Showing posts with label ಲಾಲಿ ಗೋವಿಂದ ಲಾಲಿ ಕೌಸಲ್ಯ rangavittala LAALI GOVINDA LAALI KAUSALYA. Show all posts
Showing posts with label ಲಾಲಿ ಗೋವಿಂದ ಲಾಲಿ ಕೌಸಲ್ಯ rangavittala LAALI GOVINDA LAALI KAUSALYA. Show all posts

Tuesday, 10 December 2019

ಲಾಲಿ ಗೋವಿಂದ ಲಾಲಿ ಕೌಸಲ್ಯ ankita rangavittala LAALI GOVINDA LAALI KAUSALYA

 ರಾಗ ಆನಂದಭೈರವಿ 

Audio by Mrs. Nandini Sripad

ಶ್ರೀ ಶ್ರೀಪಾದರಾಜರ ಕೃತಿ 

ಲಾಲಿ ಗೋವಿಂದ ಲಾಲಿ ಕೌಸಲ್ಯ-ಬಾಲ ಶ್ರೀರಾಮ ಲಾಲಿ ॥ಪ॥
ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ ॥ಅ.ಪ.॥

ಕನಕರತ್ನಗಳಲ್ಲಿ ಕಾಲ್ಗಳನೆ ಹೂಡಿ 
ನಾಲ್ಕು ವೇದಗಳನ್ನು ಸರಪಣಿಯ ಮಾಡಿ ಅ -
ನೇಕ ಭೂಮಂಡಲವ ಹಲಗೆಯನು ಮಾಡಿ ಶ್ರೀಕಾಂತನುಯ್ಯಾಲೆಯನು ವಿರಚಿಸಿದರು ॥ 1 ॥

ಆಶ್ಚರ್ಯಜನಕವಾಗಿ ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಚುತಾನಂತನಿರಲು ತೂಗಿದರು 
ಮಚ್ಚಾವತಾರ ಹರಿಯ ॥ 2 ॥

ಧರ್ಮಸ್ಥಾಪಕನು ಎಂದು ನಿರವಧಿಕ 
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು 
ಕೂರ್ಮಾವತಾರ ಹರಿಯ ॥ 3 ॥

ಸರಸಿಜಾಕ್ಷಿಯರೆಲ್ಲರು ಜನವಶೀ -
ಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು 
ವರಹಾವತಾರ ಹರಿಯ ॥ 4 ॥

ಕರಿಕುಂಭಗಳ ಪೋಲುವ ಕುಚದಲ್ಲಿ 
ಹಾರಪದಕವು ಹೊಳೆಯಲು
ವರವರ್ಣಿನಿಯರು ಪಾಡಿ ತೂಗಿದರು 
ನರಸಿಂಹಾವತಾರ ಹರಿಯ ॥ 5 ॥

ಭಾಮಾಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು 
ವಾಮನಾವತಾರ ಹರಿಯ ॥ 6 ॥

ಸಾಮಜವರದನೆಂದು ಅತುಳ ಭೃಗು 
ರಾಮಾವತಾರನೆಂದು
ಶ್ರೀಮದಾನಂದ ಹರಿಯ ತೂಗಿದರು 
ಪ್ರೇಮಾತಿರೇಕದಿಂದ ॥ 7 ॥

ಕಾಮನಿಗೆ ಕಾಮನೆಂದು ಸುರಸಾರ್ವ -
ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು 
ರಾಮಾವತಾರ ಹರಿಯ ॥ 8 ॥

ಸೃಷ್ಟಿಯ ಕರ್ತನೆಂದು ಜಗದೊಳಗೆ 
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು ತೂಗಿದರು 
ಕೃಷ್ಣಾವತಾರ ಹರಿಯ ॥ 9 ॥

ವೃದ್ಧನಾರಿಯರೆಲ್ಲರು ಜಗದೊಳಗೆ ಪ್ರ -
ಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು 
ಬೌದ್ಧಾವತಾರ ಹರಿಯ ॥ 10 ॥

