Showing posts with label ವಾಸುದೇವನಾಶ್ರಯಿಸದಿಹ ಉಪಾಸನ mahipati. Show all posts
Showing posts with label ವಾಸುದೇವನಾಶ್ರಯಿಸದಿಹ ಉಪಾಸನ mahipati. Show all posts

Thursday, 12 December 2019

ವಾಸುದೇವನಾಶ್ರಯಿಸದಿಹ ಉಪಾಸನ ankita mahipati

ಖಮಾಜ್ ರಾಗ ದಾದರಾ ತಾಳ

ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ
ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ||ಧ್ರುವ||

ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ
ಬದಿಯಲಿಹ ವಸ್ತುಗಾಣದ ಜ್ಞಾನವ್ಯಾತಕೆ
ಉದರಕುದಿಯು ಶಾಂತಿಹೊಂದದ ಸಾಧನೆ ಯಾತಕೆ
ಬುಧರ ಸೇವೆಗೊದಗದಿಹ ಸ್ವಧನವ್ಯಾತಕೆ ||೧||

ಭಾವ ನೆಲೆಗೊಳ್ಳದಿಹ ಭಕುತಿದ್ಯಾತಕೆ
ಕಾವನಯ್ಯನ ಕಾಣದಿಹ ಯುಕುತಿದ್ಯಾತಕೆ
ದೇವದೇವನ ಸೇವೆಗಲ್ಲದ ಶಕುತಿದ್ಯಾತಕೆ
ಹ್ಯಾವ ಹೆಮ್ಮೆ ಅಳಿಯದಿಹ ವಿರಕ್ತಿ ಯಾತಕೆ ||೨||

ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ
ಸತ್ವಗುಣದಲಾಚರಿಸದಿಹ ಕವಿತ್ವವ್ಯಾತಕೆ
ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ
ವಿತ್ತದಾಸೆಯು ಅಳಿಯದಿಹ ಸಿದ್ಧತ್ವವ್ಯಾತಕೆ ||೩||

ನೀತಿಮಾರ್ಗ ಅರಿಯದಿಹ ರೀತಿ ಅದ್ಯಾತಕೆ
ಮಾತು ಮಿತಿಗಳಿಲ್ಲದವನ ಧಾತುವ್ಯಾತಕೆ
ಪ್ರೀತಿ ಆದರಳಿದ ಅಮೃತ ಊಟವ್ಯಾತಕೆ
ಜ್ಯೋತಿ ತನ್ನೊಳರಿಯದತಿ ಉತ್ತಮವ್ಯಾತಕೆ ||೪||

ಮನವು ಸ್ಥಿರಗೊಳ್ಳದ ನಿತ್ಯ ಶ್ರವಣವ್ಯಾತಕೆ
ನೆನವು ನೆಲೆಗೊಳ್ಳದಿಹ ಮನನವ್ಯಾತಕೆ
ತನುವಿನಲ್ಲಿ ಘನವು ಕಾಣದನುಭವ್ಯಾತಕೆ
ದೀನ ಮಹಿಪತಿಸ್ವಾಮಿಗಾಣದ ಜನುಮವ್ಯಾತಕೆ ||೫||
****

ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಪ  


ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ 1 

ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ 2 

ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ 3 

ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ ಅಮೃತ ಊಟವ್ಯಾತಕೆ ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ 4 

ನಿತ್ಯ ಶ್ರವಣವ್ಯಾತಕೆ ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ ತನುವಿನಲ್ಲಿ ಘನವು ಕಾಣದನುಭವ್ಯಾತಕೆ ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ 5

****