Showing posts with label ಶ್ರೀರಘುಪ್ರೇಮತೀರ್ಥರ ಚಾರು ಚರಣವ raghurama vittala. Show all posts
Showing posts with label ಶ್ರೀರಘುಪ್ರೇಮತೀರ್ಥರ ಚಾರು ಚರಣವ raghurama vittala. Show all posts

Wednesday, 22 September 2021

ಶ್ರೀರಘುಪ್ರೇಮತೀರ್ಥರ ಚಾರು ಚರಣವ ankita raghurama vittala

 ಮುತ್ತಿಗಿ ಶ್ರೀ ಸ್ವಾಮಿರಾಯಾಚಾರ್ಯರ ಕೃತಿ

ಶ್ರೀ ರಘುಪ್ರೇಮ ತೀರ್ಥರ ಪೂರ್ವಾಶ್ರಮ ಪುತ್ರರು


ಶ್ರೀರಘುಪ್ರೇಮತೀರ್ಥರ ಚಾರು

 ಚರಣವ | 

ಬಾರಿಬಾರಿಗೆ ನಮಿಸಿ ಓಲೈಸುವೆ

|| ಪ. ||


ಮಾರಮಣನು ತನ್ನ ನಿಜದಾರಿ ತೋರೆಂದು | 

ಧಾರುಣಿಗೆ ಕಳುಹಿದನು ಮಹಿಮಹಿಮರ

|| ಅ. ಪ. ||


ಹಿಂದಿನಾಶ್ರಮದ ಸತ್ಕರ್ಮಗಳನ್ನು ಬಿಡದೆ | 

ಇಂದಿರೇಶನ ಧ್ಯಾನದಿಂದ ಮಾಡಿ ||

ಮಂದಮತಿಗಳ ಮನದ ಸಂದೇಹಗಳ್ಹರಿಸಿ | 

ಮುಂದೆ ಮಾರ್ಗವ ತೋರಿ ಬಂಧವ ಬಿಡಿಸುವ 

|| ೧ ||


ಹದಿನೆಂಟು ನೂರು ನಾಲ್ವತ್ತೆರಡನೇ ರೌದ್ರಿ | 

ಅಧಿಕ ಶ್ರಾವಣ ಕೃಷ್ಣ ಷಷ್ಟಿ ಶುಕ್ರವಾರ ||

ಮುದದಿ ತುರ್ಯಾಶ್ರಮ ಸ್ವೀಕರಿಸುತ ಮಠ | 

ಭೇದವಿಲ್ಲದಲೇ ತಪ್ತಮುದ್ರಾಗಳ್ಕೋಟ್ಟರೆಂಬೋ

|| ೨ ||


ದುಷ್ಟ ಮೋಹವ ತ್ಯಜಿಸಿ ವಿಷಯದಾಸೆಯ ಹಿರಿಸಿ | 

ಸೃಷ್ಟಿ ಸ್ಥಿತಿಗಾದಿ ಕಾರಣನಾದ ಜಗದೀ ||

ಶ್ರೇಷ್ಠ ಮೂರುತಿಯಾದ ರಘುರಾಮ ವಿಠಲ ನ | 

ನಿಷ್ಠೆಯಲಿ ಭಜಿಸಿ ಕರುಣವ ಪಡೆದಂಥಾ 

|| ೩ ||

***

ಶ್ರೀಆರ್ಯ ಅಕ್ಷೋಭ್ಯತೀರ್ಥ ಮಠಾಧೀಶರಾದ ಶ್ರೀ ಶ್ರೀಮದ್ರಘುದಾಂತತೀರ್ಥರು ಶ್ರೀ ಮುತ್ತಿಗಿ ಶ್ರೀ ನಿವಾಸಾಚಾರ್ಯರಿಗೇ (ಶ್ರೀ ಶ್ರೀ ಮದ್ರಘುಪ್ರೇಮ ತೀರ್ಥರಿಗೇ) ತಮ್ಮ ಗುರುಗಳು ಶ್ರೀ ಶ್ರೀಮದ್ರಘುಕಾಂತತೀರ್ಥರ ಅಭೀಷ್ಟದಂತೇ ಅವರ ಸಮಕ್ಷಮದಲ್ಲಿ ಯತ್ಯಾಶ್ರಮ ಪ್ರದಾನಮಾಡಿದ ಮಹೋತ್ಸವದ ದಿನ - ಶಾಲಿವಾಹನ ಶಕೆ ೧೮೪೨ನೇ ರೌದ್ರಿ ಸಂವತ್ಸರ ಅಧಿಕ ಶ್ರಾವಣ ವದ್ಯ (ಕೃಷ್ಣಪಕ್ಷ) ಷಷ್ಠಿ ಶುಕ್ರವಾರ(ಕ್ರೀ.ಶ. 05-08-1920).

