Showing posts with label ಪಾದ ಭಕ್ತರನ ಪೊರೆವ ಪಾದಾ vijaya vittala. Show all posts
Showing posts with label ಪಾದ ಭಕ್ತರನ ಪೊರೆವ ಪಾದಾ vijaya vittala. Show all posts

Wednesday, 16 October 2019

ಪಾದ ಭಕ್ತರನ ಪೊರೆವ ಪಾದಾ ankita vijaya vittala

ವಿಜಯದಾಸ
ಪಾದಾ ಭಕ್ತರನ ಪೊರೆವ ಪಾದಾ
ಪಾದಾ ಸಿರಿದೇವಿ ಉರದಲ್ಲಿ ಒಪ್ಪುವ ಪಾದಾ ಪ

ಧರಣಿಪತಿ ಬಲಿಯನ್ನು ನೆಲಕೆ ಒತ್ತಿದ ಪಾದಾ
ಸುರನದಿಯ ಹರುಷದಲಿ ಪಡೆದ ಪಾದಾ
ಧುರದೊಳಗೆ ಪಾರ್ಥನ ಶಿರವ ಕಾಯ್ದ ಪಾದಾ
ಸುರರು ಸನಕಾದಿಗಳು ವಂದಿಸುವ ಪಾದಾ 1

ಕೋಪದಲಿ ಉರಗನ ಪೆಡೆಯ ತುಳಿದ ಪಾದಾ
ತಾಪಸರ ಮನಕೆ ನಿಲಕದ ಪಾದಾ
ಭೂಪ ಕೌರವನ ತಲೆಕೆಳಗೆ ಮಾಡಿದ ಪಾದಾ
ಕಾಪಾಲಿ ಪೂಜಿಸುವ ಕಡು ದಿವ್ಯ ಪಾದಾ2

ಹಸುಳೆತನದಲಿ ಶಕಟಾಸುರನನೊದೆದ ಪಾದಾ
ಋಷಿಪತ್ನಿ ಶಾಪ ವಿಶ್ಶಾಪ ಪಾದಾ
ಕರ್ತು ರಿಪು ವಿನಾಶ ಕರದಿ ಮೆರೆವ ಪಾದಾ
ವಸುಧಿಯೊಳು ವಿಜಯವಿಠ್ಠಲನ ಪಾದಾ3
********