Showing posts with label ಆಶೆಯ ಬಿಡಿಸಯ್ಯಾ ಶ್ರೀಶ ಪ್ರಾಣೇಶ ದಾಸರಾಯಾ varadendra vittala. Show all posts
Showing posts with label ಆಶೆಯ ಬಿಡಿಸಯ್ಯಾ ಶ್ರೀಶ ಪ್ರಾಣೇಶ ದಾಸರಾಯಾ varadendra vittala. Show all posts

Friday, 6 August 2021

ಆಶೆಯ ಬಿಡಿಸಯ್ಯಾ ಶ್ರೀಶ ಪ್ರಾಣೇಶ ದಾಸರಾಯಾ ankita varadendra vittala

 .. ..

ವರದೇಂದ್ರವಿಠಲರ ಹಾಡು


ಆಶೆಯ ಬಿಡಿಸಯ್ಯಾ | ಶ್ರೀಶ ಪ್ರಾ |ಣೇಶ ದಾಸರಾಯಾ ||ವಾಸುದೇವನ ಕಥೆ ಸೋಸಿಲಿ ಪಾಡುವ |ಲೇಸು ಭಕುತಿ ನೀಡೋ | ನೋಡೋ ಪ


ಹರಿ ಗುರುಗಳ ಪ್ರಿಯಾ ನೆನಿಸೀ |ಮೆರೆದಿಯೊ ಗುರುರಾಯಾ ||ಸರುವದ ಶ್ರೀ ಹರಿ ಸ್ಮರಣೆಯ ಮಾಡುತ |ಧರೆಯೊಳು ಚರಿಸಿದ | ಭರದಿ 1


ಜ್ಞಾನ ಶೂನ್ಯನಾಗೀ ಜಗದಿ |ಮಾನವರಿಗೆ ಬಾಗಿ |ದಾನವಾ ಧ್ಯಾನ ಮಾಡದೇ |ಹೀನನಾದೆನು ನಾನು | ಇನ್ನೇನು 2


ವರದೇಂದ್ರರ ಸದನಾ | ಬಳಿಯಾ |ಇರುತಿಹ್ಯ ಜಿತ ಮದನಾ ||ಮರುತ ಮತದ ಸದ್ಗ್ರಂಥದ ಸಾರವ |ತ್ಪರಿತದಿಂ ಪೇಳ್ದಿ | ಬಾಳ್ದಿ 3


ಕಂದನೆಂದುಯೆನ್ನ | ಕಾಯ್ವದು |ಸುಂದರ ಗುರು ಮುನ್ನಾ ||ನಂದ ಕಂದನ ಅಂದ ಪಾದವಾ |ಚಂದದಿ ತೋರೋ | ಬಾರೋ 4


ವರದೇಂದ್ರ ವಿಠಲನ್ನ | ಧ್ಯಾನದಿ |ನಿರುತದಿ ಇರಿಸೆನ್ನಾ ||ಪರಮ ಭಾಗವತ ಪದಧೂಳಿಯಲಿ |ಪೊರಳಾಡಿಸೋ ಯಂದೇ | ತಂದೇ 5

***