Showing posts with label ಗಜಮುಖ ಗಣಪನಂಬುಜಪಾದಕ್ಕೆರಗುವೆ bheemesha krishna. Show all posts
Showing posts with label ಗಜಮುಖ ಗಣಪನಂಬುಜಪಾದಕ್ಕೆರಗುವೆ bheemesha krishna. Show all posts

Tuesday 1 June 2021

ಗಜಮುಖ ಗಣಪನಂಬುಜಪಾದಕ್ಕೆರಗುವೆ ankita bheemesha krishna

ಗಜಮುಖ ಗಣಪನಂಬುಜಪಾದಕ್ಕೆರಗುವೆ

ನಿಜವಾದ ವರವ ನಾ ಬೇಡಿಕೊಂಬೆ

ಅಜನರಸಿಗೆ ಅತಿ ಭಕ್ತಿಂದೆ ಭಜಿಸುವೆ

ತ್ರಿಜಗವಂದಿತನ ಕತೆಯ ಪೇಳ್ವೆನು 1

ಗೋಕುಲದೊಳಗೆಲ್ಲ ಗೋಪಾಂಗನೇರು ಕೂಡಿ

ಏಕವಾಗಿ ಮಾತನಾಡಿಕೊಂಡು ತಾವು ಅ-

ನೇಕ ಸಂಭ್ರಮದಿಂದ ಆಡಿ ನೀರಾಟವ

ಬೇಕಾದೂಟವನುಂಡು ಬರುವೋಣೆಂದು 2

ಸಕ್ಕರೆ ನೊರೆಹಾಲು ಘೃತ ಪರಮಾನ್ನವು

ಚಕ್ಕುಲಿ ಗಿಲುಗಂಜಿ ಗುಳ್ಳೋರಿಗೆ ಬುಂದ್ಯ

ಭಕ್ಷ್ಯ ಮಂಡಿಗೆ ಫೇಣಿ ಬುತ್ತಿ ಚಿತ್ರಾನ್ನ

ಹಪ್ಪಳ ಸಂಡಿಗಂಬೋಡುಪ್ಪಿನಕಾಯಿಗಳು 3

ಕಸ್ತೂರಿ ಗಂಧ ಕೇಸರಿ ಕುಂಕುಮರಿಷಿಣ

ಅಚ್ಚಮಲ್ಲಿಗೆ ಶಾವಂತಿಗೆ ಸರವು ದಿವ್ಯ

ಕರ್ಪೂರದಡಿಕೆ ಯಾಲಕ್ಕಿ ಎಲೆಯ ಸುಣ್ಣ

ಪತ್ರೆ ಲವಂಗ ತಬಕಿಲೆ ತಂದರು 4

ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ

ಅರಳು ಮಲ್ಲಿಗೆ ಸಂಪಿಗೆ ಮುಡಿದು ದಿವ್ಯ

ಕೊರಳ ಕಟ್ಟಾಣಿ ಸರಿಗೆ ಚಂದ್ರಹಾರ ಪು-

ತ್ಥಳಿ ಪಚ್ಚಪದಕಗಳ್ಹೊಳೆಯುತಲಿ 5

ಕಡಗ ಕಂಕಣ ದ್ವಾರ್ಯ ನಾಗಮುರಿಗೆ ವಂಕಿ

ಬಿಡಿಮುತ್ತಿನ ಗೊಂಡ್ಯ ಬಾಜುಬಂದು ದೊಡ್ಡ

ಎಡಬಲ ಕಿವಿಯಲಿ ವಾಲೆ ಸರಪಳಿ ಮುತ್ತು ಬು-

ಗುಡಿ ಚಂದರ ಬಾಳ್ಯ ಹೊಳೆಯುತಲಿ 6

