Showing posts with label ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ karigireesha ENU PUNYAVA MAADI NAANINDU NINNA KANDE. Show all posts
Showing posts with label ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ karigireesha ENU PUNYAVA MAADI NAANINDU NINNA KANDE. Show all posts

Saturday 2 October 2021

ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ ankita karigireesha ENU PUNYAVA MAADI NAANINDU NINNA KANDE

ರಚನೆ : ಕರಿಗಿರಿ ದಾಸರು 

ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ ದೀನವತ್ಸಲ ಸ್ವಾಮಿ ಕೃಷ್ಣ |

ಜ್ಯಾನಗಮ್ಯನೇ ನಿನ್ನ ಕಾಣಲು ಮನದಲ್ಲಿ ಮುನಿವರರು ನಿತ್ಯ ಧ್ಯಾನ ಮಾಡುವರಯ್ಯ ||

ಶ್ರುತಿ-ಶಾಸ್ತ್ರಗಳನೋದಿ ಮಥನವ ಮಾಡುವೆ ಮತಿ ಸಾಧನದಿಂದ ನಿನ್ನರಸುವರೋ |

ಪತಿತ ಪಾವನ ನಿನ್ನ ಕರುಣಾ ಒಂದಿಲ್ಲದಿರೆ ಇತರ ಸಾಧನವೆಲ್ಲ ಗತಿದೊರದೊ ಸ್ವಾಮಿ || ೧ ||

ಏನೊಂದು ಸಾಧನ ಅರಿಯದ ನನಗೀಗ ನೀನಾಗಿ ದಯಮಾಡಿ ಮೈದೋರಿದೆ |

ಏನು ಧನ್ಯನೊ ನಾನು ಆನಂದಕ್ಕೇನೆಗಾಣಿ ದಾನವಾಂತಕ ಸ್ವಾಮಿ ಕರಿಗಿರೀಶನೇ ಕೃಷ್ಣ || ೨ ||

***

ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ ದೀನವತ್ಸಲ ಸ್ವಾಮಿ ಕೃಷ್ಣ |

ಜ್ಯಾನಗಮ್ಯನೇ ನಿನ್ನ ಕಾಣಲು ಮನದಲ್ಲಿ ಮುನಿವರರು ನಿತ್ಯ ಧ್ಯಾನವ ಮಾಡುವರಯ್ಯ || PA ||

ಶ್ರುತಿ–ಶಾಸ್ತ್ರಗಳನೋದಿ ಮಥನವ ಮಾಡುವೆ ಮತಿ ಸಾಧನದಿಂದ ನಿನ್ನರಸುವರೋ |

ಪತಿತ ಪಾವನ ನಿನ್ನ ಕರುಣಾ ಒಂದಿಲ್ಲದಿರೆ ಇತರ ಸಾಧನವೆಲ್ಲ ಗತಿದೊರದೊ ಸ್ವಾಮಿ || ೧ ||

ಏನೊಂದು ಸಾಧನವ ಅರಿಯದ ನನಗೀಗ ನೀನಾಗಿ ದಯಮಾಡಿ ಮೈದೋರಿದೆ |

ಏನು ಧನ್ಯನೊ ನಾನು ಆನಂದಕ್ಕೇನೆಗಾಣಿ ದಾನವಾಂತಕ ಸ್ವಾಮಿ ಕರಿಗಿರೀಶನೇ ಕೃಷ್ಣ || ೨ ||

***

Ēnu puṇyava māḍi nānindu ninna kaṇḍe dīnavatsala svāmi kr̥ṣṇa |

jyānagamyanē ninna kāṇalu manadalli munivararu nitya dhyānava māḍuvarayya || PA ||

śruti-śāstragaḷanōdi mathanava māḍuve mati sādhanadinda ninnarasuvarō |

patita pāvana ninna karuṇā ondilladire itara sādhanavella gatidorado svāmi || 1 ||

ēnondu sādhanava ariyada nanagīga nīnāgi dayamāḍi maidōride |

ēnu dhan’yano nānu ānandakkēnegāṇi dānavāntaka svāmi karigirīśanē kr̥ṣṇa || 2 ||

Plain English

Enu punyava madi nanindu ninna kande dinavatsala svami krsna |

jyanagamyane ninna kanalu manadalli munivararu nitya dhyanava maduvarayya || PA ||

sruti-sastragalanodi mathanava maduve mati sadhanadinda ninnarasuvaro |

patita pavana ninna karuna ondilladire itara sadhanavella gatidorado svami || 1 ||

enondu sadhanava ariyada nanagiga ninagi dayamadi maidoride |

enu dhan’yano nanu anandakkenegani danavantaka svami karigirisane krsna || 2 ||

***