..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ನಡೆದು ಬಾರಯ್ಯ ಪ್ರಾಣರಾಯ ಪಿಡಿ ಎನ್ನ ಕೈಯಾ ಪ
ಕಡುಬಡಜನರಿಗೆ ಒಡೆಯನಾಗಿ ನೀ
ಸಡಗರದಲಿ ಕರ ಪಿಡಿದು ಪೊರೆವುದಕೆ 1
ಭಾಗ್ಯಪುರಿಯೊಳಗೆ ಭಾಗವತರಿಗೆಲ್ಲ
ಯೋಗ್ಯಮಾರ್ಗವನು ಬೇಗನೆ ತೋರಲು 2
ಅನಾಥನಾಥ ಪ್ರಾಣನಾಥ ವಿಠ್ಠಲನ ದೂತನೀ
ನೆನೆಸಿ ಭಕ್ತಜನರ ಸಂತೋಷಪಡಿಪುದಕೆ 3
***