"ನಮ್ಮ ಪ್ರೀತಿಯಾಗುವ ಹಸ್ತೋದಕವನ್ನೇ ನೀವು ಮಾಡುವಿರಷ್ಟೇ ! " ಎಂದು ಶ್ರೀ ಆರ್ಯ ಅಕ್ಷೋಭ್ಯತೀರ್ಥ ಮಠಾಧೀಶರಾದ ಶ್ರೀಶ್ರೀಮದ್ರಘುಕಾಂತತೀರ್ಥರು,ಶ್ರೀ ಮುತ್ತಿಗಿ ಶ್ರೀನಿವಾಸಾಚಾರ್ಯರಿಂದ ಮಾತು ತಗೊಂಡು, ತಮ್ಮ ಸಂಸ್ಥಾನಕ್ಕೆ ತಮ್ಮಿಂದ ಸನ್ಯಾಸಾಶ್ರಮ ಸ್ವೀಕಾರಮಾಡಬೇಕು,ಇದೇ ನಮ್ಮ ಪ್ರೀತಿಯ ಹಸ್ತೋದಕ ಎಂದು ಅಪೇಕ್ಷಿಸಿ, ತಮ್ಮ ಕರಕಮಲಸಂಜಾತರಾದ ಶ್ರೀ ಶ್ರೀಮದ್ರಘದಾಂತ ತೀರ್ಥರಿಂದ ಶ್ರೀ ಮುತ್ತಿಗಿ ಶ್ರೀನಿವಾಸಾಚಾರ್ಯರಿಗೆ ಶಾಲಿವಾಹನ ಶಕೆ ೧೮೪೨ನೇ ರೌದ್ರಿ ಸಂವತ್ಸರ ಅಧಿಕ ಶ್ರಾವಣ ವದ್ಯ (ಕೃಷ್ಣಪಕ್ಷ) ಷಷ್ಠಿ ಶುಕ್ರವಾರ ಸನ್ಯಾಸಾಶ್ರಮ ಕೊಡಿಸಿದರು. ಆ ಮರುದಿನ (ಸಪ್ತಮಿ) ಈ ನೂತನ ಸ್ವಾಮಿಗಳವರಿಗೆ ಶ್ರೀರಘುದಾಂತತೀರ್ಥರು ವಿದ್ಯುಕ್ತ ಪ್ರಕಾರ ಪ್ರಣವಮಂತ್ರೋಪದೇಶವನ್ನೂ, ದಂಡಕಮಂಡಲವನ್ನೂ ಕೊಟ್ಟು ತಲೆಯ ಮೇಲೆ ತಮ್ಮ ಮಠೀಯ ಮೂಲ ರಾಮಾದಿ ಪ್ರತಿಮಾಗಳನ್ನಿಟ್ಟು ಸಂಪ್ರದಾಯ ಪ್ರಕಾರ ಪಟ್ಟಾಭಿಷೇಕಮಹೋತ್ಸವವನ್ನು ಮಾಡುತ್ತ ಆನಂದ ಬಾಷ್ಪಗಳುದುರಿಸುತ್ತ, ಈ ನೂತನ ಯತಿಗಳನ್ನು ನಾವು 'ಪ್ರೇಮ' ಪೂರ್ವಕ ಸಂಸ್ಥಾನಾಧಿಪತಿಗಳನ್ನಾಗಿ ಮಾಡಿದ್ದೇವೆ. ಆದ್ದರಿಂದ ಇವರಿಗೆ "ಶ್ರೀರಘುಪ್ರೇಮತೀರ್ಥ"ರೆಂದು ನಾಮಕರಣ ಮಾಡಿದ್ದೇವೆ”. ಈ ಮಠದಲ್ಲಿ "ರಘು" ಎಂಬ ಪದ ಪ್ರಥಮ ಉಪಯೋಗಿಸುವ ರೂಢಿಯಿದ್ದ ಪ್ರಯುಕ್ತ ಅದರಂತೆ ಇವರಿಗೂ ಪ್ರಥಮಪದ "ರಘು” ಎನ್ನುವುದನ್ನು ಉಪಯೋಗಿಸಿ “ಪ್ರೇಮ” ತೀರ್ಥರೆಂಬ ಹೆಸರಿಟ್ಟರು. ಆ ದಿನ ಈ ಉತ್ಸವವನ್ನು ನೆರವೇರಿಸಿ “ರಘುಪ್ರೇಮತೀರ್ಥರಿಂದಲೇ ಸಂಸ್ಥಾನ ದೇವರ ಪೂಜಾ ಮಾಡಿಸುವವರಾಗಿ ಆ ಉಭಯ ಯತಿಗಳು (ಶ್ರೀ ರಘುಕಾಂತತೀರ್ಥರೂ ತಥಾ ಶ್ರೀರಘುದಾಂತತೀರ್ಥರೂ) ಉಪವಿಷ್ಟರಾಗಿ ಈ ನೂತನ ಯತಿಗಳು ಮಾಡುವ ಪೂಜಾಕ್ರಮವನ್ನು ನೋಡಿ) ಆನಂದಭರಿತರಾದರು.ತದಾರಭ್ಯ ಶ್ರೀ ಶ್ರೀಮದ್ರಘುಪ್ರೇಮತೀರ್ಥರು ಪೀಠದಲ್ಲಿ ಸಪ್ತ ವತ್ಸರಗಳು ವಿರಾಜಮಾನರಾಗಿ, ವೇದಾಂತಸಾಮ್ರಾಜ್ಯದ ಮುಖ್ಯಾಧಿಕಾರ ಹಾಗು ಕರ್ತವ್ಯಗಳೆನಿಸಿದ ಧ್ಯಾನ, ಪಾಠಪ್ರವಚನ ಹಾಗು ಸಜ್ಜನರಿಗೆ ವೈಷ್ಣವ ದೀಕ್ಷಾ, ಶೃತಿ ಸ್ಮೃತಿಪುರಾಣ ಸಮ್ಮತ ತಪ್ತಮುದ್ರಾಪ್ರದಾನ ಅನುಗ್ರಹಿಸಿದರು.ತದನಂತರ ಕಾರಣಾಂತರಗಳಿಂದ, ವಿರಕ್ತಶಿಖಾಮಣಿಗಳಾದ ಶ್ರೀ ಶ್ರೀ ರಘುಪ್ರೇಮತೀರ್ಥರು ಮಠಾಧಿಪತ್ಯವನ್ನು   ಬಿಟ್ಟು, ತಮ್ಮ ಕಾರ್ಯಕ್ಷೆತ್ರವಾದ ಆದವಾನಿಯಲ್ಲಿ ನೆಲೆನಿಂತರು.

