..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ನಾಮಗಿರಿ ಅಮ್ಮ ಪ
ಶ್ರೀ ನಾಮಗಿರಿ ಅಮ್ಮ ನಿನ್ನ ನಾ ನಂಬಿದೆ ಸಲಹೆನ್ನ
ಶ್ರೀ ನರಸಿಂಹನ ನಿಜಸತಿ ಶುಭಕರಿ
ವನರುಹಜಾಂಡದ ಜನನಿ ಭೂ ಅಂಭ್ರಣಿ ಅ.ಪ
ಬೊಮ್ಮನ ಪ್ರಳಯದಲಿ ಕಮಲಜ ಆಲದ ಎಲೆಯಾಗಿ
ಸ್ವಾಮಿ ಸ್ವಾಪ್ಯನ ಬಹುನಂದದಿ ಸ್ತುತಿಸಿ
ಸಮಸ್ತಜಗತ್ ಸತ್ಸøಷ್ಟಿಯ ಗೈಸಿದೆ 1
ಕ್ಷೀರಾಂಬುಧಿಯಿಂದ ತೋರಿ ನೀ ಸರ್ವಜನರ ಮುಂದೆ
ನಾರ ಅಜಿತ ಸರ್ವೋತ್ತಮ ಹರಿಗೆ ನೀ
ನಿರಂತರ ನಿಜಸತಿಯೆಂದು ಪ್ರಕಟಿಸಿದೆ 2
ಘನ ಬಾಲಭಕ್ತನಿಗೆ ಒಲಿದ ವೃತಿತಿಜಾಸನ ಪಿತನು
ಹನುಮವಂದಿತ ಶ್ರೀ ಪ್ರಸನ್ನ ಶ್ರೀನಿವಾಸ
ನರಸಿಂಹನ ಸಹ ಭಕ್ತಜನರ ಪೊರೆವೆ 3
***