Showing posts with label ಪಕ್ಷಿವಾಹನ ಶ್ರೀ ವಾಮನ್ನ ಅಂತ pranesha vittala. Show all posts
Showing posts with label ಪಕ್ಷಿವಾಹನ ಶ್ರೀ ವಾಮನ್ನ ಅಂತ pranesha vittala. Show all posts

Wednesday, 13 November 2019

ಪಕ್ಷಿವಾಹನ ಶ್ರೀ ವಾಮನ್ನ ಅಂತ ankita pranesha vittala

by ಪ್ರಾಣೇಶದಾಸರು
ಪಕ್ಷಿವಾಹನ ಶ್ರೀ ವಾಮನ್ನ ಅಂತ- |ರಿಕ್ಷಾಳಕ ಪ್ರಿಯ ಕಾಯೆನ್ನ ||ಋಕ್ಷ ಪ

ನಿಭಮಾಯಾಕಕ್ಷಾಜಿÕ ಹರೆ ಜಗ- |ತ್ಕುಕ್ಷೆ ನಂಬಿದೆನೆನ್ನುಪೇಕ್ಷೆ ಮಾಡಲಿ ಬೇಡ ಪಅಂಜಿನಾಧರಾ ಧರಧಾಮಹೇ ನಿ |ರಂಜನ ವನಮಾಲಿ ಭೂಮಾ ||ಅಂಜಲಿಪುಟದಿಂದಲಂಜಿ ಬೇಡುವೆ ಬಲ |ಭಂಜನಾನುಜವಿತತತ್ರಿಜಗ||ಮಂಜುಳಾಂಗನೇ ವೀತ ಭೂಮುಖ |ಕಂಜನಾಭನೆ ತರುಣಿ ಶಿವನೃಪ||ಕುಂಜರವರದಕರವಪಿಡಿಯೊ 1

ಪಾಠೀಣಕಮಠವರಾಹ| ನೀಚಹಾಟಕಾರಿವಟುಭೂಭುಜ ಹಾ ||ಖೇಟಾಹಬುದ್ಧಕಲ್ಕಿ ಘೋಟಕಾನನವಿಶ್ವ|ನಾಟಕ ಭೈಷ್ಮೀ ಮುಖ ವಧೂಟನಿಯರವಲ್ಲಭ||ಕೋಟಿಭಾಸ್ಕರತೇಜನಿನ್ನಯ |ಆಟ ತಿಳಿಯಲುಕೋಕನದಶುಭ||ಪೀಠ ಲಕುಮಿ ಅಶಕ್ತರಹರು ಕಿ |ರೀಟಸಖನಿನ್ನವರೊಳಗಿಡೊ 2

ಶಂತನುವಿನ ವಂಶ ರಕ್ಷ | ಮಾತುಲಾಂತಕ ಜಲಜದಳಾಕ್ಷ ||ಮಂಥಾರಿ ಶಿಶುಪಾಲ ದಂತವಕ್ರ ಮುರಾದಿ |ಹಂತ ದಾನವರ ನಿಕೃಂತನಾಹಿಮದ ಹಾ ||ನಂತಧುನಿಪಿತ ವೇದ ವೇದ್ಯ ಅ |ನಂತ ಮಹಿಮನೆ ಅತ್ರಿ ಸುತ ನಿ- ||ಶ್ಚಿಂತ ಶ್ರೀ ಪ್ರಾಣೇಶ ವಿಠಲ ದು- |ರಂತ ಶಕ್ತಿಭವಾಬ್ಧಿಘಟಜಾ 3
*******