Wednesday 22 September 2021

ಶ್ರೀರಘುಪ್ರೇಮತೀರ್ಥರ ಚಾರು ಚರಣವ ankita raghurama vittala

 ಮುತ್ತಿಗಿ ಶ್ರೀ ಸ್ವಾಮಿರಾಯಾಚಾರ್ಯರ ಕೃತಿ

ಶ್ರೀ ರಘುಪ್ರೇಮ ತೀರ್ಥರ ಪೂರ್ವಾಶ್ರಮ ಪುತ್ರರು


ಶ್ರೀರಘುಪ್ರೇಮತೀರ್ಥರ ಚಾರು

 ಚರಣವ | 

ಬಾರಿಬಾರಿಗೆ ನಮಿಸಿ ಓಲೈಸುವೆ

|| ಪ. ||


ಮಾರಮಣನು ತನ್ನ ನಿಜದಾರಿ ತೋರೆಂದು | 

ಧಾರುಣಿಗೆ ಕಳುಹಿದನು ಮಹಿಮಹಿಮರ

|| ಅ. ಪ. ||


ಹಿಂದಿನಾಶ್ರಮದ ಸತ್ಕರ್ಮಗಳನ್ನು ಬಿಡದೆ | 

ಇಂದಿರೇಶನ ಧ್ಯಾನದಿಂದ ಮಾಡಿ ||

ಮಂದಮತಿಗಳ ಮನದ ಸಂದೇಹಗಳ್ಹರಿಸಿ | 

ಮುಂದೆ ಮಾರ್ಗವ ತೋರಿ ಬಂಧವ ಬಿಡಿಸುವ 

|| ೧ ||


ಹದಿನೆಂಟು ನೂರು ನಾಲ್ವತ್ತೆರಡನೇ ರೌದ್ರಿ | 

ಅಧಿಕ ಶ್ರಾವಣ ಕೃಷ್ಣ ಷಷ್ಟಿ ಶುಕ್ರವಾರ ||

ಮುದದಿ ತುರ್ಯಾಶ್ರಮ ಸ್ವೀಕರಿಸುತ ಮಠ | 

ಭೇದವಿಲ್ಲದಲೇ ತಪ್ತಮುದ್ರಾಗಳ್ಕೋಟ್ಟರೆಂಬೋ

|| ೨ ||


ದುಷ್ಟ ಮೋಹವ ತ್ಯಜಿಸಿ ವಿಷಯದಾಸೆಯ ಹಿರಿಸಿ | ಸೃಷ್ಟಿ ಸ್ಥಿತಿಗಾದಿ ಕಾರಣನಾದ ಜಗದೀ ||

ಶ್ರೇಷ್ಠ ಮೂರುತಿಯಾದ ರಘುರಾಮ ವಿಠಲ ನ | ನಿಷ್ಠೆಯಲಿ ಭಜಿಸಿ ಕರುಣವ ಪಡೆದಂಥಾ 

|| ೩ ||

***


No comments:

Post a Comment