ಕೃತಿ ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಕಂಡೆ ಕಣ್ಣಾರೆ ನನ್ನ ಸ್ವಾಮಿಯ ಬಂದ ಜನ್ಮಸಾಫಲ್ಯವಾಯಿತೀಗ P
ಮುಂಬಿಗಾಗ್ಯಾವೆನ್ನೊಳು ಸುಉಲ್ಹಾಸ ಅಂಬುಜಾಕ್ಷನ ಕಂಡೆ ಸುಪ್ರಕಾಶ ತುಂಬಿತುಳುಕುತಲ್ಯದ ಬಲುಹರುಷ ಇಂಬುಸಾಲದು ಬ್ರಹ್ಮಾಂಡ ಆಕಾಶ 1
ಎನ್ನಹೃದಯ ಮಂದಿರದೊಳು ನೋಡಿ ತನ್ನಿಂದ ತಾಂ ಬಂದನು ದಯಮಾಡಿ ಕಣ್ಣುಪಾರಣೆಗೈಸಿದೆನ್ನ ಕೂಡಿ ಇನ್ನು ದಣಿಯದೆನ್ನಮನ ಕೊಂಡಾಡಿ 2
ಘನ ಸುಖದೋರುತದೆ ಎನಗಿಂದು ಭಾನುಕೋಟಿ ಉದಯವಾದನೆಂದು ದೀನ ಮಹಿಪತಿಸ್ವಾಮಿ ಕೃಪಾಸಿಂಧು ಮನೋಹರ ಮಾಡಿದ ತಾನೆ ಬಂದು 3
***