Showing posts with label ಬಲ್ಲನೆಂಬೊ ಮಮಕಾರ ಬಿಡು ಎಲ್ಲೆಲ್ಲಿ ಇರುವ ಶ್ರೀಹರಿಯ vijayaramachandra vittala. Show all posts
Showing posts with label ಬಲ್ಲನೆಂಬೊ ಮಮಕಾರ ಬಿಡು ಎಲ್ಲೆಲ್ಲಿ ಇರುವ ಶ್ರೀಹರಿಯ vijayaramachandra vittala. Show all posts

Friday, 6 August 2021

ಬಲ್ಲನೆಂಬೊ ಮಮಕಾರ ಬಿಡು ಎಲ್ಲೆಲ್ಲಿ ಇರುವ ಶ್ರೀಹರಿಯ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಬಲ್ಲನೆಂಬೊ ಮಮಕಾರ ಬಿಡು

ಎಲ್ಲೆಲ್ಲಿ ಇರುವ ಶ್ರೀಹರಿಯ ನೋಡು

ಒಲಿಸಿ ಒಲಿಸಲು ನಿಲುವುದು ಜಿತವಾಗಿ ಹಾಡು ಪ


ನೋಡಿದ್ದನ್ನೆ ನೀ ನೋಡು | ನಿನ್ನೆ

ನೋಡಿದೆನೆಂಬೊ ಖೋಡ್ಯಾಲಸ್ಯ ಬಿಡು

ಹುಡುಕಿ ತತ್ವಂಗಳ ಸಮನಾಗಿ ಜೋಡು

ನಡುವೆ ತತ್ಪತಿಯ ಒಡೆಯನ ಇಡು 1


ಕೇಳಿದ್ದನ್ನೇ ನೀ ಕೇಳು | ನಿನ್ನ

ಆಳುವರ ಪಾದಕೆ ಬೀಳು

ಹಳೆವ ವಾರ್ತಿಗೆ ಅಳುಕುವ ಮನ ಸೀಳು

ಬಲು ಪರಿಯಲಿ ಕಾಮ ಕ್ರೋಧಂಗಳ ಹೂಳು 2


ಅಭಿವೃದ್ಧೀಗೆ ಬರುವುದು ಲೋಭ

ನಿಭಾಯಿಸಲು ಅದು ಹೊರುವುದು ಲಾಭ

ಸಭೆಯೊಳು ಪೇಳಬ್ಯಾಡ ಸ್ವಭಾವ

ಇಭವರದನಾಗುವ ಅಭಾವ 3


ನರ ಜನ್ಮವೇ ಬರುವೊದು ಕಷ್ಟ

ಹರಿ ಸರ್ವೋತ್ತಮೆಂಬೋದೆ ಇಷ್ಟ

ಸ್ಥಿರವಲ್ಲ ತ್ವರಿತ ಮಾಡೆಲೊ ಭ್ರಷ್ಟ

ಅರಿತವರ ಕೂಡೆ ನಿರತಾಡು ಶ್ರೇಷ್ಠ 4


ಅಂಕುರಾವು ಪುಟ್ಟಿಹದೀಗ

ಬಿಂಕದಿಂ ಪರಿಪಾಲಿಸೊ ಬೇಗ

ಶಂಕರನುತ ವಿಜಯ ರಾಮಚಂದ್ರವಿಠಲನ ಪದ-

ಪಂಕಜಕೆ ಅಳಿಯಂತೆ ಸಾಗು 5

***