Showing posts with label ವರದೇಂದ್ರ ಗುರು ನಿಮ್ಮ ಚರಣ varadesha vittala varadendra teertha stutih. Show all posts
Showing posts with label ವರದೇಂದ್ರ ಗುರು ನಿಮ್ಮ ಚರಣ varadesha vittala varadendra teertha stutih. Show all posts

Sunday, 1 August 2021

ವರದೇಂದ್ರ ಗುರು ನಿಮ್ಮ ಚರಣ ankita varadesha vittala varadendra teertha stutih

 ..

kruti by ವರದೇಶ ವಿಠಲರು varadesha vittala dasaru

ಶ್ರೀ ವರದೇಂದ್ರಾಖ್ಯಾನ ಉತ್ಸವ ವರ್ಣನೆ


ವರದೇಂದ್ರಗುರು ನಿಮ್ಮ ಚರಣ ಸÀರಸಿರುಹಸಾರಿದೆ

ಪೊರೆಯುವದೈ

ಇರುಳುಹಗಲು ತವಸ್ಮರಿಸುತಲಿಹ ಭಕು -

ತರಿಗಿಹ ಪರಸುಖಸುರಿಸುವ ಶ್ರೀ ಗುರು ಪ


ಲಿಂಗಸುಗುರುನಿವಾಸ ಭಕ್ತ ಜಂಗುಳಿ ದುರಿತವಿನಾಶ

ಮಂಗಳ ಚರಿತ ಮೌನೀಶ ವಿಹಂಗವಾಹನ ನಿಜದಾಸ 1


ವಸುಧೀಂದ್ರಕರಸಂಜಾತ ಸಿರಿ ವಸುಧಿಜಾಪತಿ ಪದದೂತ

ವಸುಧಿಯೊಳಗೆ ವಿಖ್ಯಾತ ಸುಮನಸರ ಸುವಂಶಜನೀತ 2


ಚಲುವರಾಮ ಪದಲೋಲ ಶ್ರೀ ತುಲಸೀ

ಸುದರುಶನ ಮಾಲಾ

ಗಳದಿ ಧರಿಸಿಹ ಸುಶೀಲಾಕÀಲಿ ಮಲದ

ಕಲುಷ ನಿರ್ಮೂಲಾ 3


ವಾಯುಮತಾಬ್ಧಿವಿಹಾರಾ ಕಾಷಾಯ ಕಮಂಡಲಧಾರಾ

ಮಾಯಿ ಜಲಜ ಚಂದಿರ ಗುರುರಾಯರ ಮಹಿಮೆಯಪಾರಾ 4


ಪಂಡಿತಮಂಡಲಭೇಶ ಪಾಖಂಡಿಮತೋರುಗವೀಶ

ಪುಂಡರಖಂಡಿಪ ಕುಲಿಶ ತನ್ನ ತೊಂಡನೆಂದವರಘನಾಶ 5


ಜ್ಞಾನಾನಂದದ ಖಣಿಯೋ ಅಜ್ಞಾನದ ತಿಮಿರ ತರಣಿಯೊ

ಆನತ ಚಿಂತಾಮಣಿಯೋ ಪಾಪಕಾನನ

ಕನಳನೀ ಮುನಿಯೋ 6


ವೈರಾಗ್ಯದಿ ಪಶುಪತಿಯೊ ಗಾಂಭೀರ್ಯದಿ

