ಮಾಂಡ್ ರಾಗ ಕೇರವಾ ತಾಳ
ಹರಿಹರಿ ಎನ್ನಿ ಹರಿವುದು ಪಾಪ ಧರೆಯೊಳು ಧರೆಯೊಳು
ಕರಮುಗಿದು ಗುರುವಿಗೆ ಕೇಳುವುದು ಬಲು ಮೇಲು ||ಧ್ರುವ||
ಮೂಢಗೆ ಉಪಾಯ ಹೇಳಿದರೆ ತಿಳಿವದೆ ತಿಳಿವದೆ
ಖೋಡಿಗೆ ಸುಲಕ್ಷಣದ ಮಾತು ಹೊಳೆವದೆ ||೧||
ಮೋಡದ ಮುಸುಕಿನಲಿ ಸೂರ್ಯನ ಬಿಸಿಲು ಬೀಳುದೆ ಬೀಳುದೆ
ಗೂಢ ಗುರುವಿನ ಮಾತಿದು ನಾಡಿಗೆ ತಿಳಿವುದೆ ||೨||
ವಿಷ ಕಚ್ಚಿದ ಮನಕೆ ಸುಘನ ಭಾಸುದೆ ಭಾಸುದೆ
ತುಸು ಝರಿ ಇಲ್ಲದ ಬಾವಿಲಿ ನೀರು ಸೂಸುದೆ ಸೂಸುದೆ ||೩||
ಹಸೆಗೆಟ್ಟಿಹ ಕುಕ್ಕಡಿನೂಲ್ಹಾಸಿಗೆ ಬಾಹುದೆ ಬಾಹುದೆ
ಕಸಕಡ್ಡಿಲ್ಲದ ಮುಗಿಲೆಂದಿಗೆ ತಾ ಮಾಸುದೆ ||೪||
ಮೀಸಲ ಮನ ಒಂದಾದರೆ ಸಾಕು ತಿಳಕೊಳ್ಳಿ ತಿಳಕೊಳ್ಳಿ
ಭಾಸ್ಕರ ಗುರುರಾಯನ ಶ್ರೀಪಾದಕೆ ಬಲಗೊಳ್ಳಿ ಬಲಗೊಳ್ಳಿ ||೫||
ಲೇಸಿನ ನಿಜಸುಖ ನೆರೆಗೊಳ್ಳೆ ಮಹಿಪತಿ ನಿನ್ನಲ್ಲಿ ನಿನ್ನಲ್ಲಿ
ಹೇಸಿ ಮುಖದೋರದೆ ಹೋಗುವುದು ಭವದ ತಳ್ಳಿ ||೬||
****

ಹರಿಹರಿ ಎನ್ನಿ ಹರಿವದು ಪಾಪ ಧರೆಯೊಳು ಧರೆಯೊಳು ಕರಮುಗಿದು ಗುರುವಿಗೆ ಕೇಳುವುದು ಬಲುಮೇಲು ಪ
ಮೂಢಗೆ ಉಪಾಯ ಹೇಳಿದರೆ ತಿಳುವದೆ ತಿಳುವದೆ ಖೋಡಿಗೆ ಸುಲಕ್ಷಣದ ಮಾತು ಹೊಳೆವದೆ 1
ಬಿಸಲು ಬೀಳುದೆ ಬೀಳುದೆ ಗೂಢ ಗುರುವಿನ ಮಾತಿದು ನಾಡಿಗೆ ತಿಳುವದೆ 2
ವಿಷ ಕಚ್ಚಿದ ಮನಕೆ ಸುಘನ ಭಾಸುದೆ ಭಾಸುದೆ ತುಸು ಝರಿ ಇಲ್ಲದೆ ಬಾವಿಲಿ ನೀರು ಸೂಸುದೆ ಸೂಸುದೆ 3
ಹಸಗೆಟ್ಟಹ್ಯ ಕುಕ್ಕಡಿನೂಲ್ಹಾಸಿಗೆ ಬಾಹುದೆ ಬಾಹುದೆ ಕಸಕಡ್ಡಿಲ್ಲದ ಮುಗಿಲೆಂದಿಗೆ ತಾ ಮಾಸುದೆ 4
ಮೀಸಲ ಮನ ಒಂದಾದರೆ ಸಾಕು ತಿಳಿಕೊಳ್ಳಿ ತಿಳಿಕೊಳ್ಳಿ ಭಾಸ್ಕರ ಗುರುರಾಯನ ಶ್ರೀಪಾದಕೆ ಬಲಗೊಳ್ಳಿ ಬಲಗೊಳ್ಳಿ 5
ಲೇಸಿನ ನಿಜಸುಖ ನೆರೆಗೊಳ್ಳು ಮಹಿಪತಿ ನಿನ್ನಲ್ಲಿ ನಿನ್ನಲ್ಲಿ ಹೇಸಿ ಮುಖದೋರದೆ ಹೋಗುವುದು ಭವದ ತಳ್ಳಿ 6
****