Showing posts with label ಹೇ ದಯಾಬ್ಧೇ ಪಾಲಿಸೆನ್ನನು pranesha vittala. Show all posts
Showing posts with label ಹೇ ದಯಾಬ್ಧೇ ಪಾಲಿಸೆನ್ನನು pranesha vittala. Show all posts

Tuesday, 19 November 2019

ಹೇ ದಯಾಬ್ಧೇ ಪಾಲಿಸೆನ್ನನು ankita pranesha vittala

by ಪ್ರಾಣೇಶದಾಸರು
ಹೇ ದಯಾಬ್ಧೇ ಪಾಲಿಸೆನ್ನನು | ಶ್ರೀದ ಹನುಮಂತ ಪ

ಭೂಧವಜ ನದಿಯಲ್ಲಿ ನಿಂತಾ ಕಾಳೀಕಾಂತ ವೀತಚಿಂತಾ ಅ.ಪ.

ರಾವಣಾನುಜನಂತೆ ಮತ್ತಾ ಶೈಲಸುತನಂತೆ |ದೇವತೆಗಳೀಶನಂತೆ ದೇವತೆಗಳಂತೆ ||ಆವವಿಕ್ರಮಪಾರ್ಥನಂತೆ ಕಾದಿ ಬಿದ್ದಾ ಕಪಿಕುಲದಂತೆ |ತಾವರೆಯಸಖಸೂರ್ಯನಂತೆ ತತ್ಸುತ ಸುಗ್ರೀವನಂತೆ 1

ಭೂವರಾಧಿಪ ಧರ್ಮನಂತೆ ದ್ರೌಪದಿಯಂತೆ |ಭೂವಿ ಬುಧಸುತನಂತೆ ರಾಕ್ಷಸಿಯಂತೆ ಫಣಿಯಂತೆ ||ಆ ವಿರಾಟರಾಯನಂತೆ ಪಾರ್ವತಿಯ ನಾಥನಂತೆ |ನೀ ವಿಜಯನಾಗಲು ಸಹಿಸದಲೆ ಕೋಪಿಸಿದ ಧೃತರಾಷ್ಟ್ರನಂತೆ ||ಮೋದದಿಂದ ನಿನ್ನ ಪಡೆದಾ ಮಧ್ಯಗೃಹನಂತೆ |ಆದರದಿ ಹರಿಪೂಜೆ ಮಾಳ್ಪಾಸೂರಿಜನರಂತೆ ||ಆ ದಿನ ಕಡಲಲ್ಲಿ ಮುಳುಗಿ ಪೋಗುತ್ತಿದ್ದಾ ನಾವೆಯಂತೆ |ಪಾದಹಿಡಿದಾ ಕಾಳೀಸರ್ಪನ ಕಾಯ್ದ ಪ್ರಾಣೇಶ ವಿಠ್ಠಲನಂತೆ 3
*******