ಥಳಥಳಾತ್ಕಾರದಿಂದ ರಂಜಿಸುವ 
ಮಲಯಜಲೇಪದಿಂದ
ಜಲಜಗಂಧಿಯರು ಪಾಡಿ ತೂಗಿದರು 
ಕಲ್ಕ್ಯಾವತಾರ ಹರಿಯ ॥ 11 ॥

ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಾಮಣಿಯರೆಲ್ಲರು ॥ 12 ॥

ಪದ್ಮರಾಗವ ಪೋಲುವ ಹರಿಪಾದ
ಪದ್ಮವನು ತಮ್ಮ ಹೃದಯ
ಪದ್ಮದಲಿ ನಿಲಿಸಿ ಪಾಡಿ ತೂಗಿದರು 
ಪದ್ಮಿನೀ ಭಾಮಿನಿಯರು ॥ 13 ॥

ಹಸ್ತಭೂಷಣ ಮೆರೆಯಲು ದಿವ್ಯತರ
ಹಸ್ತಲಾಘವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು 
ಹಸ್ತಿನೀ ಭಾಮಿನಿಯರು ॥ 14 ॥

ಮತ್ತಗಜಗಾಮಿನಿಯರು ದಿವ್ಯತರ
ಚಿತ್ರವಸ್ತ್ರಗಳನುಟ್ಟು
ಚಿತ್ತಸಂತೋಷದಿಂದ ತೂಗಿದರು 
ಚಿತ್ತಿನೀ ಭಾಮಿನಿಯರು ॥ 15 ॥

ಕಂಕಣಧ್ವನಿಗಳಿಂದ ರಂಜಿಸುವ 
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು 
ಶಂಕಿನೀ ಭಾಮಿನಿಯರು ॥ 16 ॥

ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ 
ಮಕರಿಕಾಪತ್ರ ಬರೆದು
ಲಿಕುಚಸ್ತನಿಯರು ಪಾಡಿ ತೂಗಿದರು 
ಅಕಳಂಕಚರಿತ ಹರಿಯ ॥ 17 ॥

ಆನಂದಸದನದೊಳಗೆ ಗೋಪಿಯರು 
ಆ ನಂದಸುತನ ಕಂಡು
ಆನಂದ ಭರಿತರಾಗಿ ತೂಗಿದರು 
ಆನಂದಭೈರವಿಯಿಂದ ॥ 18 ॥

ಪಲ್ಲವಾಧರೆಯರೆಲ್ಲ ಈ ಶಿಶುವ 
ತುಲ್ಯವರ್ಜಿತನೆನುತಲಿ ।
ಸಲ್ಲಲಿತಗಾನದಿಂದ ತೂಗಿದರು 
ಕಲ್ಯಾಣಿರಾಗದಿಂದ ॥ 19 ॥

ದೇವಾಧಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು 
ದೇವಗಾಂಧಾರದಿಂದ ॥ 20 ॥

ನೀಲಘನ ಲೀಲ ಜೋ ಜೋ ಕರು -
ಣಾಲವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ ಜೋ ಜೋ ಪರಮಾತ್ಮ
ಬಾಲಗೋಪಾಲ ಜೋ ಜೋ ॥ 21 ॥

ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣ 
ಇಂದುರವಿ ನೇತ್ರ ಜೋ ಜೋ
ಇಂದುಕುಲಪುತ್ರ ಜೋ ಜೋ ಪರಮಾತ್ಮ 
ಇಂದಿರಾರಮಣ ಜೋ ಜೋ ॥ 22 ॥

ತುಂಗ ಭವಭಂಗ ಜೋ ಜೋ ಪರಮಾತ್ಮ
ರಂಗ ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ 
 ರಂಗವಿಠ್ಠಲನೆ ಜೋ ಜೋ ॥ 23 ॥
***

Lali govinda lali | kausalya bala shrirama lali ||pa||

Lali munivandya lali | janaki ramana shrirama lali ||a.pa ||

Kanakaratnagalalli kalgalane hudi | nalku vedagalannu sarapaniya madi |
aneka bhoomandalava halageya maadi | shreekaantanuyyaaleyanu virachisidaru || 1 ||

