ರಾಗ : ಶಂಕರಾಭರಣ ತಾಳ : ತ್ರಿವಿಡಿ
ಶೈಲರಾಜ ಸುತೆಯೇ ಗೌರೀ ।
ಕಾಲ ಹಂಸಗಾಮಿನೀ ।। ಪಲ್ಲವಿ ।।
ನಿರುತವು ನಿನ್ನನು ನಾ ।
ಪರಿಪರಿಯಿಂ ನುಡಿಸುವೆನೆ ।
ಸಿರಿಯ ವರನ ಚರಿತೆ ।
ಅರಿತು ಪಾಡು ।। ಚರಣ ।।
ನೀಲಕುಂತಳೇ ಪೊರೆಯೇ । ಶಶಿ ।
ಮೌಳಿ ಮೋಹದರಸಿಯೇ ।
ಶೂಲಪಾಣಿಯೇ ಕಲುಷ ।
ಕಳೆದು ಒಲಿದು ಪಾಲಿಸೆ ।। ಚರಣ ।।
ಕಂತು ಪಿತ ನಮ್ಮ ಶ್ರೀರಂಗೇಶವಿಠಲನ ಪದ ।
ಸಂತತ ನುತಿಪ ।
ಮತಿಯನ್ನಿತ್ತು ಭ್ರಾ೦ತಿಯ ನೀಗೆ ।। ಚರಣ ।।
ಶೈಲರಾಜ ಸುತೆಯೇ = ಪರ್ವತರಾಜನ ಪುತ್ರಿ
ನೀಲಕುಂತಳೇ = ಕಪ್ಪು ಕೂದಲು ಉಳ್ಳವಳು
ಶಶಿಮೌಳಿ = ಶ್ರೀ ರುದ್ರದೇವರು
*******