Showing posts with label ಕದರುಂಡಲಗಿ ಹನುಮಂತದೇವರು ಇಂಥಾ ಕೀರ್ತಿಯ ಮೂರ್ತಿ kadarundalageesha. Show all posts
Showing posts with label ಕದರುಂಡಲಗಿ ಹನುಮಂತದೇವರು ಇಂಥಾ ಕೀರ್ತಿಯ ಮೂರ್ತಿ kadarundalageesha. Show all posts

Saturday, 1 May 2021

ಕದರುಂಡಲಗಿ ಹನುಮಂತದೇವರು ಇಂಥಾ ಕೀರ್ತಿಯ ಮೂರ್ತಿ ankita kadarundalageesha

 ರಾಗ : ಆನಂದಭೈರವಿ ತಾಳ : ರೂಪಕ 

ಕದರುಂಡಲಗಿ -

ಹನುಮಂತದೇವರು ।

ಇಂಥಾ ಕೀರ್ತಿಯ ಮೂರ್ತಿ-

ನ್ನಾರೇ ನೋಡಮ್ಮಯ್ಯ ।। ಪಲ್ಲವಿ ।।


ಸಂತತ ಸೀತಾಪತಿಯ ಧ್ಯಾನರೊಳು

ಕಂತುವಿನಸ್ತ್ರವ 

ಖಂಡಿಸಿದೊಡೆಯಾ ।। ಅ ಪ ।।

ಕಾಶಿ ರಾಮೇಶ್ವರ ಮಧ್ಯದ ದೇಶದಿ 

ಸೂರಿ ಸುಲಿಗೆ ನೋಡಮ್ಮಯ್ಯ ।

ಸಾಸಿರ ಶತ ತುರಗಾವಿ ಪಲ್ಲಕ್ಕಿ-

ಯ ಸರದಾರರ ನೋಡಮ್ಮಯ್ಯ ।

ಭೂಸುರರಾಯರು 

ಸೀಮೆಯ ಸುತ್ತಲು ।

ಗಾಸಿಯ ಮಾಡದೆ 

ಗ್ರಾಮವ ಕಾಯ್ದ ।। ಚರಣ ।।

ತಾರಣ ನಾಮ ಸಂವತ್ಸರ ಶುದ್ಧ -

ವೈಶಾಖದಿ ನೋಡಮ್ಮಯ್ಯ ।

ಧರೆಯೊಳು ಕಲಹ ವಿಪರೀತವ-

ದರೊಳು ರಣಮಂಡಲ 

ನೋಡಮ್ಮಯ್ಯ ।

ಊರೆಲ್ಲ ಮೊರೆಯಿಡೆ 

ಈಕ್ಷಿಸಿ ಮಹಿಮೆಯ ।

ತೋರುವ ಅಭಯ 

ಪ್ರಸಾದವ ಕೊಡುವಾ ।। ಚರಣ ।।

ಸಕಲ ಜನರು ಎಲ್ಲಾ -

ಸ್ವಾಮಿಯಿಂದುಳಿದೆವು 

ಜಯ ನಮೋ 

ಎನೆ ನೋಡಮ್ಮಯ್ಯ ।

ಅಕಲಂಕ ಶೇಷಾನೃಪ -

ಶ್ರೀ ರಾಮರ ಸೇವಕಮಣಿ 

ನೋಡಮ್ಮಯ್ಯ ।

ಲೋಕದಧಿಕ ಗುರು 

ಕದರುಂಡಲೀಶಾ ।

ಬೇಕೆಂದು ನಿಂತಾ 

ಶ್ರೀ ಹನುಮಂತ ।। ಚರಣ ।।

***


ಕದರುಂಡಲಗಿ ಹನುಮಂತದೇವರು

ಇಂಥಾ ಕೀರ್ತಿಯ ಮೂರ್ತಿನ್ನಾರೇ ನೋಡಮ್ಮಯ್ಯ ಪ


ಸಂತತ ಸೀತಾಪತಿಯ ಧ್ಯಾನರೊಳು

ಕಂತುವಿನಸ್ತ್ರವ ಖಂಡಿಸಿದೊಡೆಯಾ ಅ.ಪ.


ಕಾಶಿ ರಾಮೇಶ್ವರ ಮಧ್ಯದ ದೇಶದಿ ಸೂರಿ ಸುಲಿಗೆ ನೋಡಮ್ಮಯ್ಯ

ಸಾಸಿರ ಶತ ತುರಗಾವಿ ಪಲ್ಲಕ್ಕಿಯ ಸರದಾರರ

ನೋಡಮ್ಮಯ್ಯ ಭೂಸುರರಾಯರು ಸೀಮೆಯ ಸುತ್ತಲು

ಗಾಸಿಯ ಮಾಡದೆ ಗ್ರಾಮವ ಕಾಯ್ದ 1


ತಾರಣ ನಾಮ ಸಂವತ್ಸರ ಶುದ್ಧ ವೈಶಾಖದಿ ನೋಡಮ್ಮಯ್ಯ

ಧರೆಯೊಳು ಕಲಹ ವಿಪರೀತವದರೊಳು ರಣಮಂಡಲ ನೋಡಮ್ಮಯ್ಯ

ಊರೆಲ್ಲ ಮೊರೆಯಿಡೆ ಈಕ್ಷಿಸಿ ಮಹಿಮೆಯ

ತೋರುವ ಅಭಯ ಪ್ರಸಾದವ ಕೊಡುವಾ 2


ಸಕಲ ಜನರು ಎಲ್ಲಾ ಸ್ವಾಮಿಯಿಂದುಳಿದೆವು

ಜಯ ನಮೋ ಎನೆ ನೋಡಮ್ಮಯ್ಯ

ಅಕಲಂಕ ಶೇಷಾನೃಪ ಶ್ರೀ ರಾಮರ ಸೇವಕಮಣಿ ನೋಡಮ್ಮಯ್ಯ

ಲೋಕದಧಿಕ ಗುರು ಕದರುಂಡಲೀಶಾ

ಬೇಕೆಂದು ನಿಂತಾ ಶ್ರೀ ಹನುಮಂತ 3

***