Ashcaryajanakavagi nirmisida | pacceya tottilalli |
acyutanantaniralu tugidaru | matsyavatara hariya || 2 ||

Dharmasthapakanu endu | niravadhika nirmala charitanendu |
marma karmagala padi tugidaru | kurmavatara hariya || 3 ||

Sarasijakshiyarellaru | janavashikara divya rupanendu |
parama harushadali padi tugidaru | varahavatara hariya ||4||

Karu kumbhagala poluva | kucadalli hara padakavu holeyalu |
vara varniyaru padi tugidaru | narasimhavatara hariya || 5 ||

Bhamamaniyarellaro | yaduvamsha somanivanendu pogali |
nemadindali padi tugidaru | vamanavatara hariya || 6 ||

Samajavaradanendu | atula bhrugu ramavataranendu |
shrimadananda hariya tugidaru | prematirekadinda || 7 ||

Kamanige kamanendu | surasarva bhauma gunadhamanendu |
vamanetreyaru padi tugidaru | ramavatara hariya || 8 ||

Srushtiya kartanendu | jagadolage shishta santushtanendu |
drushtantarahitanendu tugidaru | krushnavatara hariya || 9 ||

Vruddha nariyarellaru | jagadolage prasiddha nivanendu pogali |
baddhanuragadinda tugidaru | bauddhavatara hariya || 10 ||

Thalathalatkaradinda | ranjisuva malayajalepadinda |
jalajagandhiyaru padi tugidaru | kalkyavatara hariya || 11 ||

Kanakamaya kacitavada | talpadali vanajabhava janakaniralu |
vanajanabhanna padi tugidaru | vanitamaniyarellaru || 12 ||

Padmaragava poluva | haripada padmavanu tamma hrudayaa |
padmadali nillisi padi tugidaru | padmini bhaminiyaru ||13||

Hastabhushana mereyalu | divyatara | hastalagavagalinda |
hastagala pididukondu tugidaru | hastini bhaminiyaru ||14||

Mattagajagaminiyaru | divyatara | citra vastragalanuttu |
citta santoshadimda tugidaru | cittini bhaminiyaru || 15 ||

Kankana dhvanigalinda | ramjisuva | kimkini svaragalinda |
pankajakshiyaru padi tugidaru | kinkini bhaminiyaru ||16||

Cokka kasturi pankadinda | ranjisuva | makarika patra baredu |
likucastaniyaru padi tugidaru | akalamka carita hariya || 17 ||

Pallavareyarellaroo  | I shishuvu | tulyavarjitanenutali |
sallulita ganadinda tugidaru | kalyani ragadinda || 18 ||

Ananda sadanadolage | gopiyaru | Anandasutana kandu |
anandabharitaragi tugidaru | Anandabhairaviyinda || 19 ||

Devadhidevanendoo | I shishuva | bhavanatitanendoo |
devagandharvaru padi tugidaru | devagandharadimda ||20||

Nila ghanalila jo jo | karunala bala | shrikrushna jo jo |
lilavatara jo jo | paramatma | balagopala jo jo || 21 ||

Indudhara mitra jo jo | shrikrushna | indu ravi netra jo jo |
indu kulaputra jo jo | paramatma | indiraramana jo jo || 22 ||

Tunga bhavabhanmga jo jo | paramatma | ranga krupanga jo jo |
mangalapanga jo jo | mohanna | rangaviththalane jo jo || 23 ||

*

Laali govinda laali | kausalya bala shrirama laali |
Laali munivandya laali | janaki ramana shrirama laali ||pa ||

Ashcharyajanakavagi nirmisida | paccheya tottilalli |
achyutanantaniralu tugidaru matsyavatara hariya || 1 ||

Dharmasthapakanu endu | niravadhika nirmala charitanendu |
marma karmagala padi tugidaru koormavatara hariya || 2 ||

Sarasijakshiyarellaru | janavashikara divya rupanendu |
parama harushadali padi tugidaru varahavatara hariya || 3 ||

