Showing posts with label ಪಾಲಿಸೆನ್ನ ಪಾರ್ವತೀಪತೇ ಪಾವನಾತ್ಮ ಫಾಲನಯನ jayavittala. Show all posts
Showing posts with label ಪಾಲಿಸೆನ್ನ ಪಾರ್ವತೀಪತೇ ಪಾವನಾತ್ಮ ಫಾಲನಯನ jayavittala. Show all posts

Saturday, 28 December 2019

ಪಾಲಿಸೆನ್ನ ಪಾರ್ವತೀಪತೇ ಪಾವನಾತ್ಮ ಫಾಲನಯನ ankita jayavittala

ಮೈಸೂರು ಶ್ರೀನಿವಾಸದಾಸರ ಕೃತಿ 
 (ಜಯವಿಠಲ ಅಂಕಿತ ) 

 ರಾಗ ಆನಂದಭೈರವಿ          ಆದಿತಾಳ 

ಪಾಲಿಸೆನ್ನ ಪಾರ್ವತೀಪತೇ ಪಾವನಾತ್ಮ ।
ಫಾಲನಯನ ಪುಣ್ಯಮೂರುತೇ ॥ ಪ ॥
ಶೂಲಿಪಂಚ ಮೌಳಿ ರುಂಡ । ಮಾಲಿ ವರಕಪಾಲಿ ಚಂದ್ರ - ।
ಮೌಳಿ ಸುರರ । ಗೂಳಿ ಏರಿ ಮೆರೆವ ಗುರುವೆ ॥ ಅ ಪ ॥

ಅಂಧಕಾರಿ ಅಜನ ಮೋಹದಾ । ಕಂದ ಕರುಣಿ - ।
ಸೆಂದು ನಿನಗೆ ವಂದಿಪೆ ಸದಾ ॥
ವಂದಿಸೂವ ಭಕ್ತಜನರ । ಬಂಧುವೆಂದು ನಿನ್ನ ಪಾದ - ।
ದ್ವಂದ್ವ ವಂದಿಸೂವೆ । ತಂದೆ ವಿಷಯ ಬಂಧ ಕಡಿಯೋ ॥ 1 ॥

ಭೀಮ ಭವಭಯಾರ್ತಿನಾಶನಾ । ಭೂತಿರಾಯ ।
ವ್ಯೋಮಕೇಶ ವಿನುತ ದುರ್ಮನಾ ॥
ರಾಮನಾಮ ಜಪಸರಾವ । ಪ್ರೇಮದಿಂದ ಧರಿಸಿ ಮೆರೆವ ।
ವಾಮದೇವ ಸಹಿಲದಿಂದ ನಿ । ಸ್ಸೀಮ ಸುಗುಣಧಾಮ ರಾಮ ॥ 2 ॥

ಮಾತರೀಶ್ವನಿಗೆ ಪ್ರಿಯತಮ । ಶಿಷ್ಯ ಶರಣ - ।
ವ್ರಾತಕತಿ ನೀನೆ ಸುರದ್ರುಮ ॥
ಭೂತನಾಥ ಭುವನತಾತ । ದಾತ ಶ್ರೀಜಯವಿಠಲನಂಘ್ರಿ ।
ಆತಪತ್ರದಿಂದ ಮೆರೆವ । ಪಿಡಿಯೊ ತೀವ್ರ ಎನ್ನ ಕರವ ॥ 3 ॥
***********