Showing posts with label ಏನು ಮಾಡಿದೆ ಮೂಢಮನುಜಾಮಾನವ ಜನುಮದಿ ಬಂದೀ ಜಗದೀ gadugina veeranarayana. Show all posts
Showing posts with label ಏನು ಮಾಡಿದೆ ಮೂಢಮನುಜಾಮಾನವ ಜನುಮದಿ ಬಂದೀ ಜಗದೀ gadugina veeranarayana. Show all posts

Wednesday, 1 September 2021

ಏನು ಮಾಡಿದೆ ಮೂಢಮನುಜಾಮಾನವ ಜನುಮದಿ ಬಂದೀ ಜಗದೀ ankita gadugina veeranarayana

 ..

kruti by ವೀರನಾರಾಯಣ Veeranarayana 


ಏನು ಮಾಡಿದೆ ಮೂಢಮನುಜಾಮಾನವ ಜನುಮದಿ ಬಂದೀ ಜಗದೀ ಪ


ದೇಶದ ಸೇವೆಗೆ ತನು ನೀಡಿದೆಯಾಭಾಷೆಯ ಏಳ್ಗೆಗೆ ಮನ ಮಾಡಿದೆಯಾಕಾಸಿಗಾಗಿ ವಂಚಿಸಿ ನಿನ್ನೊಡಲಿನಪೋಷಣೆಗಾಗಿ ದುಡಿದೆಯಲ್ಲದೆ 1


ಆರ್ತರ ದುಃಖವನೀಡಾಡಿದೆಯಾಸ್ವಾರ್ಥದ ಹಂಬಲ ಬಿಟ್ಟು ನಡೆದೆಯಾಪೂರ್ತಿಯಾಗಿ ಜನಹಿತ ನೋಡಿದೆಯಾಧೂರ್ತತನವ ಬರಿದೆ ತೋರಿದೆಯಲ್ಲದೆ 2


ಮದಮತ್ಸರಗಳ ನೆಲಕೆ ಬಡೆದೆಯಾಹೃದಯ ನಿರ್ಮಲಗೊಳಿಸಿ ನುಡಿದೆಯಾಮುದದಿ ಗದುಗಿನ ವೀರನಾರಾಯಣನಪದವನೊಮ್ಮೆಯಾದರೂ ಸ್ಮರಿಸಿದೆಯಾ 3

***