..
ಹಾಕುವೆ ಸುಮಾಲಾ ಸುಶೀಲಾ
ಸ್ವೀಕರಿಸೈ ಕರುಣಾಕರ ಕಂಠದಿ ಪ
ಅರಳಿದ ಮಲ್ಲಿಗೆ ಸುರಸು ಶಾವಂತಿಗೆ
ಪರಿಮಳ ಪುಷ್ಪದ ಸರವನು ಶಾವಂತಿಗೆ
ಪರಿಮಳ ಪುಷ್ಪದ ಸರವನು ವಿರಚಿಸಿ 1
ಜೀವದೊಡೆಯ ಪರದೇವತೆ ನೀನೆಂಬೊ
ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 2
ಶಾಮಸುಂದರ ನಿನ್ನ ನೇಮದಿ ನೆನೆವೆನು
ಭಾಮೆಯನಗಲದೆ ಪ್ರೇಮದಿ ಪೊರೆ ಎಂದು 3
***