Showing posts with label ಏನ ಮಾಡಲಿ ಶ್ರೀಹರಿ ಇಂಥ purandara vittala. Show all posts
Showing posts with label ಏನ ಮಾಡಲಿ ಶ್ರೀಹರಿ ಇಂಥ purandara vittala. Show all posts

Wednesday, 4 December 2019

ಏನ ಮಾಡಲಿ ಶ್ರೀಹರಿ ಇಂಥ purandara vittala

ಪುರಂದರದಾಸರು
ಏನ ಮಾಡಲಿ ಶ್ರೀಹರಿ ಇಂಥ |ಮಾನವಜನ್ಮ ನಚ್ಚಿಸಬಹುದೆ? ಪ

ಮಾತನಾಡದೆ ಮೌನದೊಳಿದ್ದರೆ-ಮೂಕ-|ನೀತನೆಂದು ಧಿಕ್ಕರಿಸುವರು ||ಚಾತುರ್ಯದಿಂದಲಿ ಮಾತುಗಳಾಡಲು |ಈತನು ಬಲು ಬಾಯ್ಬಡಿಕನೆಂಬುವರಯ್ಯ 1

ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |ಬಡಿವಾರದವನೆಂದಾಡುವರು ||ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |ನಡತೆ ಹೀನನೆಂದು ಬಲು ನಿಂದಿಸುವರಯ್ಯ 2

ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |ನಿಷ್ಟೆಯೇನು ಸುಟ್ಟಿತೆಂಬರು |ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ 3

ಒಲಪಿನೊಳ್ಚೆನ್ನಿಗತನವನು ಮಾಡಲು |ಬಲು ಹೆಮ್ಮೆಗಾರನೆಂದಾಡುವರು ||ಸುಲಭತನದಿ ತಾ ನಿಗರ್ವಿಯಾಗಿದ್ದರೆ |ಕಲಿಯುಗದಲಿ ಮಂದಮತಿಯೆಂಬುವರಯ್ಯ 4

ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||ಧರೆಯೊಳಗಿಹ ಪರಿಯಂತರ ಸಲಹೆನ್ನ |ಕರುಣವಾರಿಧಿ ಶ್ರೀಪುರಂದರವಿಠಲ5
*******