Showing posts with label ನಗೆಯು ಬರುತಿದೆ ಎನಗೆ ನಗೆಯು ಬರುತಿದೆ purandara vittala NAGEYU BARUTIDE ENAGE NAGEYU BARUTIDE. Show all posts
Showing posts with label ನಗೆಯು ಬರುತಿದೆ ಎನಗೆ ನಗೆಯು ಬರುತಿದೆ purandara vittala NAGEYU BARUTIDE ENAGE NAGEYU BARUTIDE. Show all posts

Monday, 13 December 2021

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ purandara vittala NAGEYU BARUTIDE ENAGE NAGEYU BARUTIDE



ನಗೆಯು ಬರುತಿದೆ, ಎನಗೆ
ನಗೆಯು ಬರುತಿದೆ ||ಪ ||

ಜಗದೊಳಿರುವ ಮನುಜರೆಲ್ಲ
ಹಗರಣ ಮಾಡುವುದ ಕಂಡು || ಅ. ಪ||

ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರಳ ಎಣಿಸುತಿಹರ ಕಂಡು ||

ಪತಿಯ ಸೇವೆ ಬಿಟ್ಟು ಪರ-
ಪತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು ||

ಕಾಮ ಕ್ರೋಧ ಮನದೊಳಿಟ್ಟು
ತಾನು ವಿಷಯಪುಂಜನಾಗಿ
ಸ್ವಾಮಿ ಪುರಂದರ ವಿಟ್ಠಲನ
ನಾಮ ನೆನೆಯುವವರ ಕಂಡು ||
****

ರಾಗ ಪಂತುವರಾಳಿ ಏಕತಾಳ (raga, taala may differ in audio)

Nageyu barutide enage nageyu barutide

Jagadoliruva janarella hagarana maduvudane kandu

Parara vaniteyolumegolidu
Harushadinda avala beredu
Hariva nirolage mulugi
Beralanenisutihara kandu

Patiya seve bitti para
Patiya kude sarasavadi
Satata maiya toledu halavu
Vratava malpa satiya kandu

Hina gunada manadolittu
Tanu vishada punjanagi
Mauni purandaravithalanna
Dhyana maduvavana kandu
Tala beku takka mela beku santa
***

pallavi

nageyu barutide enage nageyu barutide

anupallavi

jagadoLiruva manujarella hagaraNa mADuvuda kaNDu

caraNam 1

parara vaniteyolume golidu haruSadinda avaLa beredu
hariva nIrinoLage muLugi beraLa eNisutihara kaNDu

caraNam 2

patiya sEve biTTu para patiya kUDe sarasavADi
satata samaya toLedu halavu vratava mALpa satiya kaNDu

caraNam 3

kAma krOdha manadoLiTTu tAnu viSaya bunjanAgi
svAmi purandara viTTalanna nAma neneyuvara kaNDu
***

P: enage nageyu barutide

A: jagadoLiruva Janarella hagarana MaDuvuda kandu


C1:heena gunava manadoLittu Tanu visha ----Nagi

Mouni purandharavithalana dhyana modo vavana kandu
***
 

Meaning: I feel like laughing (nage)

A: Seeing all the clever(Jana) people in this world being involved in wastful discussions(hagarana)

 

C1: (at those) who have lowly thoughts in their minds…. and in spite of it those who worship purandaravithala (I feel like laughing at them)
***

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ

ಜಗದೊಳಿರುವ ಜಾಣರೆಲ್ಲ ಹಗರಣ ಮಾಡುವುದನೆ ಕಂಡು

ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರೊಳಗೆ ಮುಳುಗಿ
ಬೆರಳನೆಣಿಸುತಿಹರ ಕಂಡು

ಪತಿಯ ಸೇವೆ ಬಿಟ್ಟಿ ಪರ
ಪತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು

ಹೀನ ಗುಣದ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಮೌನಿ ಪುರಂದರವಿಠಲನ್ನ
ಧ್ಯಾನ ಮಾಡುವವನ ಕಂಡು
*******