Showing posts with label ಎಲ್ಲಿ ತಿಳಿವುತದೆ ನಿಮ್ಮಾಟದ ಸುಧ್ಯೇಯ mahipati. Show all posts
Showing posts with label ಎಲ್ಲಿ ತಿಳಿವುತದೆ ನಿಮ್ಮಾಟದ ಸುಧ್ಯೇಯ mahipati. Show all posts

Wednesday 1 September 2021

ಎಲ್ಲಿ ತಿಳಿವುತದೆ ನಿಮ್ಮಾಟದ ಸುಧ್ಯೇಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಎಲ್ಲಿ ತಿಳಿವುತದೆ ನಿಮ್ಮಾಟದ ಸುಧ್ಯೇಯ ಪ 


ನಾಲ್ಕಾರು ಹದಿನೆಂಟು ಮಂದಿಯ ಕೇಳಿದೆ ಸಿಲುಕನೆಂದವರಾಡುದೆ ಮಲಕು ಎಂಬತ್ತು ನಾಲ್ಕು ಲಕ್ಷ ನೂ ಸೋಸಿದೆ ನಿಲುಕಿ ನಿನ್ನ ನೆಲೆ ನಿಜವು ದೋರದೆ 1 

ನಾನಾ ಮತ ನಾನಾ ಮಾರ್ಗ ಶೋಧಿಸಿದೆ ಖೂನ ನಿನ್ನದು ತಿಳಿಯದೆ ನಾನು ನಾನೆಂಬವರಿಗೆ ಅನುಸರಿಸಿದೆ ನೀ ನಿಹ ಸ್ಥಳದ ಗಾಳಿಯು ಬೀಸದೆ 2 

ಬೀಳದವರ ಕಾಲುಬಿದ್ದು ನಾ ಕೇಳಿದೆ ಸುಳಹು ನಿನ್ನದು ತೋರದೆ ತಲೆ ಕೆಳಗನೆ ಮಾಡಿ ತಪಸವ ಮಾಡಿದೆ ಒಲವು ನಿಮ್ಮದು ಎಂದಿಗೆ ಅಗದೆ 3 

ಬಡದ ಬವಣೆ ಬಟ್ಟು ಹುಡುಕದಾ ಹುಡುಕಿದೆ ತುಡಕು ನಿಮ್ಮದು ತಿಳಿಯದೆ ಒಡನೆ ಎನ್ನೊಳು ಬಂದು ಅಡಕವ ಹರಿಸಿದೆ ಬಡವನಾಧಾರೆಂದು ಕೈ ಬಿಡದೆ 4 

ಮನೋನ್ಮನವಾಗಿ ಕಂಗಳ ತೆರೆಸಿದೆ ಸ್ವಾನುಭವನೇ ಬೀರಿದೆ ದೀನಮಹಿಪತಿ ಮನೋಹರಣ ಮಾಡಿದೆ ಅನುದಿನ ಘನಸುಖದೊಳಗಿರಿಸಿದೆ 5

***