ಸುರನದಿಪತಿಯೊ

ಧೈರ್ಯದಿ ಭೂಭತ್ಪತಿಯೊ ಚಾತುರ್ಯದಿ ವರಬ್ರಹ್ಮಸ್ಪøತಿಯೊ 7


ದಾನದಿರವಿಜನೆನಿಪನು ಸುವಿಧಾನದಿ ಕ್ಷಿತಿಯ ಪೋಲುವನು

ಮೌನದಿ ಶುಕಮುನಿವರನು ಅಸಮಾನಯೋಗಿ ಎನಿಸುವನು 8


ಹರಿಸ್ಮರಣಿಯಲಿರುತಿರುವ ನರಹರಿನಿಂದಿಪ ಮತತರಿವ

ಹರಿಪನೆಂಬರೆ ಪೊರೆವ ಶ್ರೀ ಹರಿಯಿವರಗಲದಲಿರುವ9


ಪ್ರಾಣೇಶ ದಾಸರೆನಿಪರು ಶ್ರೀ ಶ್ರೀನಿವಾಸನ ವಲಿಸಿಹರು

ಜ್ಞಾನಿಗಳಿಗೆಅತಿ ಪ್ರೀಯರು ಅಸಮಾನದಾಸರೆನಿಸುವರು 10


ವರಕÀವಿ ಶ್ರೀ ಜಗನ್ನಾಥಾರ್ಯರ ಕರುಣ ಪಡೆದನವರತ

ಧರಣಿಯೊಳಗೆ ವಿಖ್ಯಾತ ನರಹರಿ ಯಸ್ಮರಿಸುತಿಹ ನಿರುತ 11


ಹಿಂದಿನಸುಕೃತದಿ ಫಲದಿ ವರದೆಂದ್ರಾರ್ಯರು ವಂದಿನದಿ

ಚಂದದಿ ದಾಸಗೃಹದಿ ನಡೆತಂದರು ಬಹುಸಂಭ್ರಮದಿ12


ಬಿನ್ನೈಸಿದ ಭಕುತಿಂದ ಮುನಿಮಾನ್ಯದರುಶನದಿಂದ

ಧನ್ಯಧನ್ಯನಾನೆಂದ ಪಾವನ್ನವಾಯ್ತು ಕುಲವೆಂದ 13


ದಾಸಾರ್ಯರ ಭಕುತಿಯನು ನಿರ್ದೋಷವಾದ ಜ್ಞಾನವನು

ಸೋಸಿಲಿ ಗೈವ ಸೇವೆಯನು ನೋಡಿ

ತೋಷಬಡುತ ಮುನಿವರನು 14


ಶ್ರೇಷ್ಠನಾದಯತಿವರನು ಉತ್ಕøಷ್ಟವಾದಸ್ಥಳವನ್ನು

ಕೃಷ್ಣಾರ್ಪಣವೆನುತಿದನು ಕೊಡೆ ತುಷ್ಟಿಯು

ನಮಗೆನುತಿಹನು15


ದೇಶಕರಿಂಗಿತವರಿದು ವರದಾಸಾರ್ಯರು ಕೈಮುಗಿದು

ಈ ಶರೀರತಮ್ಮದೆಂದು ಮಧ್ವೇಶಾರ್ಪಣವೆಂತೆಂದು 16


ವಪ್ಪಿದ ತರುವಾಯದಲಿ ಮುನಿಸರ್ಪಶಯ್ಯನ ಸ್ಮರಿಸುತಲಿ

ತಪ್ಪದೆ ಸರ್ವದೇಶದಲಿ ತಾಕಪ್ಪವ ಕೊಳುತಲ್ಲಲ್ಲಿ 17


ಕೆಲಕಾಲದಿ ಪುಣೆಯಲ್ಲಿ ಸಿರಿ ನಿಲಯನಂಘ್ರಿ ಸ್ಮರಿಸುತಲಿ

ಕಳೇವರ ತ್ಯಜಿಸಿದರಲ್ಲಿ ಆಬಳಿಕ ಲಿಂಗಸುಗೂರಲ್ಲಿ 18


