Showing posts with label ಶ್ರೀಭೂಮಿದುರ್ಗ ಮತ್ತೇಭೇಂದ್ರಿಗಮನೆ jagannatha vittala. Show all posts
Showing posts with label ಶ್ರೀಭೂಮಿದುರ್ಗ ಮತ್ತೇಭೇಂದ್ರಿಗಮನೆ jagannatha vittala. Show all posts

Saturday, 14 December 2019

ಶ್ರೀಭೂಮಿದುರ್ಗ ಮತ್ತೇಭೇಂದ್ರಿಗಮನೆ ankita jagannatha vittala

ಜಗನ್ನಾಥದಾಸರು
ಶ್ರೀ ಭೂಮಿದುರ್ಗ ಮತ್ತೇಭೇಂದ್ರಿಗಮನೆ ಸ್ವ
ರ್ಣಾಭ ಗಾತ್ರೆ ಸುಚರಿತ್ರೆ | ಸುಚರಿತ್ರೆ ಶ್ರೀ ಪದ್ಮ
ನಾಭನ್ನ ಜಾಯೆ ವರವೀಯೆ 1

ದರಹಸಿತವದನೆ ಸುಂದರಿ ಕಮಲ ಸದನೆ ನಿ
ವಿಧಿ ವಿಧಿ ಮಾತೆ ಲೋಕಸುಂ
ದರಿಯೆ ನೀ ನೋಡೆ ದಯಮಾಡೆ 2 

ತ್ರಿಗುಣಾಭಿಮಾನಿ ಎನ್ನವ ಗುಣದ ರಾಶಿಗಳ
ವರವೀಯೆ ನಿನ್ನ ಪಾದ
ಯುಗಳಕ್ಕೆ ನಮಿಪೆ ಜಗದಂಬೆ 3

ಪ್ರಳಯ ಕಾಲದಲಿ ಪತಿ ಮಲಗ ಬೇಕೆನುತ ವಟ
ದೆಲೆಯಾಗಿ ಹರಿಯ ಒಲಿಸಿದಿ | ಒಲಿಸಿದಿ ಜಗದ ಮಂ
ಗಳ ದೇವಿ ನಮಗೆ ದಯವಾಗೆ 4

ತಂತು ಪಟದಂತೆ ಜಗದಂತರ್ಬಹಿರದಲ್ಲಿ
ಕಾಂತಮೊಡಗೂಡಿ ನೆಲೆಸಿಪ್ಪೆ | ನೆಲೆಸಿಪ್ಪೆ ನೀನೆ
ನ್ನಂತರಂಗದಲಿ ನೆಲೆಗೊಳ್ಳೆ 5

ಈಶಕೋಟಿ ಪ್ರವಿಷ್ಟೆ ಈಶ ಭಿನ್ನಳೆ ಸರ್ವ
ದೋಷವರ್ಜಿತಳೆ ವರದೇಶ | ವರದೇಶ ಪತಿದೊಡನೆ
ವಾಸವಾಗೆನ್ನ ಮನದಲ್ಲಿ 6

ಆನಂದಮಯಿ ಹರಿಗೆ ನಾನಾಭರಣವಾದೆ
ಪಾನೀಯವಾದೆ ಪಟವಾದೆ | ಪಟವಾದೆ ಪಂಕಜ
ಪಾಣಿ ನೀನೆಮಗೆ ದಯವಾಗೆ 7 

ಮಹದಾದಿ ತತ್ವಗಳ ವಹಿಸಿ ನಿನ್ನುದರದೊಳು
ದ್ರುಹಿಣಾಂಡ ಪಡೆದೆ ಪತಿಯಿಂದ | ಪತಿಯಿಂದ ಶ್ರೀಲಕ್ಷ್ಮಿ
ಮಹಮಹಿಮಳೆ ಎಮಗೆ ದಯವಾಗೆ 8

ಆವ ಬ್ರಹ್ಮಾದಿ ದೇವರೆಲ್ಲರು ತವ ಕೃ
ಪಾವ ಲೋಕನದಿ ಕೃತಕೃತ್ಯ | ಕೃತಕೃತ್ಯರಾಗಿ ಹರಿ
ದೇವಿ ನಾ ಬಯಸುವುದು ಅರಿದಲ್ಲ 9

ಪಕ್ಷೀಂದ್ರವಾಹನನ ವಕ್ಷಸ್ಥಳವಾಗಿ
ಅಕ್ಷಯe್ಞÁನಿ ಸುಖಪೂರ್ಣೆ | ಸುಖಪೂರ್ಣೆ ಕಮಲದ
ಳಾಕ್ಷಿ ನೋಡೆನ್ನ ದಯದಿಂದ 10

ಹಲವು ಮಾತ್ಯಾಕೆ ಶ್ರೀಲಲನೆ ಶ್ರೀಜಗನ್ನಾಥ ವಿ
ಮನದಲ್ಲಿ ವಾಸವಾಗೆಲ್ಲ
ಕಾಲದಲಿ ಅವಿಯೋಗಿ 11
********