ಮುದ್ದು ಮೋರೆಗೆ ತಕ್ಕ ಮುಕುರ್ಯ ಬುಲಾಕನಿಟ್ಟ ವ-

ಜ್ರದ್ಹರಳು ಬಲಮೂಗಿನಲಿ ದಿವ್ಯ

ತಿದ್ದಿ ಮುಂಗುರುಳು ಮುತ್ತಿನ ಬೊಟ್ಟು ಕುಂಕುಮ

ಪದ್ಮದ್ಹೂವಿನ ಕುಬುಸಗಳ ತೊಟ್ಟು 7

ಹರದಿಯರೆಲ್ಲರು ಪರಮ ಸುಭ್ರಮದಿಂದ

ಜರದ ಪೀತಾಂಬರ್ವಜ್ಜರದ ಪಟ್ಟಿನಿಟ್ಟು

ಪರಿ ಪರಿ ಬಣ್ಣ ಸೀರೆಗಳುಟ್ಟು ಕಾಲ-

ಲಿ ರುಳಿ ಕಾಲುಂಗರ ಗೆಜ್ಜೆ ಪೈಜಣವು 8

ಚೆಲ್ವೆಯರೆಲ್ಲರು ಉಲ್ಲಾಸದಿಂದಲಿ

ಘುಲ್ಲು ಘಲ್ಲೆಂದು ಹೆಜ್ಜನಿಡುತ ತಾವು

ಮಲ್ಲೆ ಮಲ್ಲಿಗೆ ಪುನ್ನಾಗ ಸಂಪಿಗೆ ತೋಟ

ಅಲ್ಲಲ್ಲೆ ನಿಂತು ನೋಡುತ ಬಂದರು 9

ಕುಂದ ಮಂದಾರ ಸುಗಂಧಿಕ ದವನವು

ಬಂಗಾರದಂಥ ಕ್ಯಾದಿಗೆಯಮಲ ಚೊಕ್ಕ

ದುಂಡುಮಲ್ಲಿಗೆ ಪಾರಿಜಾತ ತಾವರೆಮೊಗ್ಗು

ಚೆಂದ ಚೆಂದದ ಶಾವಂತಿಗೆ ವನವು 10

ಹತ್ತಿ ಆಲದ ಮರ ಅಡಕೆ ತೆಂಗಿನ ಮರ ಅ-

ಶ್ವತ್ಥ ಕಪಿತ್ಥ ಕಿತ್ತಳೆ ಹಲಸು ನೋಡು-

ತ್ತತ್ತಿ ದ್ರಾಕ್ಷಿ ನೀರಲ ನಿಂಬೆ ದಾಳಿಂಬ್ರ

ಪಕ್ವಾದ ಜಂಬು ಸೀತಾಫಲವು 11

ಎಲೆದೋಟದೊಳಗೆ ಯಾಲಕ್ಕಿಗೊನೆಯು ನೋಡೆ

ಕಳಿತ ಮಾವಿನ ಹಣ್ಣು ಕದಳೀ ಫಲ

ಬೋರೆ ಶ್ರೀತುಳಸಿ ವನಗಳಲ್ಲೆ

ಅರಿಷಿಣಂಜೂರಿ ಔದುಂಬ್ರ ಫಲ 12

ಗಂಡ ಭೈರುಂಡ ಚಕೋರ ಚಾತಕ ಗಿಳಿ

ಹಿಂಡು ನವಿಲು ಚಕ್ರವಾಕ ಪಕ್ಷಿ ಗಿಳಿಹಿಂಡು

ಗಂಡೆರಳೆ ಗರುಡ ಹಂಸವು ನೋಡೆ ಹರಿ ಬ್ರಹ್ಮ

ತಂದೆ ಮಕ್ಕಳು ಏರೋವಾಹನವು 13

ಕಸ್ತೂರಿಮೃಗ ಪುನುಗಿನ ಬೆಕ್ಕು ಪಾರ್ವಾಳ

ಜಕ್ವಕ್ಕಿ ಕೊಳಲ್ಹಕ್ಕಿ ಸಾರಂಗವು ಚಾರಿ

ಕುಕ್ಕುಟ ಭೈರುಂಡ ಎಡಖಗ ಬಲಕ್ಕಾಗಿ

ಕೊಟ್ಟವು ಶಕುನ ಜಲಕ್ರೀಡೆಗೆ 14