Karu kumbhagala poluva | kuchadalli hara padakavu holeyalu |
vara varniyaru padi tugidaru narasimhavatara hariya || 4 ||

Bhamamaniyarellaru | yaduvamsha somanivanendu pogali |
nemadindali padi tugidaru vamanavatara hariya || 5 ||

Samajavaradanendu | atula bhrugu ramavataranendu |
shrimadananda hariya tugidaru prematirekadinda || 6 ||

Kamanige kamanendu | surasarva bhauma gunadhamanendu |
vamanetreyaru padi tugidaru ramavatara hariya || 7 ||

Srushtiya kartanendu | jagadolage shishta santushtanendu |
drushtantarahitanendu tugidaru krushnavatara hariya || 8 ||

Vruddha nariyarellaru | jagadolage prasiddha nivanendu pogali |
baddhanuragadinda tugidaru bauddhavatara hariya || 9 ||

Thalathalatkaradinda | ranjisuva malayajalepadinda |
jalajagandhiyaru padi tugidaru kalkyavatara hariya || 10 ||

Kanakamaya kachitavada | talpadali vanajabhava janakaniralu |
vanajanabhanna padi tugidaru vanitaramaniyarellaru || 11 ||

Padmaraagava poluva | haripaada padmavanu tamma hrudayaa |
padmadali nilisi padi tugidaru padmini bhaminiyaru || 12 ||

Hastabhushana mereyalu | divyatara | hastalaaghavagalinda |
hastagala pididukondu tugidaru hastini bhaminiyaru ||13||

Mattagajagaaminiyaru | divyatara | chitra vastragalanuttu |
chitta santoshadinda tugidaru chittini bhaminiyaru || 14 ||

Kankana dhvanigalinda | ranjisuva | kinkini svaragalinda |
pankajakshiyaru padi tugidaru kinkini bhaminiyaru ||15||

kasturi pankadinda | ranjisuva | makarika patra baredu |
likuchastaniyaru padi tugidaru akalanka charita hariya || 16 ||

Pallavaareyarellaru  | ee shishuvu | tulyavarjitanenutali |
sallulita ganadinda tugidaru  kalyani ragadinda || 17 ||

Ananda sadanadolage | gopiyaru | Anandasutana kandu |
anandabharitaragi tugidaru  Ananda bhairaviyinda || 18 ||

Devadhidevanendu | ee shishuvu  bhavanateetanendu |
devagandharvaru padi tugidaru  devagandharadinda ||19||

Neela ghanaleela jo jo | karunala bala  shrikrishna jo jo |
leelavatara jo jo | paramatma | balagopala jo jo || 20 ||

Indudhara mitra jo jo | shrikrishna | indu ravi netra jo jo |
indu kulaputra jo jo | paramatma | indiraramana jo jo || 21 ||

Tunga bhavabhanga jo jo | paramatma | ranga krupanga jo jo |
mangalapanga jo jo | mohanna | rangaviththalane jo jo || 22 ||
***


just scroll down for other devaranama 


ರಚನೆ : ಶ್ರೀಪಾದರಾಜರು
ರಾಗ : ಆನಂದಭೈರವಿ  ತಾಳ : ಝಂಪೆ

ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ ।                   (ಪ )

ಲಾಲಿ ಮುನಿವಂದ್ಯ  ಲಾಲಿ  ಜಾನಕಿ
ರಮಣ  ಶ್ರೀ ರಾಮ  ಲಾಲಿ ।।             ( ಅ. ಪ )


ಕನಕರತ್ನಗಳಲ್ಲಿ  ಕಾಲ್ಗಳನೆ    ಹೂಡಿ
ನಾಲ್ಕು ವೇದಗಳನ್ನು  ಸರಪಣಿಯ   ಮಾಡಿ
ಅನೇಕ ಭೂಮಂಡಲವ  ಹಲಗೆಯ ಮಾಡಿ
ಶ್ರೀಕಾಂತನ  ಉಯ್ಯಾಲೆಯನು   ವಿಚಾರಿಸಿದರು ।।೧।।

