Showing posts with label ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ uragadrivasa vittala. Show all posts
Showing posts with label ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ uragadrivasa vittala. Show all posts

Monday, 2 August 2021

ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ ankita uragadrivasa vittala

ಸೂತ್ರನಾಮಕಪ್ರಾಣ ಜಗತ್ರಾಣ

ಸೂತ್ರನಾಮಕ ಜಗಸೂತ್ರನೆ ಹರಿಕೃಪಾ

ಪಾತ್ರ ನೀನಹುದೋ ಸರ್ವತ್ರದಿ ನೀನೆ ಪ


ದೇವಾ ನೀನಿಲ್ಲದಿರೆ ಜಗವೆಲ್ಲವು ತಾ ನಿರ್ಜೀವ

ಜೀವ ಕೋಟಿಗಳೆಲ್ಲ ಕಾವ

ಪಾವನಾತ್ಮಕ ಸಂಜೀವ

ಲವಕಾಲ ಬಿಡದೆ ಎಮ್ಮೊಳಿರುವ ಭೋ ದೇವ ಅ.ಪ

ಸಾಟಿ ಯಾರೆಲೆ ತ್ರಿಕೊಟಿರೂಪನೆ ನಿಶಾಚರ ಕುಲಕೆ ಕುಠಾರಿ

ದಿಟ್ಟತನದಲಿ ಅಜಾಂಡ ಖರ್ಪರದಿ ಸೃಷ್ಟಿಯೊಳು ಸಂಚಾರಿ

ಪಟುತರ ತ್ರಿವಿಕ್ರಮ ಚಟುಲ ಮೂರುತಿ ಮನತಟದಲಿ ಭಜಿಸಿದ

ಶ್ರೇಷ್ಠನೆ ನಿಜಪರಮೇಷ್ಠಿಪದವನು ತೊಟ್ಟು ಪಾಲಿಪೆ

ಮುಂದೂ ಹಿಂದೂ ಕೂರ್ಮನಾಗಿ

ನಿಂದು ಬ್ರಹ್ಮಾಂಡ ಪೊತ್ತು

ಅಂದು ಜಗಭಾರ ವಹಿಸಿದೆಯೊ

ಅಂದು ಪ್ರಥಮಾಂಗ ಹರಿಗೆ ಬಂಧೂ

ದಯಾಸಿಂಧು ಎಂದೆಂದೂ 1


ವೀರ ನೀ ಈರಪಾದರ ಕುಲಕುಠಾರ

ಸರುವ ತತುವೇಶರ ವ್ಯಾಪಾರ

ಧೀರ ನೀ ನಡೆಸೆ ಜಗಸಂಸಾರ ಕಾರಣನು ಜಗಕಾರ್ಯ ಕಾ

ಧಾರ ಸುಸಮೀರ e್ಞÁನ ಧರ್ಮ

ವೈರಾಗ್ಯ ಐಶ್ವರ್ಯ ನಿನ್ನಯ ಗುಣ

ಸ್ವರೂಪತನುಕರಣೇಂದ್ರಿಯ ಕರ್ಮಫಲವನು ಜೀ

ವರುಗಳಿಗುಣಿಪ ಅನಿಲರೂಪನೆ ತನುಗೋಳಕದಲಿ ನೀ ನೆಲ

ಸಿ ರೂಪದಿ ದೈವದೊಳಾಧ್ಯಾತ್ಮಾದಿ ಭೂತಾದಿ ದೈವನೆಂದು

ಅಂದು ಸೃಷ್ಟಿಯೊಳು ಬಂದೂ ಪೊಂದಿ

ಸರ್ವರೊಳು ನಿಂದು ಹಿಂದೂ ಇಂದೂ ಇನ್ನು ಮುಂದೂ

ಎಂದೆ ಜೀವೇಶ ನೀನೆ ಜಗಬಂಧೂ

ಕರುಣಾಸಿಂಧು ಎಂದೆಂದೂ 2


ಪ್ರಾಣಪ್ರಾತರ ಸಾಯಂಬೀತೆರ ಅಭಿಧಾನ

ಗುಣಸ್ತವನ ಮಾಳ್ಪರೆಲ್ಲ ಸುರ

ಗಣಾ ಮಣಿದು ಬೇಡುವರೆಲ್ಲ ಅನುದಿನಾ

ಎಣೆಯುಂಟೆ ನೀನಮಿತ ಗುಣಗಣಾ ಶ್ರೀ ಮುಖ್ಯ

ಪ್ರಾಣಾ ಜಗಬಂಧಕೆ ಮಹಾರಜ್ಜು ರೂಪ ನೀ ಚಿತ್ಸುಖಮಯ

ವಪುಷ ಖಗಪ ಶೇಷ ಶಿವ ಶಕ್ರಾದೀ ಜಗ ಬದ್ಧವು

ನಿನ್ನಿಂದೀಶಾ ಅಘದೂರ ಅನಂತಾನ

ಕೇಶ ನಖಾಗ್ರ ಪರ್ಯಂತ ಚಿತ್ಸುಖ

ಅಣುಘನ ಅವಯವ ಅವಯವಿಗಳಿ

ಗಭೇದ ನೀ ಛಂದ ಶಾಸ್ತ್ರದಿ

ತನು ತ್ವಗ್ರೋಮ ಉಷ್ಣಿಕ್ ಗಾಯತ್ರಿ ನರ ಮಾಂಸನುಷ್ಟುಪ್

ಅನುಷ್ಟಪು ಅಸ್ತಿಮಜ್ಜಾ ಜಗತೀ ಪಂಕ್ತಿ ಬೃಹತಿನಾಮಕ

ಜೀವನ್ನಾ ಶ್ರೀ ವೇಂಕಟೇಶನಾ

ಘನ್ನಾ ಉರಗಾದ್ರಿವಾಸ ವಿಠಲನ್ನ 3

****