Showing posts with label ಎನ್ನ ರಕ್ಷಿಸೊ ನೀನು ದೇವರ ದೇವ purandara vittala. Show all posts
Showing posts with label ಎನ್ನ ರಕ್ಷಿಸೊ ನೀನು ದೇವರ ದೇವ purandara vittala. Show all posts

Wednesday, 4 December 2019

ಎನ್ನ ರಕ್ಷಿಸೊ ನೀನು ದೇವರ ದೇವ purandara vittala

ಪುರಂದರದಾಸರು
ರಾಗ ಹುಸೇನಿ. ರೂಪಕ ತಾಳ

ಎನ್ನ ರಕ್ಷಿಸೊ ನೀನು ದೇವರ ದೇವ ||ಪ||
ಎನ್ನ ರಕ್ಷಿಸೋ ನೀನು ಯಾದವಶಿರೋಮಣಿ
ಮುನ್ನ ದ್ರೌಪದಿಯಭಿಮಾನ ಕಾಯಿದ ಕೃಷ್ಣ ||ಅ||

ಬಾಲನ ಮೊರೆಯನ್ನು ಕೇಳಿ ಕೃಪೆಯಿಂದ
ಪಾಲಿಸಿದ್ಯೋ ನರಸಿಂಹರೂಪದಿಂದ ||

ಪಾಷಾಣವ ಚರಣದಿ ಯೋಷಾರೂಪವ ಮಾಡಿ
ದೋಷ ಸಂಹಾರ ನಿರ್ದೋಷ ಗುಣಪೂರ್ಣನೆ ||

ಇನಕುಲಾಂಬುಧಿ ಚಂದ್ರ ಘನ ಶುಭಗುಣಸಾಂದ್ರ
ಸನಕಾದಿ ಮುನಿ ವಂದ್ಯ ಪುರಂದರವಿಠಲ |
***

pallavi

enna rakSiso nInu dEvara dEva

anupallavi

enna rakSisO nInu yAdava shirOmaNi munna draupadiyabhimAna kAida krSNa

caraNam 1

bAlana moreyannu kELi krpeyinda pAlisidyO narasimha rUpadinda

caraNam 2

pASANava caraNadi yOSA rUpava mADi dOSa samhAra nirdOSa guNapUrNane

caraNam 3

inakulAmbudhi candra ghana shubaguNa sAndra sanakAdi muni vandya purandara viTTala
***

ಎನ್ನ ರಕ್ಷಿಸೊ ನೀನು ದೇವರ ದೇವ ಪ

ಎನ್ನ ರಕ್ಷಿಸೊ ನೀನು ಯಾದವ ಕುಲಮಣಿಮುನ್ನ ದ್ರೌಪದಿಯಭಿಮಾನ ಕಾಯ್ದ ಕೃಷ್ಣ ಅ.ಪ.

ಬಾಲನ ಮೊರೆಯನುಕೇಳಿಕೃಪೆಯಿಂದಪಾಲಿಸಿದೆಯೊ ನರಸಿಂಹ ರೂಪದಿಂದ 1

ಪಾಷಾಣಚರಣದಿ ಯೋಷಿದ್ರೂಪವ ಗೈದೆದೋಷ ಸಂಹಾರ ನಿರ್ದೋಷಗುಣಪೂರ್ಣನೆ 2

ಇನಕುಲಾಂಬುಧಿ ಚಂದ್ರ ಘನಶುಭಗುಣಸಾಂದ್ರಸನಕಾದಿ ಮುನಿವಂದ್ಯಪುರಂದರವಿಠಲ3
******