷತ್ರೇಶ
ಪಡೆಯ ನೆಲಕೆ ಸವರಿ, ಮಾತೆಯ ತಲೆ
ಕಡಿದು ತತ್ಪತಿಗೆ ತೋರಿ, ಪಿಡಿದೆ ಗಂಡು-
ಗೊಡಲಿಯ ಕರದಲಿ ಬಿರುದ ಘನ ಶೌರಿ ||
ದಶರಥರಾಜ ಕೌಸಲ್ಯೆರ ಮಗನಾಗಿ
ಋಷಿ ವಿಶ್ವಾಮಿತ್ರನಧ್ವರವ ರಕ್ಷಿಸಿ ಘನ
ವಿಷಕಂಠಧನುವ ಖಂಡಿಸಿ ಜಾನಕಿಯ ತಂದು
ತ್ರಿಶಿರ ದೂಷಣ ಖಳರಳಿದು ವಾಲಿಯನೊಂದು
ನಿಶಿತ ಶಸ್ತ್ರದಿ ಸಂಹರಿಸಿ ಸಾಗರವ ಬಂ-
ಧಿಸಿ ಲಂಕೆಯ ದಹಿಸಿ, ರಾವಣ ರ-
ಕ್ಕಸನನ್ನು ಕತ್ತರಿಸಿ, ವಿಭೀಷಣ
ಗೊಸೆದು ಪಟ್ಟವ ಕಟ್ಟಿ ಮೆರೆದೆಯೊ ಸಾಹಸಿ ||
ದೇವಕಿ ವಸುದೇವರಲಿ ಜನಿಸಿ ಲೋಕ
ಪಾವನ ಗೆಯ್ದು ಪನ್ನಗನ ಹೆಡೆಯ ಮೆಟ್ಟಿ
ಗೋವಳರ ಸಲಹಿ ಗೋವರ್ಧನ ಗಿರಿಯೆತ್ತಿ
ಮಾವ ಕಂಸನ ಕೊಂದು ಮಲ್ಲರ ಮರ್ದಿಸಿ ಸತ್ಯ-
ಭಾಮೆಗೆ ಸುರತರುವನು ಕಿತ್ತು ತಂದಿತ್ತ
ತಾವರೆ ದಳ ಸುನೇತ್ರ, ತ್ರಿಭುವನ
ಪಾವನ ಚರಿತ್ರ, ಶ್ರೀ ರುಕ್ಮಿಣಿ
ದೇವಿ ಮನೋಹರ ಸುಲಲಿತ ಗಾತ್ರ ||
ದುರುಳ ದಾನವರುಗಳಂದು ಖೇಚರದೊಳು
ಹರಿಹರ ಬ್ರಹ್ಮಾದಿಗಳಿಗಳವಡದೆ ಮು-
ಪ್ಪುರವ ರಚಿಸಿ ಮೂರು ಜಗಕುಪಹತಿ ಮಾಡು-
ತಿರೆ ಅನುಪಮ ರೂಪದಿ ನಿಂದು ದೈತ್ಯ ಸ್ತ್ರೀ-
ಯರ ಪಾತಿವ್ರತ್ಯವ ಭಂಗವ ಮಾಡಿ ಮು-
ಪ್ಪುರವನಳಿದ ನಿಸ್ಸೀಮ, ಅಖಿಳ ಶ್ರುತಿ-
ಯರಸಿ ಕಾಣದ ಮಹಿಮ, ಸಾಮಜರಾಜ
ವರದ ಸುಪರ್ಣವಾಹನ ಸಾರ್ವಭೌಮ ||
ಮಣಿಮಯ ಖಚಿತ ಆಭರಣದಿಂದೆಸವ ಲ-
ಕ್ಷಣವುಳ್ಳ ದಿವ್ಯ ವಾಜಿಯನೇರಿ ರಣದೊಳು
ಕುಣಿವ ಮೀಸೆ ಕೋರೆ ದಾಡೆ ಭೀಕರ ಘೋರ
ಬಣಗು ದೈತ್ಯರ ತಲೆ ಕಡಿದು ಎಸೆವ ಭೂತ-
ಗಣಕಾಹುತಿಯಿತ್ತು ಭೂಭಾರವಿಳುಹಿದೆ
ರಣಭಯಂಕರ ಪ್ರಚಂಡ, ಮೂಜಗದೊಳ-
ಗೆಣೆಗಾಣೆ ನಿನಗುದ್ದಂಡ, ಕಲ್ಕಿ ದಿನ-
ಮಣಿಕೋಟಿತೇಜ ದುಷ್ಕೃತಕುಲಖಂಡ ||
ಚಿತ್ತಜನಯ್ಯನೆ ಚಿನುಮಯರೂಪ ದೇ-
ವೋತ್ತಮ ವರ ಶಂಖಚಕ್ರ ಗದಾಂಬುಜ
ಉತ್ತಮಾಂಗದ ಮಣಿಮುಕುಟ ಕುಂಡಲ ಪ್ರಭೆ
ವ್ಯಕ್ತ ಕೌಸ್ತುಭ ಪೀತಾಂಬರ ಕಟಿಸೂತ್ರ ಶ್ರೀ-
ವತ್ಸಲಾಂಚನ ಕೇಯೂರ ಕಂಕಣಭೂಷ
ನಿತ್ಯ ವೈಕುಂಠವಾಸ-ನಾಗಿಹ ಪುರು-
ಷೋತ್ತಮ ಶ್ರೀನಿವಾಸ, ಪುರಂದರವಿಠಲ
ತಿರುಮಲೇಶ ಪಾಹಿ ಸರ್ವೇಶ ||
***
pallavi
baNNIsalaLave ninna vEnkaTaranna
anupallavi
baNNIsalaLave bhaktavatsala dEva pannaga shayana pAlkaDaloDeyane dEva
caraNam 1
asama sAhasi sOmaganemba tanujanu shashidharavaradi shakrAdyarigaLukade
bisaja sambhavaLaThakkisi nigamava kaddu viSadiyoLagiralAgi bandamararu
vasudhIsha kAya bEkandenalavana mardisi vEdAvaLiya tandu mereda dasha
diseyoLu brahmagandu vEdava karuNiside kanjAkSa kEshava dayAsindhu
caraNam 2
indrAdi sakala dEvategaLu daitya vrndavondAgi matsarava maredu kUDi
bandu neredu murahara ninna matadinda mandarAtruya kaDegOla geidatuLa
phaNindrana tanu nENinandadi bandhisi sindhu mathisutiralu ghanAcala
endu muLugi pOgalu bennAntu mukundanae salahide suraru pogaLalu
caraNam 3
gaLa shirOmaNi kanakAkSanembasura nimmoLuseNesuvenendutavakadindali
bandu balada kaDuhinindali cOratanadinda iLeya kaddu rasAtaLadoLagire ninna
poLeva kOregaLinda tividu kondavanappaLisi diNDu geDahi bEkadi avana
balava keDasi maDuhi I mahIlalaneya kai koNDe surannu salahi
caraNam 4
hAgaliLaLivilla kanaka kashipu tanna magana hariya tOrendavana bAdhisutire