ಕಾಳಿಮರ್ದನ ಕೃಷ್ಣ ಹಾರಿದ ಮಡುವಿದು

ಕಾಳಿಂಗನೋಡಿಸಿ ಕಳೆದ ವಿಷ ಕೆಟ್ಟ

ನೋಡೆ ಅಮೃತಕೆ ಮಿಗಿಲಾಗಿದೆ ಈ ಜಲ

ಏನು ಪುಣ್ಯ ಮಾಡಿದ್ದಳೊ ಯಮುನಾ 15

ನೀಲ ಮಾಣಿಕ್ಯ ಮುತ್ತು ಕೂಡಿಸಿದಂತೆ ತ್ರಿವೇಣಿ ಆ-

ದಳು ತಾ ಪ್ರಯಾಗದಲಿ ತ್ರಿವೇಣಿ

ಭಾಗೀರಥಿ ಸರಸ್ವತಿ ಕೂಡಿ ಸಂಗಮಳಾಗಿ

ಪೋಗೋಳು ಕಾಶಿ ಪಟ್ಟಣಕೆ 16

ಕಮಲಸಖನ ಪುತ್ರಿ ಕಾಮಿತ ಫಲಕೊಟ್ಟು

ವರುಣನರ್ಧಾಂಗಿ ನೀ ವರವ ಕೊಡೆ ತಾಯೆ

ಯಮಧರ್ಮರಾಯನ ಭಗಿನಿ ನಿಮ್ಮ ಸ್ನಾನ-

ಫಲಕೊಟ್ಟು ಪಾಲಿಸೀಗೆಂದೆನುತ 17

ನೋಡುತ ನಗುತ ಮಾತಾಡುತ ನಿಂತರು

ಓಡುತಾವೆ ಜಲ ಸೆಳವಿನಿಂದ ಆಹ

ಮಾಡುವೋಣ್ಹ್ಯಾಗೆ ಸ್ನಾನವ ನಾವು ಎನುತಲಿ

ಜೋಡಿಸಿ ತಮ್ಮ ್ಹಸ್ತ ಮುಗಿದರಾಗ 18

ಉಟ್ಟ ಸೀರೆಗಳನು ಬಿಟ್ಟು ಕುಪ್ಪಸ ಕಟ್ಟಿ

ಇಟ್ಟರು ಉಸುಕಿನ ಮಿಟ್ಟಿಯಲ್ಲೇ ತಾವು

ಮಿತ್ರೆಯರೆಲ್ಲ ತಮ್ಮ ಸ್ತನಗಳ್ಹಿಡಕೊಂಡು

ಥಟ್ಟನೆ ಇಳಿದರು ನದಿಯೊಳಗೆ 19

ವಾರಿಗೆ ಗೆಳೆತೇರು ವರ ಮೋಹನಾಂಗೇರು

ಮೋರೆಗೆ ಅರಿಷಿಣ ಕುಂಕುಮ್ಹಚ್ಚಿ ತಮ್ಮ

ನೀರಜಾಕ್ಷಿಯರೆಲ್ಲ ನಿರ್ಮಲವಾಗಿದ್ದ

ನೀರೊಳು ನಿಂತು ಮೈ ತೊಳೆದರಾಗ 20

ಭಾರಿ ಸೆಳವಿನೊಳು ಬತ್ತಲೋಲ್ಯಾಡುತ

ಸಾರಸಮುಖಿಯರು ಸರಸದಿಂದ ಚೆಲ್ಲೆ

ದ್ವಾರ್ಯ ಕಂಕಣಕರ ಬೊಗಸೆಲಿಂದ ನೀರು

ತೂರುತ ತುಂಬಿ ಚೆಲ್ಲ್ಯಾಡುತಲಿ 21

ಸರ್ಪನಂಥ ಹೆರಳೊಲಿವುತ ನೀರೊಳು

ಮುತ್ತಿನ ಸರಪದಕ್ಹೊಳೆಯುತಲಿ

ಬುಕ್ಕ್ಹಿಟ್ಟು ಗಂಧ ಮಲ್ಲಿಗೆ ಪಾರಿಜಾತವು

ತೆಪ್ಪದಂದದಲಿ ತೇಲಾಡುತಿರೆ22

ಅಂಬುಜಮುಖಿಯರು ಸಂಭ್ರಮದಿಂದಲಿ

****