ರಘುದಾಂತ ಮುನಿಯಿಂದ ಆಶ್ರಮವ ಕೈಗೊಂಡು
ರಘುನಾಥ ಪಾದಾಬ್ಬ ಮಧು ಸವಿದು ನಲಿಯುತ್ತ
ಸುಗುಣಿ ಶರಣಾರ್ಥಿಗಳ ಹರಸುತ ಸತ್ಪಂಥ ಶರಣರಿಗೆ ತೋರಿಸುತ್ತಾ
ಕುಗುಣಿಗಳ ಮಡಿಸುತ ವಿಗಡವನು ಸೂಚಿಸುತ
ಬಗೆಬಗೆಯ ಮಹಿಮೆಗಳ ಬೆಡಗುತ್ತ ಮಂಚಾಲೆ
ನಗರ ಬಳಿ ಆದೋನಿ ಪುರದಿ ವೃಂದಾವನದಿ ರಾಜಿಸುತ ಭಕ್ತಾಪೇಕ್ಷ!

************
ಶ್ರೀರಘುಪ್ರೇಮತೀರ್ಥರ ಚಾರುಚರಣವ | 
ಬಾರಿಬಾರಿಗೆ ನಮಿಸಿ ಓಲೈಸುವೆ ||ಪ.||

ಮಾರಮಣನು ತನ್ನ ನಿಜದಾರಿ ತೋರೆಂದು | 
ಧಾರುಣಿಗೆ ಕಳುಹಿದನು ಮಹಿಮಹಿಮರ ||ಅ.ಪ.||

ಹಿಂದಿನಾಶ್ರಮದ ಸತ್ಕರ್ಮಗಳನ್ನು ಬಿಡದೆ | 
ಇಂದಿರೇಶನ ಧ್ಯಾನದಿಂದ ಮಾಡಿ |
ಮಂದಮತಿಗಳ ಮನದ ಸಂದೇಹಗಳ್ಹರಿಸಿ| 
ಮುಂದೆ ಮಾರ್ಗವ ತೋರಿ ಬಂಧವ ಬಿಡಿಸುವ ||1||

ಹದಿನೆಂಟುನೂರು ನಾಲ್ವತ್ತೆರಡನೇ ರೌದ್ರಿ | 
ಅಧಿಕ ಶ್ರಾವಣ ಕೃಷ್ಣ ಷಷ್ಟಿ ಶುಕ್ರವಾರ |
ಮುದದಿ ತುರ್ಯಾಕ್ರಮ ಸ್ವೀಕರಿಸುತ ಮಠ | 
ಭೇದವಿಲ್ಲದಲೇ ತಪ್ತಮುದ್ರಾಗಳ್ಕೋಟ್ಟರೆಂಬೋ ||2||

ದುಷ್ಟ ಮೋಹವ ತ್ಯಜಿಸಿ ವಿಷಯದಾಸೆಯ ಹಿರಿಸಿ | 
ಸೃಷ್ಟಿಸ್ಥಿತಿಗಾದಿ ಕಾರಣನಾದ ಜಗದೀ |
ಶ್ರೇಷ್ಠ ಮೂರುತಿಯಾದ ರಘುರಾಮವಿಠಲನ | 
ನಿಷ್ಠೆಯಲಿ ಭಜಿಸಿ ಕರುಣವ ಪಡೆದಂಥಾ ||3||

✍️ त्रिविक्रम प्रह्लादाचार्यः

***