..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ರುದ್ರ ಮಹದೇವ ವೀರಭದ್ರ
ಭದ್ರ ಮಾರ್ಗೋಪದೇಶಿ ಅದ್ರಿಕುವರಿ ವಲ್ಲಭ ಪ
ಕ್ಷುದ್ರ ಖಳರ ಉಪದ್ರವ ಪರಿಹರಿಸಿ
ಉದ್ರೇಕ ಮಾಡು ಸುಜ್ಞಾನ ಭಕ್ತಿ ವೈರಾಗ್ಯವ
ಕದ್ರುಜಧಾರಿ ರೌದ್ರ ಮೂರುತಿಯೆ ಅ.ಪ
ಪೊಂದಿಸು ಹರಿಭಕ್ತರ ಸಂದಣಿ | ತ್ರಿಶೂಲಪಾಣಿ
ವಂದಿಪೆನು ಸುರಾಗ್ರಣಿ
ಬಂದಿಹ ವ್ಯಾಧಿಯ ಕಳೆಯೊ
ಕಂದÀರ್ಪಹರ ಕರುಣಾಕರ ಶಿವನೆ 1
ಶಿತಕಂಠ ಭಸಿತ ಭೂಷಿತ | ದಾತ ಸಂಭೂತ
ಭೂತಗಣಾಧೀಶ ವಿಖ್ಯಾತ
ವಾತನೊಡೆಯನ ಗುಣ ಸಂಪ್ರೀತಿಯಲಿ ಪೊಗಳುವಂತೆ
ಆತುರಮನ ನೀಡೊ ಯಾತರವನಲ್ಲವೊ 2
ನಿಟಿಲಾಕ್ಷಾಂಧಕಾಸುರ ಸಂಹಾರಿ | ಜಟಮಕುಟಧಾರಿ
ಸ್ಪಟಿಕ ಹಾರಾಲಂಕಾರಿ
ವಟು ವಿಜಯ ರಾಮಚಂದ್ರವಿಠಲನ ಸಂ
ಪುಟದೊಳು ನಟಿಪಂತೆ ಪಟುತರ ಮಾಡೋ 3
***