ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ಯನ್ನಿರೋ | ಹರಿ ಹರಿಯಂದು ಸ್ಮರಣಗೆ | ತಂದು ಪರಗತಿ ಪಡೆಯಿರೋ ಪ
ಸಾಧಾಕಗೆರಗೀ ಬೋಧಕವದಗೀ ಭೇದಿಸಿ ನಿಮ್ಮೊಳು ತಿರುಗಿ | ಸಾಧಕನಾಗಿ ಕ್ರೋಧಕ ಬಾಗಿ ವಾದ ವಿವಾದವ ನೀಗಿ 1
ಎಚ್ಚರ ವಿಡಿದು ಮತ್ಸರ ಕಡಿದು ತುಚ್ಛರ ಸಂಗದಿ ಸಿಡಿದು | ನಿಚ್ಚಟ ಜಡಿದು ಮೆಚ್ಚಿನ ಭಕ್ತಿಯ ಪಡೆದು 2
ಮಹಿಪತಿಸುತ ಪ್ರಭುಕೂಡಿ | ಇಹಪರಿ ಸುಖವ ಸೂರ್ಯಾಡಿ 3
***