ಆಶ್ಚರ್ಯಜನಕವಾಗಿ  ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು  ತೂಗಿದರು
ಮತ್ಸ್ಯಾವತಾರ ಹರಿಯ ।।೨।।

ಧರ್ಮಸ್ಥಾಪಕನು ಎಂದು  ನಿರ್ವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ  ತೂಗಿದರು
ಕೂರ್ಮಾವತಾರ  ಹರಿಯ ।।೩।।

ಸರಸಿಜಾಕ್ಷಿಯರೆಲ್ಲರೂ  ಜನವಶಿ
ಕರ  ದಿವ್ಯ ರೂಪನೆಂದು
ಪರಮ ಹರುಷದಲಿ ಪಾಡಿ  ತೂಗಿದರು
ವರಾಹವತಾರ  ಹರಿಯ ।।೪।।

ಕರಿ ಕುಂಭಗಳ  ಪೋಲುವ ಕುಚದಲ್ಲಿ
ಹಾರ  ಪದಕವು ಹೊಳೆಯಲು
ವರವರ್ಣಿನಿಯರು  ಪಾಡಿ ತೂಗಿದರು
ನರಸಿಂಹಾವತಾರ  ಹರಿಯ ।।೫।।

ಭಾಮಾಮಣಿಯರೆಲ್ಲರು  ಯದುವಂಶ
ಸೋಮನಿವನೆಂದು  ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನವತಾರ ಹರಿಯ ।।೬।।

ಸಾಮಜವರದನೆಂದು  ಅತುಳ  ಭೃಗು
ರಾಮವತಾರನೆಂದು
ಶ್ರೀಮದಾನಂದ  ಹರಿಯ ತೂಗಿದರು
ಪ್ರೇಮಾತಿರೇಕದಿಂದ।।೭।।

ಕಾಮನಿಗೆ ಕಾಮನೆಂದು  ಸುರಸಾರ್ವ
ಭೌಮ  ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರ ಹರಿಯ ।।೮।।

ಸೃಷ್ಟಿಯ ಕರ್ತನೆಂದು  ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರ  ಹಿತನೆಂದು  ತೂಗಿದರು
ಕೃಷ್ಣಾವತಾರ  ಹರಿಯ ।।೯।।

ವೃದ್ಧ  ನಾರಿಯರೆಲ್ಲರೂ  ಜಗದೊಳಗೆ ಪ್ರ
ಸಿದ್ಧನಿವನೆಂದು  ಪೊಗಳಿ
ಬದ್ಧಾನುರಾಗದಿಂದ  ತೂಗಿದರು
ಬೌದ್ಧಾವಾತಾರ  ಹರಿಯ ।।೧೦।।

ತಲತಲಾಂತರದಿಂದ  ರಂಜಿಸುವ
ಮಲಯಜ ಲೇಪದಿಂದ
ಜಲಜಗಂಧಿಯರು  ಪಾಡಿ ತೂಗಿದರು
ಕಲ್ಕ್ಯಾವತಾರ ಹರಿಯ ।।೧೧।।

ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ  ಪಾಡಿ ತೂಗಿದರು
ವನಿತಮಣಿಯರೆಲ್ಲರು ।।೧೨।।

ಪದ್ಮರಾಗವ ಪೋಲುವ  ಹರಿಪಾದ
ಪದ್ಮವನುತ್ತಮ  ಹೃದಯ
ಪದ್ಮದಲಿ   ನಿಲ್ಲಿಸಿ  ಪಾಡಿ ತೂಗಿದರು
ಪದ್ಮಿನಿ ಭಾಮಿನಿಯರು ।।೧೩।।

ಹಸ್ತಭೂಷಣವ  ಮೆರೆಯಲು  ದಿವ್ಯತಾರ
ಹಸ್ತಳಗವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನಿ ಭಾಮಿನಿಯರು ।।೧೪।।

ಮತ್ತ ಗಜಗಾಮಿನಿಯರು  ದಿವ್ಯತಾರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ  ಸಂತೋಷದಿಂದ ತೂಗಿದರು
ಚಿತ್ತಿನಿ  ಭಾಮಿನಿಯರು ।।೧೫।।

ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣಿ ಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿಣಿ  ಭಾಮಿನಿಯರು ।।೧೬।।

ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಾಕರಿಕ  ಪತ್ರ ಬರೆದು
ಲಿಕುಚಾಸ್ತನಿಯರು  ಪಾಡಿ ತೂಗಿದರು
ಅಕಳಂಕ ಚರಿತ ಹರಿಯ ।।೧೭।।

ಪಲ್ಲವಧಾರೆಯರೆಲ್ಲ   ಈ ಶಿಶುವು
ತುಲ್ಯವಾರಿಜಾತವೆನುತಲಿ
ಸಲ್ಲಲಿತಗಾನದಿಂದ ತೂಗಿದರು
ಕಲ್ಯಾಣಿ ರಾಗದಿಂದ ।।೧೮।।

ಆನಂದ ಸದನದೊಳಗೆ ಗೋಪಿಯರು
ಆನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದಭೈರವಿಯಿಂದ ।।೧೯।।

ದೇವಾದಿದೇವನೆಂದು ಈ ಶಿಶುವ
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು
ದೇವಗಾಂಧಾರದಿಂದ ।।೨೦।।

ನೀಲ ಘನಲೀಲ ಜೋ ಜೋ ಕರುಣಾಳ
ವಾಲ ಶ್ರೀ ಕೃಷ್ಣ ಜೋ ಜೋ
ಲೀಲಾವತಾರ  ಜೋ ಜೋ ಪರಮಾತ್ಮ
ಬಾಲಗೋಪಾಲ  ಜೋ ಜೋ ।।೨೧।।

ಇಂಧುಧರನೇತ್ರ  ಜೋ ಜೋ ಶ್ರೀ ಕೃಷ್ಣ
ಇಂಧು  ರವಿನೇತ್ರ ಜೋ ಜೋ
ಇಂಧು  ಕುಲಪುತ್ರ ಜೋ ಜೋ  ಪರಮಾತ್ಮ
ಇಂದಿರಾರಮಣ  ಜೋ ಜೋ ।।೨೨।।

ತುಂಗ ಭವಭಂಗ  ಜೋ ಜೋ ಪರಮಾತ್ಮ
ರಂಗ  ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ
ರಂಗವಿಠಲನೆ  ಜೋ ಜೋ ।।೨೩।।
***********
ರಾಗ : ಆನಂದಭೈರವಿ  ತಾಳ : ಝಂಪೆ

ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ  ||ಪ||

ಲಾಲಿ ಮುನಿವಂದ್ಯ  ಲಾಲಿ  ಜಾನಕಿ
ರಮಣ  ಶ್ರೀ ರಾಮ  ಲಾಲಿ            ||ಅ. ಪ||

ಕನಕರತ್ನಗಳಲ್ಲಿ  ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಲಗೆಯ ಮಾಡಿ
ಶ್ರೀಕಾಂತನ ಉಯ್ಯಾಲೆಯನು ವಿರಚಿಸಿದರು ||೧||

ಆಶ್ಚರ್ಯಜನಕವಾಗಿ  ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು  ತೂಗಿದರು
ಮತ್ಸ್ಯಾವತಾರ ಹರಿಯ                           ||೨||

ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ  ಹರಿಯ                    ||೩||

ಸರಸಿಜಾಕ್ಷಿಯರೆಲ್ಲರು ಜನವಶೀ
ಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಾಹವತಾರ  ಹರಿಯ                   ||೪||

ಕರಿ ಕುಂಭಗಳ  ಪೋಲುವ ಕುಚದಲ್ಲಿ
ಹಾರ  ಪದಕವು ಹೊಳೆಯಲು
ವರವರ್ಣಿನಿಯರು ಪಾಡಿ ತೂಗಿದರು
ನರಸಿಂಹಾವತಾರ ಹರಿಯ           ||೫||

ಭಾಮಾಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನವತಾರ ಹರಿಯ              ||೬||

