Showing posts with label ನನಗೆ ಮನಕೆ ಬಡಿದಾಟೆಳೆದಾಟ prasannavenkata. Show all posts
Showing posts with label ನನಗೆ ಮನಕೆ ಬಡಿದಾಟೆಳೆದಾಟ prasannavenkata. Show all posts

Tuesday, 12 November 2019

ನನಗೆ ಮನಕೆ ಬಡಿದಾಟೆಳೆದಾಟ ankita prasannavenkata

by ಪ್ರಸನ್ನವೆಂಕಟದಾಸರು
ನನಗೆ ಮನಕೆ ಬಡಿದಾಟೆಳೆದಾಟ ಶ್ರೀಸನಕಾದಿವಂದ್ಯ ಬಿಡಿಸಿ ಕಾಯೊದಾತ ಪ.

ಸಲಿಲಸ್ನಾನವ ಮಾಡಿ ಊಧ್ರ್ವ ತಿಲಕವನಿಟ್ಟುನಳಿನಾಕ್ಷ ನಿನ್ನಂಘ್ರಿ ಜಪಿಸೆಂದರೆಛಲದಿಂದ ವಿಹಿತವಲ್ಲದ ದಾರಿಗೊಯ್ದೆನ್ನತೊಳಲಿಸಿ ನೆಲೆಗಾಣಿಸದೆ ಛಲವಿಡಿದಿದೆ 

 ಕೇಳದಾಡಿಕೊಂಡರೆ ಕೇಳದೀಡಾಡಿ `ಬಿಸುಟೆನ್ನ ದಣಿಸುತಿದೆನೋಡುನಾನಾಕ್ರೋಶ ಮಾಡಿದರಂಜದುಬಾಡಿ ಬಳಲಿದೆನೆನ್ನ ಕರುಣಿಲ್ಲವಿದಕೆ 2

ಮನಪಶುಕಟ್ಟಲು ಜ್ಞಾನಧಂಗಡವಿಲ್ಲಘನವೈರಾಗ್ಯದ ಕಟ್ಟು ದೃಢವಿಲ್ಲವುಮಿನುಗುವ ಭಕುತ್ಯೆಂಬ ಎಳೆಹುಲ್ಲಿನಾಸಿಲ್ಲನೀನೆ ವಶಮಾಡಿಕೊ ಪ್ರಸನ್ವೆಂಕಟೇಶ 3
********