ತುಲಸಿ ವೃಕ್ಷರೂಪದಲ್ಲಿ ಇಲ್ಲಿನೆಲೆಸಿಹವೆಂದು ಸ್ವಪ್ನದಲಿ

ಗಂಜಿಯ ಮರಡಿಯಲಿ ಇದ್ದಶಿಲೆ ತರಿಸೆಂದು ಪೇಳುತಲಿ 19


ಬಣವಿಯ ತ್ವರ ತೆಗೆಸುತಲಿ ತರುಮನುಜನಸರಿನೋಡುತಲಿ

ಮುನಿ ವಚನವನಂಬುತಲಿ ಶಿಲೆಯನು ತಂದಿರಿಸಿದರಿಲ್ಲಿ 20


ವರಭುವನೇಂದ್ರ ಮುನಿಪನುಜುಮ್ಲಾ

ಪುರುದಲಾಗಯಿರುತಿಹನು

ತ್ವರದಿಂದಲಿ ಕಳುಹಿದನು ನರಹರಿ ಸಾಲಿಗ್ರಾಮವನು 21


ವರಪುಣ್ಯ ಕ್ಷೇತ್ರದಲಿಂದ ಮುನಿವರ ತಾನಿಲ್ಲಿಗೆ ಬಂz

ಶರಣರ ಪಾಲಿಪೆನೆಂದ ಸುಖಗರೆಯುತ ಅಲ್ಲಿಯೆ ನಿಂದ 22


ಸುಂದರಪಾದುಕೆಗಳನು ಪುಣೆಯಿಂದಿಲ್ಲಿಗೆ ತರಿಸಿದನು

ವಂದಿಸುವವರ ಘಗಳನ್ನು ತ್ವರದಿಂದ ತರಿದು ಪೊರೆಯುವನು 23


ದಾಸಕುಲಾಗ್ರಣಿಯನಿಪ ಪ್ರಾಣೇಶ ಕರಾರ್ಚಿತ ಮುನಿಪ

ದೇಶಿಕ ವರರೆಂದೆನಿಪ ರಘುಜೇಶ ಪದಾಂಬುಜ ಮಧುಪ 24


ವೃಂದಾವನದಿ ನಿಂದಿರುವ ರಾಘವೇಂದ್ರರ ಧ್ಯಾನದಲಿರುವ

ಅಂದಣೇರಿ ತಾಮೆರೆವ ಭಕ್ತವೃಂದವ ಕಾದುಕೊಂಡಿರುವ 25


ಪ್ರತಿಗುರುವಾಸರದಲ್ಲಿ ಜನತತಿ ಸಂಭ್ರಮದಿಂದಿಲ್ಲಿ

ಮಿತಿಯಿಲ್ಲದೆ ಭಕುತಿಯಲಿ ನಲಿಯುತ ವಾಲ್ಗೈಸುವರಿಲ್ಲಿ 26


ಪ್ರತಿ ಪ್ರತಿ ವತ್ಸರದಲ್ಲಿ ಗ್ರೀಷ್ಮಋತು ಆಷಾಢಮಾಸದಲ್ಲಿ

ತಿಥಿ ಷಷ್ಟಿಯ ದಿವಸದಲಿ ದ್ವಿಜತತಿ ಸುಭೋಜನ ವಿಲ್ಲಿ 27


ಮರುದಿವಸದ ಸಂಭ್ರಮವು ಶ್ರಿಂಗರಿಸಿದ ರಥದುತ್ಸವವು

ಪರಿಪರಿ ಜಸಂದಣಿಯು ಇದು ವರಣಿಪುದಕೆ ದುಸ್ತರವು 28


ಯತಿವರ ಪರಮಾನಂದದಿಂದ ರಥವೇರಿ ಬರುವದು ಚಂದ

ಅತಿಹರುಷದಿ ಜನವೃಂದಗುರು ಸ್ತುತಿಮಾಳ್ಪದು ಮುದದಿಂದ 29


ಮ್ಯಾಳದವರ ಗಡಿಬಿಡಿಯು ವಾದ್ಯತಾಳ