ಸಾಮಜವರದನೆಂದು ಅತುಳ ಭೃಗು
ರಾಮವತಾರನೆಂದು
ಶ್ರೀಮದಾನಂದ ಹರಿಯ ತೂಗಿದರು
ಪ್ರೇಮಾತಿರೇಕದಿಂದ         ||೭||

ಕಾಮನಿಗೆ ಕಾಮನೆಂದು ಸುರಸಾರ್ವ
ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರಿಯ ಹರಿಯ   ||೮||

ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು ತೂಗಿದರು
ಕೃಷ್ಣಾವತಾರ  ಹರಿಯ           ||೯||

ವೃದ್ಧ  ನಾರಿಯರೆಲ್ಲರು ಜಗದೊಳಗೆ ಪ್ರ
ಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವಾತಾರಿಯ ಹರಿಯ           ||೧೦||

ತಲತಲಾಂತರದಿಂದ ರಂಜಿಸುವ
ಮಲಯಜಲೇಪದಿಂದ
ಜಲಜಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರಿಯ ಹರಿಯ           ||೧೧||

ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಮಣಿಯರೆಲ್ಲರು          ||೧೨||

ಪದ್ಮರಾಗವ ಪೋಲುವ ಹರಿಪಾದ
ಪದ್ಮವನುತ್ತಮ ಹೃದಯ
ಪದ್ಮದಲಿ ನಿಲ್ಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು         ||೧೩||

ಹಸ್ತಭೂಷಣವ ಮೆರೆಯಲು ದಿವ್ಯತಾರ
ಹಸ್ತಳಗವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು         ||೧೪||

ಮತ್ತಗಜಗಾಮಿನಿಯರು ದಿವ್ಯತರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ ಸಂತೋಷದಿಂದ ತೂಗಿದರು
ಚಿತ್ತಿನಿ ಭಾಮಿನಿಯರು     ||೧೫||

ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿಣಿ ಭಾಮಿನಿಯರು     ||೧೬||

ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಾಕರಿಕಾ ಪತ್ರ ಬರೆದು
ಲಿಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ      ||೧೭||

ಪಲ್ಲವಧಾರೆಯರೆಲ್ಲ ಈ ಶಿಶುವು
ತುಲ್ಯವರ್ಜಿತವೆನುತಲಿ
ಸಲ್ಲಲಿತಗಾನದಿಂದ ತೂಗಿದರು
ಕಲ್ಯಾಣಿರಾಗದಿಂದ           ||೧೮||

ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದಭೈರವಿಯಿಂದ        ||೧೯||

ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು
ದೇವಗಾಂಧಾರದಿಂದ            ||೨೦||

ನೀಲಘನಲೀಲ ಜೋ ಜೋ ಕರುಣಲ
ವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ  ಜೋ ಜೋ ಪರಮಾತ್ಮ
ಬಾಲಗೋಪಾಲ  ಜೋ ಜೋ      ||೨೧||

ಇಂಧುಧರಮಿತ್ರ ಜೋ ಜೋ ಶ್ರೀಕೃಷ್ಣ
ಇಂಧು ರವಿನೇತ್ರ ಜೋ ಜೋ
ಇಂಧು  ಕುಲಪುತ್ರ ಜೋ ಜೋ  ಪರಮಾತ್ಮ
ಇಂದಿರಾರಮಣ  ಜೋ ಜೋ         ||೨೨||

ತುಂಗ ಭವಭಂಗ  ಜೋ ಜೋ ಪರಮಾತ್ಮ
ರಂಗ  ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ
ರಂಗವಿಠಲನೆ  ಜೋ ಜೋ         ||೨೩||


******


Lyrics  In  English -
rAga: AnaMdabhairavi   tALa: JaMpe
rachane: shrIpAdarAjaru

lAli gOviMda lAli kausalyA
bAla shrIrAma lAli /pa/

lAli munivaMdya lAli jAnakI
ramaNa shrIrAma lAli /anupa/

kanakaratnagaLalli kAlgaLane hUDi
nAlku vEdagaLannu sarapaNiya mADi
anEka bhUmaMDalava halageya mADi
shrIkAMtanuyyAleyanu viracisidaru /1/

