Showing posts with label ಗೋವಿಂದನ ಧ್ಯಾನ ಬಲು ಶುಭಕರವೋ purandara vittala. Show all posts
Showing posts with label ಗೋವಿಂದನ ಧ್ಯಾನ ಬಲು ಶುಭಕರವೋ purandara vittala. Show all posts

Wednesday, 4 December 2019

ಗೋವಿಂದನ ಧ್ಯಾನ ಬಲು ಶುಭಕರವೋ purandara vittala

ರಾಗ ಶಹಾನ. ಆದಿ ತಾಳ

ಗೋವಿಂದನ ಧ್ಯಾನ ಬಲು ಶುಭಕರವೋ ||ಪ||
ಭಾವಿಸಿ ನೋಡಲು ಬಹು ಜನ್ಮಗಳ ಪಾಪಹರವೋ ||

ಒಂದಾವರ್ತಿ ನೆನೆಯಲು ಭವಬಂಧ ಖಿಲವೋ
ಹಿಂದಿನ ಸುಕೃತಕೆ ಮುಂದಿನ ಸುಕೃತಾನಂದ ಫಲವೋ ||

ವಿಧವಿಧ ಸಾಧನಕಿಂತ ಇದು ಘನವೋ
ಉದರಂಭರಣಕ್ಕೆ ಉಡುವೋ ವಸನಕ್ಕೆ ಇದು ಸುಸಾಧವನವೋ ||

ಶ್ರೀರಾಮಪುರಂದರವಿಠಲ ಆರಪಾರವೋ
ಸೇರಿದವರಿಗೆ ಈ ಹರಿಧ್ಯಾನ ಕ್ರೂರಗೆ ದೂರವೋ ||
***

pallavi

gOvindana dhyAna balu shubhakaravO

anupallavi

bhAvisi nODalu bahu janmagaLa pApa haravO

caraNam 1

ondAvarti neneyalu bhavabhanda khilavO handina satkrtake mundina sukrtAnanda balavO

caraNam 2

vidha vidha sAdhanakinta idu ghanavO udharambharaNakke uDuvO vasanakke idu susAdhavanavO

caraNam 3

shrI rAma purandara viTTala ArapAravO sEridavarige I hari dhyAna krUragae dUravO
***

ಗೋವಿಂದನ ಧ್ಯಾನ ಬಲು ಶುಭಕರವೋ 

ಭಾವಿಸಿ ನೋಡಲು ಬಹು ಜನ್ಮಗಳ ಪಾಪಹರವೋ || pa ||

ಒಂದೆ ಬಾರಿ ನೆನೆಯಲು ಭವ ಬಂಧ ಖಿಲವೋ

ಹಿಂದಿನ ಸುಕೃತಕೆ ಮುಂದಿನ ಸುಕೃತಾನಂದ ಫಲವೋ || 1 ||

ವಿಧ ವಿಧ ಸಾಧನಕಿಂತ ಇದು ಘನವೋ

ಉದರಂಭರಣಕ್ಕೆ ಉಡುವೋ ವಸನಕ್ಕೆ ಇದು ಸುಸಾಧವನವೋ || 2 ||

ಶ್ರೀ ರಾಮ ಪುರಂದರ ವಿಠಲ ಆರಪಾರವೋ

ಸೇರಿದವರಿಗೆ ಈ ಹರಿಧ್ಯಾನ ಕ್ರೂರಗೆ ದೂರವೋ || 3 ||
***

Gōvindana dhyāna balu śubhakaravō

bhāvisi nōḍalu bahu janmagaḷa pāpaharavō || pa ||

onde bāri neneyalu bhava bandha khilavō

hindina sukr̥take mundina sukr̥tānanda phalavō || 1 ||

vidha vidha sādhanakinta idu ghanavō

udarambharaṇakke uḍuvō vasanakke idu susādhavanavō || 2 ||

śrī rāma purandara viṭhala ārapāravō

sēridavarige ī haridhyāna krūrage dūravō || 3 ||
***