..
kruti by shantibai dasaru ಶಾಂತಿಬಾಯಿ ದಾಸರು
ಹರಹರ ವಿಶ್ವೇಶ್ವರ ಕರುಣಾಕರ
ಪರಮ ಪುರುಷ ದೇವಾ
ಚರಾಚರವ ತುಂಬಿಭರಿತವಾಗಿ
ಸ್ಮರಿಸುವ ಭಕ್ತರ ತ್ವರಿತದಿ ಪಾಲಿಪ ಪ
ಗಜಾಸುರನೆಂತೆಂಬ ದನುಜನ
ವಿಜಯನಾಗಿ ತೊಗಲನ್ನು ಪೊತ್ತೆ
ಭುಜಗ ಭೂಷಣ ನೀ ಸುಜನರ ಪಾಲಿಪ
ನಿಜಾನಂದವ ನೀವಾ ಚಿನ್ಮಯನೇ 1
ತನುಮನದೊಳಗೆಲ್ಲಾ ಹೊಳೆಯುತಲಿರ್ಪಾ
ಜನಜನಿತಳಲ್ಲಿ ಪ್ರಣವರೂಪನಾದ
ತುಂಬುತ್ತಾ ತುಳುಕುತ್ತಾ
ಘನಪರಮಾನಂದಾ ಸಚ್ಚಿದ್ರೂಪಾ 2
ಒಳಹೊರಗೆಂಬೀ ಭೇದಗಳೆಲ್ಲವ (ಹೊರಗೆ ಒಳಗೆ)
ಹರಣ ಮಾಡುತಿರ್ಪಾ
ಹರನೇ ನಾನೀನಾದ ಕಾರಣ
ಬೆರತು ನಿನ್ನೊಳು ಸ್ಮರಿಸುವೆ ಭರದಿ 3
ಚಿಂತೆಗಳೆಲ್ಲವನೀಗೆ ನಿಜಾನಂದ
ಸಂತಸಗಳನೀವಾ
ಅಂತವಿಲ್ಲದಾನಂತ ಪರಾತ್ಪರ
ಶಾಂತಿ ಪದವನೀವ ಮಹಾದೇವಾ 4
***