ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ
ಭಾರಿಗೆ ನಿನ್ನ ಬಾಳ್ವೆ ದಾರಿಗೆ ||ಪ||
ಬರುತೇನು ತಂದೆ ಬರಿಗೈಲಿ ಬಂದೆ
ಪರನಿಂದೆಗಳ ಕಟ್ಟಿ ಹರಕೊಂಡೇನೆಂದೆ ||
ಇರು ಎಲೊ ಶಾಂತಿ ಈಡ್ಯಾಡೊ ಭ್ರಾಂತಿ
ಮೂರು ದಿನದ ಸಂತೆ ನಿನಗ್ಯಾಕೊ ಚಿಂತೆ ||
ಅನುಗಾಲ ಕಿಚ್ಚು ಭವದೊಳಗ್ಹಚ್ಚು
ಅನುಭವದಚ್ಚು ಸವಿನೋಡೋ ಹುಚ್ಚು ||
ಶ್ರೀ ಕೃಷ್ಣಧ್ಯಾನ ಮರೆಯದಿರಲಿ ಶ್ವಾನ
ಪರಿಪರಿ ದಿನದಲ್ಲಿ ತಿಳಿಯೋ ನೀ ಜ್ಞಾನ ||
ಸಿರಿವರ ಕೃಷ್ಣ ಭವಭಯ ಭಂಗ
ಪುರಂದರವಿಠಲನ್ನ ಒಲಿಸಿಕೊ ಮಂಗ, ಮುದಿಮಂಗ ||
***
ಭಾರಿಗೆ ನಿನ್ನ ಬಾಳ್ವೆ ದಾರಿಗೆ ||ಪ||
ಬರುತೇನು ತಂದೆ ಬರಿಗೈಲಿ ಬಂದೆ
ಪರನಿಂದೆಗಳ ಕಟ್ಟಿ ಹರಕೊಂಡೇನೆಂದೆ ||
ಇರು ಎಲೊ ಶಾಂತಿ ಈಡ್ಯಾಡೊ ಭ್ರಾಂತಿ
ಮೂರು ದಿನದ ಸಂತೆ ನಿನಗ್ಯಾಕೊ ಚಿಂತೆ ||
ಅನುಗಾಲ ಕಿಚ್ಚು ಭವದೊಳಗ್ಹಚ್ಚು
ಅನುಭವದಚ್ಚು ಸವಿನೋಡೋ ಹುಚ್ಚು ||
ಶ್ರೀ ಕೃಷ್ಣಧ್ಯಾನ ಮರೆಯದಿರಲಿ ಶ್ವಾನ
ಪರಿಪರಿ ದಿನದಲ್ಲಿ ತಿಳಿಯೋ ನೀ ಜ್ಞಾನ ||
ಸಿರಿವರ ಕೃಷ್ಣ ಭವಭಯ ಭಂಗ
ಪುರಂದರವಿಠಲನ್ನ ಒಲಿಸಿಕೊ ಮಂಗ, ಮುದಿಮಂಗ ||
***
pallavi
bArige ninna bALve dArige
caraNam 1
barutEnu tande bari kaili bande para nindegaLa kaTTi harakoNDEnende
caraNam 2
iru elo shAnti iDyADo bhrAnti mUru dinada sante ninagyAko cinte
***