Wednesday, 1 September 2021

ಕರುಣಿಸೋ ಗುರು ಎನಗೆ ಸ್ಮರಿಸು ಹಾಂಗೆ ದೋರು ನಿಮ್ಮರುಹ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕರುಣಿಸೊ ಗುರು ಎನಗೆ ಸ್ಮರಿಸು ಹಾಂಗೆ ದೋರು ನಿಮ್ಮರುಹ ಬ್ಯಾಗೆ ಗುರುತಲೀಗೆ 1 

ನಿನ್ನವನೆ ಎಂದೆನಿಸೊ ಭಿನ್ನ ಹರಿಸೊ ಎನ್ನ ದಯದಿ ಪಾಲೆಸೋ ಧನ್ಯಗೈಸೊ 2 

ಅನುದಿನದಿ ಕಾಯೊ ನೀ ಬಂದು ಅನಾಥ ಬಂಧು ದೀನಾನಾಥ ನೀ ಎಂದೆಂದು ಘನ ಕೃಪಾಸಿಂಧು 3 

ಭಕ್ತ ಜನರನುಕೂಲ ಭೋಕ್ತಸಕಲ ಶಕ್ತ ನೀನಹದೊ ಕೃಪಾಲ ಬಕ್ತ ವತ್ಸಲ 4 

ಅನುಭವಸುಖ ಬೀರಿಸೊ ಖೂನದೋರಿಸೊ ದೀನ ಮಹಿಪತಿ ತಾರಿಸೊ ಘನಸುರಿಸೊ 5

***


No comments:

Post a Comment