Showing posts with label ವಾದಿರಾಜ ಸುರರಾಜ ತಾನಾದರೆ gurujagannatha vittala VADIRAJA SURARAJA TAANAADARE VADIRAJA TEERTHA STUTIH. Show all posts
Showing posts with label ವಾದಿರಾಜ ಸುರರಾಜ ತಾನಾದರೆ gurujagannatha vittala VADIRAJA SURARAJA TAANAADARE VADIRAJA TEERTHA STUTIH. Show all posts

Saturday, 11 December 2021

ವಾದಿರಾಜ ಸುರರಾಜ ತಾನಾದರೆ ankita gurujagannatha vittala VADIRAJA SURARAJA TAANAADARE VADIRAJA TEERTHA STUTIH



ವಾದಿರಾಜ ಸುರರಾಜ ತಾನಾದರೆ
ಮೇದಿನಿಯೊಳಗಿಹನ್ಯಾಕೆ ? ||pa||

ಮೇದಿನಿ ಸುರರಿಗೆ ಮೋದ ಕೊಡೋದಕೆ
ಸ್ವಾದಿಯೊಳಗೆ ನಿಂತಿಹನದಕೇ ||a.pa||

ಋಜುಗುಣದೊಡೆಯನು ತ್ರಿಜಗಾಧೀಶನು
ಭುಜಗಾಂಚಿತನಾದ್ಯಾಕೆ ?
ಭಜಿಸುವ ಜನ ಭೂಭುಜ ತಾನೆನಿಸಿ
ಅಜನ ಪದ ತಾ ಸೇರೋದಕೆ ||1||

ಸುರತತಿ ಸನ್ನುತ ಸರಸಿಜಭವ ಪದ –
ಕರಹನು ನರನ್ಯಾಕಾದಾ ?
ಧರೆಸುರರಿಗೆ ತನ್ನ ಕರುಹನು ತಿಳಿಸೀ
ಪರಿಪರಿ ಮಹಿಮೆಯ ತೋರಿಸಿದ ||2||

ವೀತಭಯನು ತಾನೀತೆರ ಜಗದಿ
ಯಾತಕೆ ಯತಿಯಾದ ?
ದಾತ ಗುರುಜಗನ್ನಾಥ ವಿಠಲ ಗುಣ
ಖ್ಯಾತಿಯ ತಾಮಾಡಿದ ||3|
***

by ಗುರುಜಗನ್ನಾಥದಾಸರು
ವಾದಿರಾಜಸುರರಾಜತಾನಾದರೆ ಮೇದಿನಿಯೊಳಗಿಹನ್ಯಾಕೆ ? ಪ

ಮೇದಿನಿಸುರರಿಗೆಮೋದಕೊಡೋದಕೆಸ್ವಾದಿಯೊಳಗೆ ನಿಂತಿಹನದಕೇ ಅ.ಪ

ಅಜನ ಪದ ತಾ ಸೇರೋದಕೆ 1

ಸುರತತಿಸನ್ನುತಸರಸಿಜಭವ ಪದ-ಪರಿಪರಿ ಮಹಿಮೆಯ ತೋರಿಸಿದ 2

ವೀತಭಯನು ತಾನೀತೆರ ಜಗದಿದಾತಗುರುಜಗನ್ನಾಥ ವಿಠಲಗುಣಖ್ಯಾತಿಯ ತಾಮಾಡಿದ 3
****