Showing posts with label ಕಾಣೆವಾವಿದನು ಕಾಣೆವಾವಿದನಾವ ಶಾಸ್ತ್ರದಲಿ ವಿದುಗಳ gopalarya. Show all posts
Showing posts with label ಕಾಣೆವಾವಿದನು ಕಾಣೆವಾವಿದನಾವ ಶಾಸ್ತ್ರದಲಿ ವಿದುಗಳ gopalarya. Show all posts

Thursday 5 August 2021

ಕಾಣೆವಾವಿದನು ಕಾಣೆವಾವಿದನಾವ ಶಾಸ್ತ್ರದಲಿ ವಿದುಗಳ ankita gopalarya

 by gopalaryaru

ಕಾಣೆವಾವಿದನು ಕಾಣೆವಾವಿದನಾವ ಶಾಸ್ತ್ರದಲಿ ವಿದುಗಳ ಪ್ರಮಾಣ ವಚನದಲಿ ಮೂರನೆಯ ಪಥದಾ ಪ

ಜಾಣಿಲಾತ್ಮನ ಸಮಾಧಿಯಲನುಭವಿಸಿ ಸುಖವಕಾಣದೆ ಬರಿದೆ ಮುಕುತರಾವೆಂಬ ಪರಿಯಾ ಅ.ಪ

ತಾನೆ ಚೇತನವಂತೆ ತನಗೆ ಕರ್ಮಗಳಂತೆತಾನೆ ಸುಖಮಯನಂತೆ ತಾಪವನಂತೆತಾನೆ ಬೋಮವದಂತೆ ಹಾನಿವೃದ್ಧಿಗಳಂತೆತಾನೆ ನಿರ್ಲೇಪಸ್ತುತಿನಿಂದೆ ತನಗಂತೊ 1ಬೋಧೆಯು ತಾನಂತೆ ಸಾಧನವು ಬೇಕಂತೆಭೇದವಿಲ್ಲವದಂತೆ ಭೀತಿ ತನಗಂತೆನಾದ ಬಿಂದುಗಳನರಿದಿಪ್ಪಗತಿಯಂತೆಪಾದಾಭಿಮಾನ ಚಿಂತೆಯು ಪೋಗದಂತೆ 2ಕಾಯ ಕರುಣಾಭಿಮಾನಗಳಿಲ್ಲ ತನಗಂತೆಮಾಯೆ ಬಾಧಿಪುದಂತೆ ಮನಸಿನೊಳಗೆಈಯಹಂಕಾರವಿಲ್ಲದ ಬೊಮ್ಮಪದವಂತೆಹೇಯವಿದುಪಾದೇಯವೆನಿಪ ಭ್ರಮೆಯಂತೆ 3ಈಶ ತಾನಂತೆ ತನ್ನಾಶೆಗಳು ಬಿಡವಂತೆಕೋಶ ಸಾಕ್ಷಿಕನಂತೆ ಕೋಪ ತನಗಂತೆಪಾಶವಿಲ್ಲವದಂತೆ ಪಾಡುಪಂಥಗಳಂತೆಈ ಸಕಲ ತಾನಂತೆ ಇನ್ನು ವಿಧಿಯಂತೆ 4ಚೇತನವೆ ತಾನಂತೆ ಚಿತ್ತನಿಲ್ಲದುದಂತೆಪಾತಕಗಳಿಲ್ಲವಂತೆ ಪರಪೀಡೆಯಂತೆಜಾತಿಸೂತಕವೆಂಬ ಜಂಜಡಗಳಿಲ್ಲವಂತೆಮಾತಿನ ರಿಪು ಮತ್ಸರಗಳು ಬಿಡವಂತೆ 5ವಿಶ್ವಾತ್ಮತಾನೆಂಬ ವಿಶ್ವಾಸವುಂಟಂತೆವಿಶ್ವತ್ರೈಜಸರ ನಿಜವರಿಯನಂತೆನಶ್ವರದ ಭೋಗಂಗಳೆಂಬ ನಂಬಿಗೆಯಂತೆವಿಶ್ವಾದಿಗಳ ರೀತಿಯಲ್ಲಿ ಪಗೆಯಂತೆ 6ಅಂಡಪಿಂಡಗಳೈಕ್ಯವೆಂಬ ಬುದ್ಧಿಗಳಂತೆಚಂಡಾಲನಿವನೀತ ಮೇಲೆಂಬುದಂತೆಪಂಡಿತನು ಪ್ರವುಢ ತಾನೆಂಬ ಭಾಷೆಗಳಂತೆಕುಂಡಲಿಯ ಹೆಳವ ಕೇಳ್ದಡೆ ಕುದಿವನಂತೆ7ಚಿನ್ಮಯಾತ್ಮಕನು ತಾನೆಂಬ ಚಿಂತೆಗಳಂತೆತನ್ನವರು ತಾನೆಂಬ ಭ್ರಮೆಪೊಗದಂತೆಸನ್ಮುದ್ರೆಯಂತೆ ಸತ್ಯಾಸತ್ಯವೆರಡಂತೆತನ್ಮಯತೆಯಂತೆ ಲಕ್ಷಣೆಯರಿಯನಂತೆ 8ಗುರುಭಕುತಿಯಂತೆ ವರಕರುಣವಿಲ್ಲವದಂತೆಗುರುಶರಣನಂತವರನುಗೇಳನಂತೆಪರಮಪದ ತಾನಂತೆ ಪಿರಿದು ಸಂಶಯವಂತೆವರ ಮುಕ್ತಿಯಂತೆ ವಾಸನೆಯು ಬಿಡದಂತೆ 9ಈ ಪರಿಯ ಸಂಭಾವನೆಗಳ ಪರಿಹರಿಸಿ ಶ್ರೀಗೋಪಾಲಾರ್ಯ ಜನರಿಗೆ ದಯದಲಿತಾಪಂಗಳನು ಸವರಿ ದಾಟಿಸಯ್ಯಾ ಚಿತ್ಪ್ರತಾಪದಿಂ ನಿಜಪಾದ ಬೋಧೆಯನು ಕೊಟ್ಟು10

***