cigidu kambhavanoDedadhika rOSAgni kArbOge susi gagana maNDala thaka thaka thaka
thakisi prajvAle yuguLi hiraNyakana kUruguridoDala sILi raktavacelli
bagidu karuLamAle dharisalu nara mrga rUpa trAhiyendanu shashimauLi
caraNam 5
kulishadharana geddu kuvalayadali bhuja bala vikramanu heLebhAgyagaLunnadikeyinda
baluvAjimEdha geyyalu vaTu vESava taLedu tripAda bhUmiya dAnava bEDi
baliya hammanu muriya bEkendavanu koTTa nelana IraDi mADide caravaNanetti
jalaja jANDavanoDede unguSTadi sulalita sumanasa nadiyannu paDeda
caraNam 6
poDaviparoLagaggLeya kArtavIrya kaDu dhIra dEva daityariganjadavana
bembiDade sangrAmadoLadhika samarthana hoDedu tOLgaLa kuTTi keDahidAga sadana
mrDa mukhya dEva santati nODe kSatrEsha paDeya nelake savari mAteya tale
kaDidu tatpatige tOri piDide gaNDu koDaliya karadali biruda ghana shauri
caraNam 7
dasharatharAja kausalyera maganAgi rSi vishvAmitrana dhvarava rakSisi ghana
viSa kaNDadhanuva khaNDisi jAnakiya tandu trishira dUSaNakhaLaraLidu vAliyanondu
nishita shastradi samharisi sAgarava bandhisi lankeya dahisi rAvaNa rakkasanannu
kattarisi vibhISaNa gosedu paTTava kaTTi meredeyo sahasi
caraNam 8
dEvaki vasudEvarali janisi lOka pAvana geidu pannagana heDeya meTTi
gOvaLara salahi gOvardhana gIriyetti mAva kamsana kondu mallara mardisi satya-
bhAmage surataruvanu kittu tanditta tAvare daLa sunEtra tribhuvana
pAvana caritra shrI rukmiNi dEvi manOhara sulalita gAtra
caraNam 9
duruLa dAnavarugaLandu khEcaradoLu harihara brahmAdigaLigaLavaDade
muppurava racisi mUru jagakupahati mADutire anupama rUpadi nindu daitya
strIyara pAdi vratyava bhangava mADi muppuravanaLeda nissIma akhiLa
shrutiyarasi kANada mahima sAmajarAja varada suvarNa vAhana sArvabhauma
caraNam 10
maNimaya khacita AbharaNatindesava lakSaNavuLLa divya vAjiyanEri raNadoLu
kuNiva mIse kOre dADe bhIkara ghOra baNagu daityara tale kaDidu eseva bhUta
guNakAhutiyittu bhUbhAraviLuhide raNabhayankara pracaNDa mUjagadoLa
geNe kANe ninaguddaNDa kalki dinamaNi kOTi tEja duSkrtakula khaNDa
caraNam 11
citta janayyane cinumaya rUpa dEvOttama vara shankha cakra gadAmbuja
uttamAngada maNI mukuTa kuNDala prabhe vyakta kaustubha pItAmbara kaTisutra shrI
vatsalAnchana kEyura kankaNa bhUSa nitya vaikuNTha vAsanAgiha
puruSOttama shrInivAsa purandara viTTala tirumalEsha pAhi sarvEsha
***