..
ಕಾಯೊ ಕಾಯೊ | ಕಾಯೊ ಕಾಯೋ ಕಂಸಾರಿ ನಿನ್ನ ಪದ
ತೋಯಜಕೆರಗುವೆ | ಕಾಯಜ ಜನಕ ಪ
ಪಾಥÀಜ ಭವವಿಧಾತ ಸುಮನಸ
ಪ್ರಾತವಿನುತ ಮಾನಾಥನೆ ನಿರುತ 1
ಭದ್ರಮೂರುತಿ ಬಲಭದ್ರಾನುಜ ಮಂದ
ರಾದ್ರಿಪಾಣಿ ಸಮುದ್ರ ಶಯನ2
ಖೇಟವರೂಧ ಕಿರೀಟಸೂತ ಶತ |
ಕೋಟಿದಿನಪ ನಿಭ ಘೋಟಕವದನ 3
ಕಂತು ಜನಕ ಮಾವಾಂತಕ ಮಾನವ
ದಂತಿವೈರಿ ಜಗದಂತರಿಯಾಮಿ 4
ಸಾಮಗಾನಪ್ರೀಯ ಶಾಮಸುಂದರ
ವ್ಯೊಮ ನೃಪನ ಜಾಮಾತನೆ ಜವದಿ 5
***