Showing posts with label ಆರಮಗನೆಂದರಿಯೆವೆ ಇವ ನಮ್ಮಕೇರಿಯೊಳು ಸುಳಿದು ಪೋದ ankita hayavadana. Show all posts
Showing posts with label ಆರಮಗನೆಂದರಿಯೆವೆ ಇವ ನಮ್ಮಕೇರಿಯೊಳು ಸುಳಿದು ಪೋದ ankita hayavadana. Show all posts

Wednesday, 1 September 2021

ಆರಮಗನೆಂದರಿಯೆವೆ ಇವ ನಮ್ಮಕೇರಿಯೊಳು ಸುಳಿದು ಪೋದ ankita hayavadana

 ..

check similar by purandaradasaru

ಆರ ಮಗನೆಂದರಿಯೆವೆ ಇವ ನಮ್ಮಕೇರಿಯೊಳು ಸುಳಿದು ಪೋದ ಪ.


ನೀಲವರ್ಣನ ಮೈಯ್ಯವ ತುಲಸಿ ವನ-ಮಾಲೆ ಕೊರಳೊಳು ಕೌಸ್ತುಭಬಾಲಪ್ರಾಯದ ಚೆನ್ನಿಗ ಬಂದು ಪೋ-[ಗ]ಲು ಸನ್ನೆಯ ಮಾಡಿದ1


ಚಿಕ್ಕಪ್ರಾಯದ ಚೆನ್ನಿಗ ಯೌವನದಲುಕ್ಕುವ ಕಡುಚೆಲುವನೆಚೊಕ್ಕಟಾದ ಚದುರನೊಬ್ಬ ಕುಚಕೆ ಕೈ-ಯಿಕ್ಕಿ ಕಸ್ತೂರಿ ಪೂಸಿದ 2


ಪೀತಾಂಬರನುಡಿಸಿದ ವಿನಯ ಸವಿ-ಮಾತುಮಾತಿಗೆ ನಗಿಸಿದಪ್ರೀತಿಯಿಂದಲಿ ತನ್ನ ಚೆಂದುಟಿಯ ಅಧರಾ-ಮೃತವನುಣಿಸಿದ3


ಪಾರಿಜಾತವ ಸೂಡಿದ ಕಸ್ತೂರಿಯಗೀರುನಾಮವ ತಿದ್ದಿದದೂರದಲಿ ನಿಂತು ಎನ್ನ ಸೋಗೆಗಣ್ಣಓರೆನೋಟದಿ ನೋಡಿದ4


ಆಗ ಮೊದಲಾಗಿ ತನುವಾ ಮದನಶರತಾಗಿ ಕಟ್ಟುಡುಗಿದಾವೆಬೇಗದಲಿ ಹಯವದನ ಬಂದೆನ್ನಮೋಹದಿಂದಲಿ ಕೂಡಿದ5

***

( ರಾಗ ಭೈರವಿ. ಝಂಪೆ ತಾಳ) 


ಆರ ಮಗನೆಂದರಿಯೆವೆ ಇವ, ನಮ್ಮ ಕೇರಿಯೊಳು ಸುಳಿದು ಪೋದನಮ್ಮ ||ಪ|| 


ಪಾರಿಜಾತವ ತುರುಬಿದ, ಕಸ್ತೂರಿ ಗೀರು ಗಂಧವ ತಿದ್ದಿಹನಮ್ಮ ದೂರದಲಿ ನಿಂತುಕೊಂಡು, ಸೋಗೆಕಣ್ಣು ಓರೆನೋಟದಿ ನೋಡುವನಮ್ಮ || 

ಶಂಖ ಚಕ್ರವ ಪಿಡಿದಿಹ ತಾನು, ಬಲು ಬಿಂಕದಲಿ ಕೊಳಲೂದುವನಮ್ಮ ಶಂಕೆಯಿಲ್ಲದೆ ಬದಿಯಲಿ ಬಂದುನಿಂತು ಪೊಂಕದಲಿ ನಲಿದಾಡುವನಮ್ಮ ||

ನೀಲಮೇಘದ ಮೈಯವ, ತುಲಸೀವನ- ಮಾಲೆ ಕೊರಳಲಿ ಧರಿಸಿಹನಮ್ಮ ಬಾಲ ಪ್ರಾಯದ ಚೆನ್ನಿಗ, ಬಂದು ಎಮ್ಮ ಓಲೈಸಿ ಅಪ್ಪಿ ಪೋದನಮ್ಮ || 

ಸೀತೆಯನು ತರಲು ಪೋಗಿ, ಸಾಗರಕೆ ಸೇತುವೆಯ ಕಟ್ಟಿಸಿದನೇ ಅಮ್ಮ ದೈತ್ಯ ರಾವಣನ ಕೊಂದು, ಲಂಕೆಯನು ಇತ್ತನೆ ವಿಭೀಷಣನಿಗೆ ಅಮ್ಮ ||

 ಗೋಕುಲದೊಳಗೆ ಪುಟ್ಟಿ , ಕೃಷ್ಣ ತ ಗೋಪಿಗೆ ಶಿಶುವಾದನೇ ಅಮ್ಮ ಆಕಳ್ಹಿಂಡುಗಳ ಕಾಯ್ದು , ರಂಗ ತಾ ಏಕ ಮಧುರೆಗೆ ಪೋದನೇ ಅಮ್ಮ ||

 ಪೀತಾಂಬರನುಟ್ಟಿಹ, ಪೊಳೆವ ಕಟಿ- ಸೂತ್ರವನು ಧರಿಸಿದವನೆ ಅಮ್ಮ ಮಾತುಳನ ಕೊಂದು ಪಟ್ಟ- ಗಟ್ಟಿದನೆ ತಾತ ಉಗ್ರಸೇನಗೆ ಅಮ್ಮ || 

ಮುತ್ತಿನ ಮೂಗುತಿಟ್ಟು, ಉಡುಪಿಯಲಿ ನಿತ್ಯ ಪೂಜೆಯ ಕೊಂಬುವನಮ್ಮ ಸತ್ಯನೆಂದೆನಿಸಿಕೊಂಡು ಸುಳಿದನೆ ಕರ್ತು ಪುರಂದರವಿಠಲನಮ್ಮ ||

***

pallavi


Ara maganendariyave iva namma kEriyoLu suLidu pOdanamma


caraNam 1


pArijAtava tarubida kastUri gIru kandhava tiddiha namma

dUradali nindu koNDu sOge kaNNu Ore nODadi nODuvanamma


caraNam 2


shankha cakrava piDidiha tAnu balu binkadali koLalUduvanamma

shankeyillade padiyali bandu nindu pongadali nalidADuvanamma


caraNam 3


nIlamEghada maiyava tulasI vana mAle koraLali dharisihanamma

bAla prAyada cenniga bandu emma Olaisi appi pOdanamma


caraNam 4


sIteyanu taralu pOgi sAgarake sEtuveya kaTTisidane amma

daitya rAvaNana kondu lankeyanu ittane vibhISaNanige amma


caraNam 5


pItAmbaranuTTiha poLeva kaTi sUtravanu dharisidavane amma

mAtuLana kondu paTTa gaTTidane tAta ugrasEnage amma


caraNam 6


muttina mUgutiTTu uDupiyali nitya pUjeya kombuvanamma

satyanendenisi koNDu suLidane kartu purandara viTTalanamma

***