..
kruti by Nidaguruki Jeevubai
ರಕ್ಷೆಸೆನ್ನ ಶ್ರೀಶನೆ ಲಕ್ಷ್ಮಿರಮಣದೇವ ಜಗದ್ರಕ್ಷ
ಕಮಲಾಕ್ಷ ಶ್ರೀಹರಿ ಪ
ನೊಂದೆನೊ ಭವಬಂಧದೊಳಗೆ ಸಿಂಧುಶಯನ
ಪೊರೆಯೊ ಜಗದ್ವಂದ್ಯ ಪಾದಕೆರಗಿ ನಮಿಸುವೆ 1
ಸುಂದರಾಂಗ ಹರಿಯೆ ಭಕ್ತವೃಂದ ಪೊರೆದು
ಕಾಯ್ವ ದೇವ ಸಿಂಧುಶಯನ ಶ್ರೀ ಮುಕುಂದನೆ 2
ಪಾಲಿಸೆನ್ನ ಪವನನಯ್ಯ ಪಾದಕೆರಗಿ ಮುಗಿವೆಕಯ್ಯ
ಲೋಲಲೋಚನೆಯರ ಪ್ರಿಯನೆ 3
ರಂಗನೆ ಉತ್ತುಂಗ ಮಹಿಮ ಮಂಗಳರೂಪ
ಪಾಂಡುರಂಗ ಕೃಪಾಪಾಂಗ ಶ್ರೀಹರಿ4
ಪಾಹಿ ಪಾಹಿ ಪಂಕಜಾಕ್ಷಿ ಪಾಹಿ ಲಕ್ಷ್ಮೀರಮಣ ಶ್ರೀಶ
ಪಾಹಿ ಕಮಲನಾಭ ವಿಠ್ಠಲನೆ 5
***