ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಗುರು ಎನಗೆ ಸ್ಮರಿಸು ಹಾಂಗೆ ದೋರು ನಿಮ್ಮರುಹ ಬ್ಯಾಗೆ ಗುರುತಲೀಗೆ 1
ನಿನ್ನವನೆ ಎಂದೆನಿಸೊ ಭಿನ್ನ ಹರಿಸೊ ಎನ್ನ ದಯದಿ ಪಾಲೆಸೋ ಧನ್ಯಗೈಸೊ 2
ಅನುದಿನದಿ ಕಾಯೊ ನೀ ಬಂದು ಅನಾಥ ಬಂಧು ದೀನಾನಾಥ ನೀ ಎಂದೆಂದು ಘನ ಕೃಪಾಸಿಂಧು 3
ಭಕ್ತ ಜನರನುಕೂಲ ಭೋಕ್ತಸಕಲ ಶಕ್ತ ನೀನಹದೊ ಕೃಪಾಲ ಬಕ್ತ ವತ್ಸಲ 4
ಅನುಭವಸುಖ ಬೀರಿಸೊ ಖೂನದೋರಿಸೊ ದೀನ ಮಹಿಪತಿ ತಾರಿಸೊ ಘನಸುರಿಸೊ 5
***