..by modalakallu sheshadasaru
ಗುರುವೆ ನಿಮ್ಮಯ ಕರುಣ ವೃಕ್ಷ ನೆಳಲೊಹೊರತಾದ ಕಾರಣದಿ ಹೀನನಾದೆ ಪ
ತ್ರೈತಿಯಲಿ ತಾರಾಖ್ಯ ದ್ವಾಪರದಿ ಉದ್ಧವ ಖ್ಯಾತಿ ದ್ರೋಣನು ಕಲಿಯುಗದಿ ನಾನಾ ||ಭೌತಿಕಗಳ ಧರಿಸಿ ಪ್ರಾರ್ಥಿಸಿದ ಸಜ್ಜನರಆರ್ತಗಳ ಪರಿಹರಿಸಿ ಸರ್ವಾರ್ಥಗರೆವ1
ಸುರವಂಶಕೆ ಮುಖ್ಯ ಗುರುವೆನಿಸಿ ಮೆರೆದೆಮರುತದೇವನ ದಯಕೆ ಪಾತ್ರನಾಗಿ ಹರಿಯ ಆನಂದಾಖ್ಯ ಶರಧಿ ಮುಣುಗಿದ ಮಹಾಪರಮ ಕರುಣಾನಿಧಿಯ ದೇವಮಣಿಯೆ2
ನೀ ಪ್ರಸನ್ನನಾಗೆ ಸಕಲ ವೈಭವದಿಂದ ಪ್ರಪೂಜ್ಯರೆನಿಸುವರು ಅಮರ ತತಿಯು ||ನೀ ಪರಾಂಙ್ಮಖನಾಗೆ e್ಞÁನ ಬಲ ಸಂಪದವುಲೋಪ ಐದುವರಯ್ಯ ಸರ್ವ ನಿರ್ಜನರು 3
ಆವಾವ ಕಾಲದಲಿ ನಿನ್ನ ದಯದಿಂದಲ್ಲಿದೇವಾರ್ತಿಗಳನೈದು (ದಿ) ಸೌಖ್ಯಬಡುವೆ ||ಕಾವ ಕರುಣೆಯೆ ಎನ್ನ ಅವಗುಣಗಳೆಣಿಸದಲೆಸಾವಧಾನದಲೆನ್ನ ಸಲಹಬೇಕು4
ಬಾಲಕನ ಅಪರಾಧ ಅನಂತವಿರಲಿನ್ನುಪಾಲಿಸಬೇಕಯ್ಯ ನೈಜಗುರುವೆ ||ಪಾಲಸಾಗರಶಾಯಿ ಗುರು ವಿಜಯ ವಿಠ್ಠಲರೇಯಕಾಲಕಾಲಕೆ ಅಗಲದಂತೆ ವರವೀಯೋ 5
****