by ಗಲಗಲಿಅವ್ವನವರು
ಮೀಸಲ ಗುಣದೆಯರನೆಲ್ಲ ಮೋಸಗೈಸಿ ಕೊಳಲನೂದಿರಾಸಕ್ರೀಡೆ ಮಾಡಿದಾಭಾಸಬಹಳಯ್ಯಾ ಪ.
ನೀನೆ ಎಂದವರೆದೊಡ್ಡ ಕಾನನದಿ ಬಿಟ್ಟು ಒಬ್ಬಮಾನಿನಿಯಜರಿದುನಡೆದಿ ಇನ್ನೇನು ಉಚಿತವಯ್ಯ ಕೃಷ್ಣ1
ಎಳೆಯಬಳ್ಳಿ ಗಿಳಿಪಕ್ಷಿನಳಿನನಾಭನ ಕಂಡಿರೇನನಳಿನಮುಖಿಯರೆಲ್ಲ ತಿರುಗಿ ಬಳಲಿ ನಿಂತಾರೊ ಕೃಷ್ಣ2
ಸೂಸು ಮಲ್ಲಿಗೆ ಸಂಪಿಗೆ ಜಾಜಿ ಹಾಸಿಕೆಯ ಮಾಡಿ ಅವಳಸೋಸುಪೂರೈಸುವ ಬಗಿಯು ಶ್ರೀಶ ರಮಸಿದಿಯೋ ಕೃಷ್ಣ3
ಚಂದ್ರವದನೆಗೆ ಅಂಗದಲ್ಲಿ ಗಂಧ ಕಸ್ತೂರಿ ಕುಂಕುಮವಿಟ್ಟುಮಂದಾರಮಲ್ಲಿಗೆಯ ಮುಡಿಸಿ ಆನಂದ ಬಡಿಸಿದಿಯೊ ಕೃಷ್ಣ4
ಇಂದಿರೇಶನ ಕಾಣದಲೆ ನೊಂದವರ ಮ್ಯಾಲೆ ಪರಿಮಳತಂದು ಹಾಕಿದ ವಾಯು ಪಾಪಿ ಎಂದು ಬಯ್ಯುತ ಕೃಷ್ಣ 5
ತಂದು ಕನ್ನಡಿ ನಿಲ್ಲಿಸಿ ಒಳಗೆ ಚಂದ್ರನ್ಹೊಗಿಸಿಮ್ಯಾಲೆಕಲ್ಲುತಂದು ಹಾಕಿ ಅವನ ನಾವು ಕೊಂದರೆ ಪಾಪಿಲ್ಲ ಎನುತ6
ಬೆಂದವರ ಮ್ಯಾಲೆ ಪರಿಮಳ ಚಂದ್ರನುಡಿಸಿದ ಕಂದನಿವನುಹಿಂದಿನ ವೈರವೇ ಸವತಿ ಇಂದಿನವನೆಂದು ಭವಿತ 7
ಮಲ್ಲಿಗೆ ಸಂಪಿಗೆ ಜಾಜಿ ಚಲ್ವ ತುಳಸಿ ಯಮುನಾದೇವಿಫುಲ್ಲನಾಭನ ಕಂಡಿರೇನ ನಲ್ಲೆಯರು ಹಲಬುತ ಕೃಷ್ಣ 8
ನೋಡುನೋಡುಕೆಳದಿ ಇಲ್ಲೆ ಜೋಡು ಹೆಜ್ಜಿ ತೋರುತಾವಮಾಡಿ ಕಪಟದಿ ರಂಗನ ಒಬ್ಬಳು ಓಡಿಸಿ ಒಯ್ದಾಳೆ ಎನುv 9
ನಗಧರಒಬ್ಬ ಬಾಲೆಯಳ ಜಿಗಿದು ಎತ್ತಿದ ಹೆಜ್ಜೆ ನೋಡಿಸಿಗಲಿ ಅವಳು ರಂಗನ ಬೆರೆದ ಬಗಿಯ ತೋರೆನುತ ಕೃಷ್ಣ 10
ಹಿಂಡುನಾರಿಯರೆಲ್ಲ ಕೂಡಿಕೊಂಡು ಅವಳ ಮಂಡೆಕುಕ್ಕಿಪುಂಡರಿಕಾಕ್ಷನ ತೋರೆದಿಂಡೆಮನುಜಳೆ ಎನುತ11
ಇಷ್ಟು ನಾರಿಯರೊಳು ರಾಧೆ ಶ್ರೇಷ್ಠಳೆಂದು ಗರುವಿಸ್ಯಾಳುಅಷ್ಟರೊಳಗೆ ಅವಳ ನೀನು ಬಿಟ್ಟು ಪೋಗಿದ್ಯೊ ಕೃಷ್ಣ 12
ಗಲ್ಲಕುಕ್ಕಿ ಅಂಜಿ ಅವಳು ಎಲ್ಲ ನಾರಿಯರಿಗೆ ಎರಗಿಫುಲ್ಲನಾಭಮಾಡಿದಪಾಟನಎಲ್ಲಿ ಉಸಿರಲೆ ಎನುತ13
ವಿಧಿಗೆ ದಯವಿಲ್ಲ ನಮ್ಮ ಚದುರ ರಂಗನ ಅಗಲಿಸಿತುಮದನಬಾಣ ನೆಟ್ಟಿತೆಂದು ಸುದತೆಯರು ಹಲಬುತ ಕೃಷ್ಣ14
ಶ್ರೀಶ ರಾಮೇಶನ ಯಾವ ದೇಶದಲ್ಲಿ ಹುಡುಕಲೆಂದುಕ್ಲೇಶಬಡಲು ಕೆಲದೆಯರೆಲ್ಲ ಸರ್ವೇಶ ಬಂದೆಂದ ಪಾರ್ಥ15
********