" ಶ್ರೀ ವರದವಿಠ್ಠಲರು "....
ತೆರಳಿ ಪೊದರು ಗುರುಜಗನ್ನಾಥ-
ವಿಠಲಾಂಕಿತ ಗುರುವರ್ಯರು ।। ಪಲ್ಲವಿ ।।
ಪರಮ ಭಕ್ತರಿಗೆಲ್ಲ ಗುರು
ರಾಘವೇಂದ್ರರ ಇರುವು ತೋರುತ ।। ಆ. ಪ ।।
ದುರುಳ ಜನರಿಗೆ ಮರುಳುಗೊಳಿಸುತ ।
ವರಳನೆಳೆದ ಗೋಪಾಲಮೂರ್ತಿಯ ।
ಪರಮ ಭವಾಭ್ಡಿಯುಳ್ಳ ಭಾಗವತನು । ಅತಿ ।
ವಿರಳದಲಿ ತಿಳಿಸುವ ಜ್ಞಾನಿವರ್ಯನು ।। ಚರಣ ।।
ಬರೆದೋದದಲೆ ಶ್ರೀ ಗುರುವರ್ಯನ ।
ಕರುಣ ಕಟಾಕ್ಷದಿ ಪರಿ ।
ಪರಿ ಶಾಸ್ತ್ರದ ಮರ್ಮವನರಿದು ।।
ಚರಿಸಿದರು ಬಲು ದೇಶದಲಿ ।
ಸರಿಯಿಲ್ಲವೆಂಬ ಪೆಸರಿನಲಿ ।। ಚರಣ ।।
ಕಲಿಯುಗದ ಜನರಿಗೆ
ಕಲುಷಿತರಂತೆ ತೋರುತ ।
ಕಳೆದು ಹೋದರು
ಪ್ರಾರಬ್ಧ ನಿಮಿತ್ತದಿ ।
ಕಾಲಯುಕ್ತ ಸಂವತ್ಸರ
ದಾಶ್ವಯುಜ ಪಾಡ್ಯ ರವಿವಾರ ।
ಹೇಳಿ ಕೇಳುತಲಿ ಶ್ರೀ ವರದವಿಠ್ಠಲನ
ಪುರವ ಪೊಂದಿದರು ।। ಚರಣ ।।
*****