AshcaryajanakavAgi nirmisida
pacceya toTTilalli
acyutAnaMtaniralu tUgidaru
matsyAvatAra hariya /2/

dharmasthApakanu eMdu nirvadhika
nirmala caritraneMdu
marma karmagaLa pADi tUgidaru
kUrmAvatAra hariya  /3/

sarasijAkShiyarellaru janavashI
kara divya rUpaneMdu
parama haruShadali pADi tUgidaru
varAhAvatAra hariya /4/

kari kuMbhagaLa pOluva kucadalli
hAra padakavu hoLeyalu
varavarNiniyaru pADi tUgidaru
narasiMhAvatAra hariya /5/

bhAmAmaNiyarellaru yaduvaMsha
sOmanivaneMdu pogaLi
nEmadiMdali pADi tUgidaru
vAmanAvatAra hariya /6/

sAmajavaradaneMdu atuLa bhRugu
rAmAvatAraneMdu
shrImadAnaMda hariya tUgidaru
prEmAtirEkadiMda /7/

kAmanige kAmaneMdu surasArva
bhauma guNadhAmaneMdu
vAmanEtreyaru pADi tUgidaru
rAmAvatAra hariya /8/

sRuShTiya kartaneMdu jagadoLage
shiShTa saMtuShTaneMdu
dRuShTAMtarahitaneMdu tUgidaru
kRuShNAvatAra hariya /9/

vRuddha nAriyarellaru jagadoLage pra
siddha nivaneMdu pogaLi
baddhAnurAgadiMda tUgidaru
bauddhAvatAra hariya  /10/

ThaLaThaLatkAradiMda raMjisuva
malayajalEpadiMda
jalajagaMdhiyaru pADi tUgidaru
kalkyAvatAra hariya  /11/

kanakamaya KacitavAda talpadali
vanajabhava janakaniralu
vanajanAbhanna pADi tUgidaru
vanitAmaNiyarellaru /12/

padmarAgava pOluva haripAda
padmavanu tamma hRudaya
padmadali nillisi pADi tUgidaru
padminI bhAminiyaru /13/

hastabhUShaNa mereyalu divyatara
hastalAGavagaLiMda
hastagaLa piDidukoMDu tUgidaru
hastinI bhAminiyaru /14/

mattagajagAminiyaru divyatara
citra vastragaLanuTTu
citta saMtOShadiMda tUgidaru
cittinI bhAminiyaru /15/

kaMkaNa dhvanigaLiMda raMjisuva
kiMkiNI svaragaLiMda
paMkajAkShiyaru pADi tUgidaru
shaMkinI bhAminiyaru /16/

cokka kastUri paMkadiM raMjisuva
makarikA patra baredu
likucastaniyaru pADi tUgidaru
akaLaMka carita hariya /17/

pallavAdhareyarella I shishuvu
tulyavarjitavenutali
sallalitagAnadiMda tUgidaru
kalyANi rAgadiMda /18/

AnaMda sadanadoLage gOpiyaru
A naMdasutana kaMDu
AnaMdabharitarAgi tUgidaru
AnaMdabhairaviyiMda /19/

dEvAdidEvaneMdu I shishuva
bhAvanAtItaneMdu
dEvagaMdharvaru pADi tUgidaru
dEvagAMdhAradiMda /20/

nIla ghanalIla jO jO karuNAla
vAla shrIkRuShNa jO jO
lIlAvatAra jO jO paramAtma
bAlagOpAla jO jO /21/

iMdudharamitra jO jO shIkRuShNa
iMdu ravi nEtra jO jO
iMDu kulaputra jO jO paramAtma
iMdirAramaNa jO jO /22/


tuMga bhavabhaMga jO jO paramAtma
raMga kRupAMga jO jO
maMgaLApAMga jO jO mOhanAMga
raMgaviThalane jO jO  /23/
****

just scroll down for other devaranama