Showing posts with label ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ mahipati. Show all posts
Showing posts with label ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ mahipati. Show all posts

Wednesday, 1 September 2021

ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ಇನ್ನೊಂದಿಹವೆಂಬನ್ಯ ಪಥವಳಿದು ಉನ್ಮನಿಯೊಳು ಘನಸುಖ ಅನುಭವಿಸುತ pa


ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ ತುಂಗ ವಿಕ್ರಮನ ಸಂಗ ಸುಖವನರಿದು ಅನುದಿನ ಇಂಗಿತವಾಗಿ ನೀ ಗಂಗೆಯೊಳು ಜಲ ಬೆರೆದಾ ಸುಸಂಗದಿ 1 

ನಾನು ನಾನೆಂಬದಳಿದು ನಿನ್ನೊಳು ನೀನೆ ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು ತಾನೆ ತಾನಾಗಿ ತನುವಿನೊಳು ತೋರುವದು ಘನಗುರುವಚನಾನುಭವದಲಿ ಸೇವಿಸಿ ಸ್ವಾನುಭವದ ಸುಖದಲಿ ಲೋಲ್ಯಾಡುತ 2 

ಮರೆದು ಮಾಯದ ಮಾಟವ ಅರಿತು ನೋಡು ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ ತಾರಕಗುರು ಸಾರುವ ಕರುಣ ನೋಟವ ಅರವಿನೊಳಿರು ಮಹಿಪತಿ ಗುರುಪಾದದಿ ಪರಮಾನಂದದಿ ಸುಖ ಸೂರ್ಯಾಡುತ 3

****