Wednesday, 1 September 2021

ಇಂದು ಕಂಡೆ ಕಣ್ಣಾರೆ ನನ್ನ ಸ್ವಾಮಿಯ ಬಂದ ಜನ್ಮಸಾಫಲ್ಯ ankita mahipati

ಕೃತಿ ಕಾಖಂಡಕಿ ಶ್ರೀ ಮಹಿಪತಿರಾಯರು

ಇಂದು ಕಂಡೆ ಕಣ್ಣಾರೆ ನನ್ನ ಸ್ವಾಮಿಯ ಬಂದ ಜನ್ಮಸಾಫಲ್ಯವಾಯಿತೀಗ P

ಮುಂಬಿಗಾಗ್ಯಾವೆನ್ನೊಳು ಸುಉಲ್ಹಾಸ ಅಂಬುಜಾಕ್ಷನ ಕಂಡೆ ಸುಪ್ರಕಾಶ ತುಂಬಿತುಳುಕುತಲ್ಯದ ಬಲುಹರುಷ ಇಂಬುಸಾಲದು ಬ್ರಹ್ಮಾಂಡ ಆಕಾಶ 1 

ಎನ್ನಹೃದಯ ಮಂದಿರದೊಳು ನೋಡಿ ತನ್ನಿಂದ ತಾಂ ಬಂದನು ದಯಮಾಡಿ ಕಣ್ಣುಪಾರಣೆಗೈಸಿದೆನ್ನ ಕೂಡಿ ಇನ್ನು ದಣಿಯದೆನ್ನಮನ ಕೊಂಡಾಡಿ 2 

ಘನ ಸುಖದೋರುತದೆ ಎನಗಿಂದು ಭಾನುಕೋಟಿ ಉದಯವಾದನೆಂದು ದೀನ ಮಹಿಪತಿಸ್ವಾಮಿ ಕೃಪಾಸಿಂಧು ಮನೋಹರ ಮಾಡಿದ ತಾನೆ ಬಂದು 3

***


No comments:

Post a Comment