ಝಾಂಗಟಿ ದಮ್ಮುಡಿಯು

ಕಾಲುಗೆಜ್ಜೆಕಟ್ಟಿದಡಿಯುದಿವ್ಯ ಮೇಲು ಸರದ ಪದನುಡಿಯು 30


ಭೇರಿ ಭಜಂತ್ರಿ ತುತ್ತೂರಿಗಂಭೀರದಿ ಹೊಡೆವನಗಾರಿ

ಭಾರಿಪಶಂಖನ ಪೂರಿಧ್ವನಿಗಾರದು ಅಂಬರ ಮೀರಿ 31


ಹಲವು ಪುಷ್ಪ ಹಾರಗಳು ಪರಿಮಳ ಪರಿ ಪರಿಧೂಪಗಳು

ಫಲÀಗಳನೈವೇದ್ಯಗಳು ಮಂಗಳ ಕರ್ಪೂರ ದೀಪಗಳು 32


ಹೊಳೆವ ಚವರ ಛತ್ರಿಗಳು ಥಳ -

ಥಳಿಪ ಪತಾಕಿ ಬೆತ್ತಗಳು

ಮಳೆಗರೆಯುವ ಕುಸುಮಗಳು ಇಳೆಯೊಳಗೀಯುತ್ಸವ

ಮಿಗಿಲು 33


ಸಂತಜನರ ಜಯಘೋಷ ಅತ್ಯಂತ ಮನಕೆ ಸಂತೋಷ

ಮಂತ್ರಮಂದಿರದಂತೆ ಭಾಸ ಇತ ನಿಂತು

ಕುಣಿಯುತಿಹ ಶೀಶ 34


ಕಂತುಪಿತನದಯದಿಂದ ಇಲ್ಲಿ ನಿಂತಿಹ ಸುರರಾನಂದ

ಎಂತೊರಣಿಪೆ ಮತಿಮಂದ ದುರಂತ ನಿಮ್ಮಯ ಗುಣವೃಂದ 35

ಜಯ ಜಯವೆಂದು ಪಾಡುವರು

ಸುವಿನಯದಿಂದ ನಮಿಸುವರು

ಭಯವನು, ಈಡಾಡುವರು ತಮ್ಮಬಯಕೆ ಪೂರೈಸಿಕೊಳ್ಳುವರು 36


ಜ್ವರಛಳಿ ವ್ಯಾಧಿ ಪೀಡಿತರು ಮತ್ತುರಗವೃಶ್ಚಿಕದಂಶಿಕರು

ತರುಳರಿಲ್ಲದ ಬಂಜೆಯರು ಮೂಕಕುರುಡ

ಕುಂಟರು ಬಧಿರÀರು 37


ಪರಿಪರಿಗ್ರಹಪೀಡಿತರು ಬಹುಪರಿ ಶುಭಕಾಮಿಪ ಜನರು

ಪರಿಪರಿ ಸೇವಿಸುತಿಹರು ತಮ್ಮ ಹರಕೆ

ಪೊರೈಸಿಕೊಂಬುವರು 38


ಸಾಷ್ಟಾಂಗದಿ ವಂದಿಪರು ಅಭಿಷ್ಟೇಯ ಪಡೆದುಕೊಳ್ಳುವರು

ಕಷ್ಟಗಳನು ನೀಗುವರು ಸಂತುಷ್ಟರಾಗಿ ತೆರಳುವರು 39


ಇದುಪುಣ್ಯಕ್ಷೇತ್ರ ವೆನಿಸಿತು ಶ್ರೀಪದುಮೇಶಗಾವಾಸಾಯ್ತು

ಸದಮಲ ದಿವಿಜರು ನಿಂತು ಇಲ್ಲಿ

ಮುದದಿಂದನಲಿಯುವರಾಂತು 40


ಈಸುಪದ ಪೇಳ್ವನೆಧನ್ಯ ಜಗದೀಶನ ತುತಿಸಿದ ಪುಣ್ಯ

ದೇಶಿಕಪತಿ ಮುನಿಮಾನ್ಯ ವರದೇಶ ವಿಠಲಾಗ್ರಗಣ್ಯ 41

***