..
kruti by ವೀರನಾರಾಯಣ Veeranarayana
ನಾನೇನು ನಿನಗೆಂದೆನೊ ಶ್ರೀಹರಿಯೆನಾನಿನಗೇನೆಂದೆನೊ ಪ
ನಾನೇನು ನಿನಗೆಂದೆ ನೀನಿಂತು ನನ್ನದುಧ್ಯಾನವ ಬಿಡಿಸಲು ಜ್ಞಾನಿಗಳರಸನೆ ಅ.ಪ.
ಕರುಣಿ ನೀನೆಂತೆಂಬೋದು ನನಗೆ ಇನ್ನುಭರವಸೆ ಇಲ್ಲೆಂಬೆನೋಕರುಣಿ ನೀನಾದರೆ ಪರಿಪರಿ ಬೇಡಲುಕರುಣೆ ತೋರದೆ ಇರುವದು ಸರಿಯೇನೊ 1
ಭಕ್ತನು ನಾನಲ್ಲವೇನೊ ನಿನ್ನೊಳಗನುರಕ್ತಿ ಮಾಡುವದಿಲ್ಲೇನೋಮುಕ್ತಿ ಮಾಡಲು ಮತ್ತೆ ರಿಕ್ತ ಕರಣನೆಂಬ ಉಕ್ತಿ ಸುಳ್ಳೇನೋ2
ಸ್ಮರಿಸಲು ದುರಿತಗಳ ತರಿವನುಡಿಬರಿದೆನ್ನ ಬಗೆಗಾಯ್ತೆನೊಧರೆಯೊಳು ಗದುಗಿನ ವೀರನಾರಾಯಣಬಿರುಸು ನನ್ನ ನುಡಿ ಬರೆಯಲ್ಲವೇನೋ 3
***