ಮನೋಮಲಹರವಾಗುದು ಗುರು ಬೋಧದಿಂದ ತನ್ನ ತಾಂ ತಿಳಿಯಲು ಶುದ್ಧ ಬುಧ ಆಹಿರಿ ಪ
ಅಂತರಂಗವು ನೋಡಿ ಜರೆವದು ಬಹಿರವಿ ಬೆರೆದು ನೋಡಿಲು ಘನವಸಂತವು ಗುರುಹಸ್ತ ಸ್ಪರ್ಶದಿಂದಲಿ ಕಲ್ಯಾಣ ಅರಿಯಲಾತ್ಮಾನುಭವ ಮುಕ್ತಿಗೆ ದಾರಿಯಯ್ಯ 1
ಸಾಧನವ ಮಾಡಿ ಸದ್ಗತಿಯಕಾಂಬೋದವು ಧನ್ಯ ಧನ್ಯವಾಹುದು ಜ್ಞಾನುಪದೇಶಲಿ ತಿಳಿಯಲಗಾಧ ಬಳಿಲಿ ಶ್ರೀಗುರುವಿನ ಸಕಲಾಭರಣ ಇದೇ ಸದ್ಗುರು ಕೃಪೆಯಯ್ಯ2
ಧ್ಯಾಯಿಸುವ ಆತ್ಮಾರಾಮ ಕ್ರಿಯವರಿದು ಪಯಸ್ವನಿ ಜಿಹ್ವದಲಿ ಗುರುಸ್ಮರಣೆಯು ನಾಟಿ ಗುರುಪಾದ ಹೃದಯದಲಿ ಸಾಳಂಗವನು ಮಾಡಿ ಪಾವನ್ನವಾದ ಮಹಿಪತಿ ಗುರುವಿನ ಪಾಡಿ3
***