Showing posts with label ನೀನೇ ಮಾಡಿದ ಲೀಲೆ ಬಲು ಸುಖವೊ ಆನೇನು vijaya vittala. Show all posts
Showing posts with label ನೀನೇ ಮಾಡಿದ ಲೀಲೆ ಬಲು ಸುಖವೊ ಆನೇನು vijaya vittala. Show all posts

Wednesday 16 October 2019

ನೀನೇ ಮಾಡಿದ ಲೀಲೆ ಬಲು ಸುಖವೊ ಆನೇನು ankita vijaya vittala

ವಿಜಯದಾಸ
ನೀನೆ ಮಾಡಿದ ಲೀಲೆ ಬಲು ಸುಖವೊ |
ಆನೇನು ದು:ಖವನು ಬಡುವುದಿಲ್ಲವೋ ಜೀಯ |ಪ

ತೋಟವನು ಮಾಡಿಸಿ ಅದರೊಳಗೆ ಒಂದು ಫಲ |
ನಾಟಿಸಲು ಬೆಳೆದ ಫಲ ಪಕ್ವವಾಗೆ |
ನೀಟಾದ ಫಲವೆಂದು ಅರಸು ಕೊಯ್ ತರಿಸಲು
ತೋಟಿಗಾಗೇನು ದು:ಖ ಅರಸಿನಿಂಗೇನೈಯ1

ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ
ಅನಂತ ವೇದಗಳು ಪೊಗಳೂತಿವಕೊ
ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ
ಅನ್ಯಥಾವಾಗುವದೆ ಅನುಭವಾದಿಗಳಿಗೆ 2

ಸುಖ ದು:ಖವೆ ಎರಡು ನಿನ್ನ ವಶವಾಗಿದೆ
ಸಖನಾಗಿ ಸುಖ ಉಣಿಸಲು ಹಿಗ್ಗುವೆ
ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ
ಅಖಿಳ ನೀನಾವದಿತ್ತದೇ ಬಲು ಲೇಸು 3

ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ |
ನಾನು ವ್ಯಧಿಕರಣ ಪೇಳಿದರಾಯಿತೆ |
ಆನಂದಕೆ ಹ್ರಾಸ ಬರುವುದೆ ಶಾಶ್ವತ |
ಏನಾದರೇನು ನೀನಾಡಿದಾಟವೆ ಸಮ್ಮತ | 4

ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ |
ಉತ್ತಮಾ ಪದ ಉಂಟು ಪುಶಿಯಲ್ಲವೋ |
ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ |
ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ 5
*******